ಹುಟ್ಟುಹಬ್ಬದ ದಿನದಂದೂ 'ಮಾರ್ಟಿನ್' ಶೂಟಿಂಗ್ ನಲ್ಲಿ ತೊಡಗಿಕೊಂಡ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
ಮಾರ್ಟಿನ್ ಸಿನಿಮಾವನ್ನು ಎ.ಪಿ ಅರ್ಜುನ್ ಅವರು ನಿರ್ದೇಶಿಸುತ್ತಿದ್ದಾರೆ. ಅದ್ಧೂರಿ ಸಿನಿಮಾ ನಂತರ ನಿರ್ದೇಶಕ ಅರ್ಜುನ್ ಮತ್ತು ಧ್ರುವ ಸರ್ಜಾ ಮಾರ್ಟಿನ್ ಮೂಲಕ ಮತ್ತೆ ಒಂದಾಗಿದ್ದಾರೆ.

ಬೆಂಗಳೂರು: ನಟ ಧ್ರುವ ಸರ್ಜಾ ಇಂದು ತಮ್ಮ ಹುಟ್ಟುಹಬ್ಬವನ್ನು ಮಾರ್ಟಿನ್ ಶೂಟಿಂಗ್ ಸ್ಥಳದಲ್ಲಿಯೇ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಸಂದೇಶ ಪೋಸ್ಟ್ ಮಾಡಿರುವ ಧ್ರುವ ಸರ್ಜಾ ತಾವು ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ತಮ್ಮ ಮನೆಯ ಮುಂದೆ ಗುಂಪುಗೂಡಬಾರದು ಎಂದು ವಿನಂತಿಸಿಕೊಂಡಿದ್ದಾರೆ.
ಇದೇ ವೇಳೆ ಧ್ರುವ ಸರ್ಜಾ ಹುಟ್ಟುಹಬ್ಬ ಪ್ರಯುಕ್ತ ಮಾರ್ಟಿನ್ ಚಿತ್ರತಂಡ ಧ್ರುವ ಸರ್ಜಾ ಅವರ ಸ್ಪೆಷಲ್ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ.
ಮಾರ್ಟಿನ್ ಸಿನಿಮಾವನ್ನು ಎ.ಪಿ ಅರ್ಜುನ್ ಅವರು ನಿರ್ದೇಶಿಸುತ್ತಿದ್ದಾರೆ. ಅಗಸ್ಟ್ ತಿಂಗಳಿನಿಂದ ಚಿತ್ರದ ಶೂಟಿಂಗ್ ಬಿಡುವಿಲ್ಲದಂತೆ ಸಾಗಿದೆ. ಅದ್ಧೂರಿ ಸಿನಿಮಾ ನಂತರ ನಿರ್ದೇಶಕ ಅರ್ಜುನ್ ಮತ್ತು ಧ್ರುವ ಸರ್ಜಾ ಮಾರ್ಟಿನ್ ಮೂಲಕ ಮತ್ತೆ ಒಂದಾಗಿದ್ದಾರೆ.
ಮುಂದೆ ಧ್ರುವ ಸರ್ಜಾ ಅವರು ನಿರ್ದೇಶಕ ಪ್ರೇಮ್, ಜಗ್ಗು ದಾದ ನಿರ್ದೇಶಕ ರಾಘವೇಂದ್ರ ಹೆಗಡೆ ಮತ್ತು ಭಜರಂಗಿ ನಿರ್ದೇಶಕ ಹರ್ಷ ಅವರ ಸಿನಿಮಾಗಳಲ್ಲಿ ನಟಿಸಲಿದ್ದಾರೆ.
Related Article
ಲಿವಿನ್ ರಿಲೇಶನ್ ಶಿಪ್ ಗಳನ್ನು ಮದುವೆಯಂತೆಯೇ ನೋಡಬೇಕು: ಚಂದನವನಕ್ಕೆ ಗಂಧದಗುಡಿ ನಾಯಕನ ಮೊಮ್ಮಗಳು ಭರ್ಜರಿ ಎಂಟ್ರಿ
'ನೀರ್ ದೋಸೆ' ಹುಯ್ದಿದ್ದ ನಿರ್ದೇಶಕ ವಿಜಯಪ್ರಸಾದ್ 'ಪರಿಮಳ ಲಾಡ್ಜ್' ಸಿನಿಮಾಗೆ ಯೋಗಿ ನಾಯಕ
ರಾಜ್ ಬಿ. ಶೆಟ್ಟಿ 'ಗರುಡ ಗಮನ ವೃಷಭ ವಾಹನ' ಸಿನಿಮಾ ರಕ್ಷಿತ್ ಶೆಟ್ಟಿ ಪರಂವಾಹ್ ಸ್ಟುಡಿಯೋಸ್ ಬ್ಯಾನರ್ ಅಡಿ ಬಿಡುಗಡೆ
ಹಿಂದುತ್ವದ ಜತೆ ಮುಂದುತ್ವವೂ ಬೇಕು; ತಮಿಳರು ತೋರಿದ ಧೈರ್ಯ ನಮ್ಮಲ್ಲಿಲ್ಲ: ಹಂಸಲೇಖ
ಕರ್ನಾಟಕದ ಶಿಲ್ಪಾ, ರಶ್ಮಿ, ಸುಪ್ರೀತಾ, ಕಾವ್ಯಾಗೆ ಮಿಸೆಸ್ ಇಂಡಿಯಾ ಕಿರೀಟ
ಸೂರಿ 'ಬ್ಯಾಡ್ ಮ್ಯಾನರ್ಸ್' ನಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿಷೇಕ್!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


