ಕ್ಯಾಬ್ ಚಾಲಕ ಎಸಿ ಆನ್ ಮಾಡಿಲ್ಲ ಅಂತ ನಟಿ ಸಂಜನಾ ಕಿರಿಕ್
ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದು, ಓಲಾದಲ್ಲಿ ತೆರಳುತ್ತಿದ್ದಾಗ ಕ್ಯಾಬ್‌ನಲ್ಲಿ ಎಸಿ ಆನ್ ಮಾಡಿಲ್ಲ ಎಂದು ಟ್ವೀಟ್ ಮಾಡಿ ಆರೋಪಿಸಿದ್ದಾರೆ.

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದು, ಓಲಾದಲ್ಲಿ ತೆರಳುತ್ತಿದ್ದಾಗ ಕ್ಯಾಬ್‌ನಲ್ಲಿ ಎಸಿ ಆನ್ ಮಾಡಿಲ್ಲ ಎಂದು ಟ್ವೀಟ್ ಮಾಡಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಕಾರ್ ನಂಬರ್ ಕೆಎ 50 8960ದಲ್ಲಿ ಸೂಸೈ ಮಣಿ ಎಂಬ ಚಾಲಕನಿದ್ದ, ಬೆಳ್ಳಂಬೆಳಿಗ್ಗೆಯೇ ಚಾಲಕನಿಂದ ಕಿರಿಕಿರಿ ಅನುಭವಿಸಿದೆ. ಕ್ಯಾಬ್‌ನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದೆವು. ಆದರೆ, ಎಸಿ ಹಾಕಿ ಎಂದರೇ ಚಾಲಕ ಮೊದಲು ತಕರಾರು ಮಾಡಿದ. ನಂತರ ಕೇವಲ ಮೊದಲನೇ ಸ್ಪೀಡ್‌ನಲ್ಲಿ ಎಸಿ ಹಾಕಿದ್ದ.

ಎಸಿ ಕಾರ್ ರೇಟ್ ಪಡೆದು ಎಸಿ ಹಾಕಲು ನಿರಾಕರಿಸಿದರೇ ಹೇಗೆ? ಕಾರಿನ ಕಿಟಿಕಿಯ ಭಾಗವೂ ಸಹ ಮುರಿದು ಹೋಗಿತ್ತು. ಇದರಿಂದ ನಮಗೆ ಉಸಿರುಗಟ್ಟಿದಂತಾಗಿತ್ತು. ಆದ್ದರಿಂದ ಎಸಿ ಜಾಸ್ತಿ ಮಾಡಲು ಕೋರಿದಾಗ ಅವಾಜ್ ಹಾಕಿದ. ಅಲ್ಲದೇ, ದಾರಿ ಮಧ್ಯದಲ್ಲೇ ಇಳಿಸಿ ಬಿಡುತ್ತೇನೆ ಎಂದು ಹೆದರಿಸಿದ ಎಂದು ಆರೋಪಿಸಿದ್ದಾರೆ.

ಆದರೆ, ಘಟನೆ ನಡೆದ ಸಂದರ್ಭದಲ್ಲಿ ಕಾರಿನಲ್ಲಿ ನಡೆದಿದ್ದೇನು? ಸಂಜನಾ ಹೇಗೆ ವರ್ತಿಸಿದ್ದರು. ಹೇಗೆಲ್ಲಾ ಕಿರುಚಾಡಿದ್ದರು ಎಂಬ ವಿಡಿಯೋ ಲಭ್ಯವಾಗಿದೆ. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ ನಟಿ ಸಂಜನಾ ವಿರುದ್ಧ ದೂರು ಕೊಡಲು ಕ್ಯಾಬ್ ಚಾಲಕ ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


