ಸಿನಿಮಾ ಸುದ್ದಿ

25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಒಪ್ಪುವ ಮುನ್ನ 84 ಸ್ಕ್ರಿಪ್ಟ್ ತಿರಸ್ಕರಿಸಿದ್ದ ಪ್ರೇಮ್: ಚಿತ್ರರಂಗ, ಪ್ರೇಕ್ಷಕರ ಪ್ರೋತ್ಸಾಹಕ್ಕೆ ಚಿರಋಣಿ

ತಮಗೆ ಅವಕಾಶ ಕೊಟ್ಟ ಎಲ್ಲಾ ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಚಿತ್ರರಂಗದ ಪ್ರತಿಯೊಬ್ಬರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ. ಸಿನಿಮಾ ಮಂದಿ ಮತ್ತು ಪ್ರೇಕ್ಷಕರ ಪ್ರೋತ್ಸಾಹ ಇಲ್ಲದಿದ್ದರೆ ನಾನಿಂದು ಇಲ್ಲಿರುತ್ತಿರಲಿಲ್ಲ ಎಂದು ತಮ್ಮ ಈ ಸಿನಿಪಯಣದಲ್ಲಿ ನೆರವಾದ ಎಲ್ಲರನ್ನೂ ಪ್ರೇಮ್ ಸ್ಮರಿಸುತ್ತಾರೆ.

25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಒಪ್ಪುವ ಮುನ್ನ 84 ಸ್ಕ್ರಿಪ್ಟ್ ತಿರಸ್ಕರಿಸಿದ್ದ ಪ್ರೇಮ್: ಚಿತ್ರರಂಗ, ಪ್ರೇಕ್ಷಕರ ಪ್ರೋತ್ಸಾಹಕ್ಕೆ ಚಿರಋಣಿ
ಪ್ರೇಮ್
Published On :

ಬೆಂಗಳೂರು: ಪ್ರೇಮಂ ಪೂಜ್ಯಂ ಮೂಲಕ ಕನ್ನಡ ಚಿತ್ರರಂಗದಲ್ಲಿ 25 ಸಿನಿಮಾಗಳನ್ನು ಪೂರೈಸಿರುವ ನಟ ಪ್ರೇಮ್ ಈ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಒಬ್ಬ ಕಲಾವಿದನಿಗೆ ೨೫ನೇ ಸಿನಿಮಾೀನ್ನುವುದು ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಸಿನಿಮಾ ಹಿನ್ನೆಲೆ ಇರದ ಹಾಗೂ ಅರ್ಥಿಕ ಪರಿಸ್ಥಿತಿಯೂ ಅಷ್ಟೇನೂ ಚೆನ್ನಾಗಿಲ್ಲದ ಕುಟುಂಬದಿಂದ ಬಂದವನಾದ ನನ್ನಂಥವರಿಗೆ 25ನೇ ಸಿನಿಮಾ ತುಂಬಾ ವಿಶೇಷ ಎನ್ನಿಸಿಕೊಳ್ಳುತ್ತದೆ. 

ಟಿ.ಎನ್. ಸೀತಾರಾಂ ಅವರ ಮನ್ವಂತರ ಧಾರಾವಾಹಿ ಮೂಲಕ ನಟನೆಗೆ ಕಾಲಿಟ್ಟ ಪ್ರೇಮ್ ನೆನಪಿರಲಿ ಸಿನಿಮಾ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದಿದ್ದರು. ತಮ್ಮ ಈ ಸಿನಿಪಯಣದಲ್ಲಿ ನೆರವಾದ ಎಲ್ಲರನ್ನೂ ಪ್ರೇಮ್ ಸ್ಮರಿಸುತ್ತಾರೆ. ತಮಗೆ ಅವಕಾಶ ಕೊಟ್ಟ ಎಲ್ಲಾ ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಚಿತ್ರರಂಗದ ಪ್ರತಿಯೊಬ್ಬರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ.

ಪ್ರೇಮಂ ಪೂಜ್ಯಂ ಸಿನಿಮಾದಲ್ಲಿ ನಟಿಸುವ ಮುನ್ನ ಪ್ರೇಮ್ 84 ಸಿನಿಮಾ ಸ್ಕ್ರಿಪ್ಟ್ ಗಳನ್ನು ಓದಿದ್ದರು ಎನ್ನುವುದು ಅಚ್ಚರಿಯ ಸಂಗತಿ. 25ನೇ ಸಿನಿಮಾ ಆಗಿದ್ದರಿಂದ ತುಂಬಾ ಮುತುವರ್ಜಿ ವಹಿಸಬೇಕಾಗಿ ಬಂತು ಎಂದು ಪ್ರೇಮ್ ಹೇಳಿದ್ದಾರೆ.

ಪ್ರೇಮಂ ಪೂಜ್ಯಂ ಸಿನಿಮಾ ಶುರುವಾದಾಗ 50 ಲಕ್ಷ ಬಂಡವಾಳದ ಮೂಲಕ ಪ್ರಾರಂಭವಾಯಿತು. ಆದರೆ ನಂತರದ ದಿನಗಳಲ್ಲಿ ನಿರ್ಮಾಪಕರು 20 ಕೋಟಿಗೂ ಹೆಚ್ಚು ಹಣ ತೊಡಗಿಸಿದರು. ಸಿನಿಮಾದ ಗುಣಮಟ್ತ ಅದ್ಧೂರಿಯಾಗಿ ಕಾಣುವುದರಲ್ಲಿ ನಿರ್ಮಾಪಕರ ಪ್ರೋತ್ಸಾಹವೇ ಕಾರಣ ಎನ್ನುವುದು ಅವರ ಅಭಿಪ್ರಾಯ.

ಪ್ರೇಮಂ ಪೂಜ್ಯಂ ಸಿನಿಮಾವನ್ನು ವೃತ್ತಿಯಲ್ಲಿ ವೈದ್ಯರಾದ ರಾಘವೇಂದ್ರ ಅವರು ನಿರ್ದೇಶನ ಮಾಡಿದ್ದಾರೆ.  ಸಿನಿಮಾ ನವೆಂಬರ್ 12ರಂದು ತೆರೆ ಕಾಣುತ್ತಿದೆ.

Related Article

ಜನ್ಮದಿನದಂದು ಹೊಸ ಚಿತ್ರ ಘೋಷಣೆ ಮಾಡಿದ ಅನುಷ್ಕಾ ಶೆಟ್ಟಿ

ದೇಶ ವಿದೇಶದ ಅಂತಾರಾಷ್ತ್ರೀಯ ಚಿತ್ರೋತ್ಸವಗಳಲ್ಲಿ ಸಾಗರ್ ಪುರಾಣಿಕ್ 'ಡೊಳ್ಳು' ಸಿನಿಮಾ ಸದ್ದು

'ಬೆಳಕು ಹೋದ ಮೇಲೆ ಕತ್ತಲು ಬರಲೇ ಬೇಕು, ಅದೇ ಜೀವನ, ಅದೇ ಅಲ್ವ ಸರ್ ವೈರಾಗ್ಯ ಅಂದಿದ್ದರು ಅಪ್ಪು': ರಮೇಶ್ ಅರವಿಂದ್

ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಸಾರಾ ಅಲಿ ಖಾನ್ ವಿರುದ್ಧ ನೆಟ್ಟಿಗರ ಟ್ರೋಲ್

ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ', 'ಮಿಷನ್ ಮಜ್ನು' ಸದ್ಯದಲ್ಲಿಯೇ ತೆರೆಗೆ: ಕಾತರದಲ್ಲಿ ಅಭಿಮಾನಿಗಳು

52ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಪನೋರಮಾ ವಿಭಾಗಕ್ಕೆ 4 ಕನ್ನಡ ಚಿತ್ರಗಳ ಆಯ್ಕೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.