ಸಿನಿಮಾ ಸುದ್ದಿ

'ಟಾಮ್ ಅಂಡ್ ಜೆರ್ರಿ' ನಾಯಕಿ ಪಾತ್ರ ನಿಜಜೀವನದಲ್ಲಿ ನನ್ನನ್ನು ಹೋಲುತ್ತದೆ: ಚೈತ್ರಾ ರಾವ್

ಕಿರುತೆರೆಯಲ್ಲಿ ಹೆಸರು ಮಾಡಿದ್ದ ಚೈತ್ರಾ ರಾವ್ 2016ರಲ್ಲಿ ತೆರೆಕಂಡಿದ್ದ ಮಾಯಾಬಜಾರ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಆ ಸಿನಿಮಾದಲ್ಲಿ ವಸಿಷ್ಠ ಸಿಂಹ ಅವರ ಜೋಡಿಯಾಗಿ ಚೈತ್ರಾ ರಾವ್ ನೀಡಿದ್ದ ಅಭಿನಯ ಪ್ರೇಕ್ಷಕರ ಮನಸೂರೆಗೊಂಡಿತ್ತು.

'ಟಾಮ್ ಅಂಡ್ ಜೆರ್ರಿ' ನಾಯಕಿ ಪಾತ್ರ ನಿಜಜೀವನದಲ್ಲಿ ನನ್ನನ್ನು ಹೋಲುತ್ತದೆ: ಚೈತ್ರಾ ರಾವ್
ನಿಶ್ಚಿತ್, ಚೈತ್ರಾ ರಾವ್
Published On :

ಬೆಂಗಳೂರು: ರಾಘವ್ ವಿನಯ್ ಶಿವಗಂಗೆ ನಿರ್ದೇಶನದ ಹೊಸ ಕನ್ನಡ ಸಿನಿಮಾ ಟಾಮ್ ಅಂಡ್ ಜೆರ್ರಿ ನಾಯಕಿ ಚೈತ್ರಾ ರಾವ್ ಅವರು ತಮ್ಮ ಪಾತ್ರ ನಿಜ ಜೀವನಕ್ಕೆ ಹತ್ತಿರವಾಗಿದೆ ಎಂದಿದ್ದಾರೆ. ಫ್ರೆಂಡ್ ಶಿಪ್ ಕುರಿತಾದ ಈ ಸಿನಿಮಾಗೆ ಟಾಂ ಅಂಡ್ ಜೆರ್ರಿ ಎನ್ನುವ ಹೆಸರೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದು ನಿರ್ದೇಶಕ ರಾಘವ್ ವಿನಯ್ ಶಿವಗಂಗೆ. 

ಕಿರುತೆರೆಯಲ್ಲಿ ಹೆಸರು ಮಾಡಿದ್ದ ಚೈತ್ರಾ ರಾವ್ 2016ರಲ್ಲಿ ತೆರೆಕಂಡಿದ್ದ ಮಾಯಾಬಜಾರ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಆ ಸಿನಿಮಾದಲ್ಲಿ ವಸಿಷ್ಠ ಸಿಂಹ ಅವರ ಜೋಡಿಯಾಗಿ ಚೈತ್ರಾ ರಾವ್ ನೀಡಿದ್ದ ಅಭಿನಯ ಪ್ರೇಕ್ಷಕರ ಮನಸೂರೆಗೊಂಡಿತ್ತು.

ಇದೀಗ ಟಾಮ್ ಅಂಡ್ ಜೆರ್ರಿ ಮೂಲಕ ಹೀರೊಯಿನ್ ಆಗಿರುವ ಚತ್ರಾ ರಾವ್ ತಮ್ಮ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಸತ್ಯಾ ಎನ್ನುವ ಹೆಸರಿನ ಪಾತ್ರವನ್ನು ನಿರ್ವಹಿಸುತ್ತಿರುವ ಚೈತ್ರಾ, ಆ ಪಾತ್ರ ಸ್ವೇಚ್ಛೆಯನ್ನು ಇಷ್ಟಪಡುವ, ಸ್ವತಂತ್ರವಾಗಿರಲು ಬಯಸುತ್ತದೆ ಎಂದಿದ್ದಾರೆ. 

<strong>ಚೈತ್ರಾ ರಾವ್</strong>
ಚೈತ್ರಾ ರಾವ್

ಸಮಾಜದ ಕಟ್ಟುಪಾಡುಗಳು ಅವಳಿಗಿಷ್ಟವಾಗದು. ಅದು ಕಾಲ್ಪನಿಕ ಪಾತ್ರವಾದರೂ ಅನೇಕ ವಿಧಗಳಲ್ಲಿ ಆ ಪಾತ್ರ ತನ್ನನ್ನೇ ಹೋಲುತ್ತದೆ ಎನ್ನುವುದು ಅವರ ನಂಬಿಕೆ. ರಾಜು ಶೇರೆಗಾರ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ಗಂಟು ಮೂಟೆ ಸಿನಿಮಾ ಖ್ಯಾತಿಯ ನಿಶ್ಚಿತ್ ನಾಯಕರಾಗಿ ನಟಿಸಿದ್ದಾರೆ. ಟಾಮ್ ಅಂಡ್ ಜೆರ್ರಿ ಸಿನಿಮಾ ನವೆಂಬರ್ 12ರಂದು ತೆರೆ ಕಾಣುತ್ತಿದೆ. 

Related Article

ಅಮೆರಿಕ ಡಲ್ಲಾಸ್ ಅಂತರಾಷ್ಟ್ರೀಯ ಚಿತ್ರೋತ್ಸವ: ಕುಮಾರ್ ಗೋವಿಂದ್ 'ಅತ್ಯುತ್ತಮ ನಟ'

ಸ್ಯಾಂಡಲ್ವುಡ್: ಅಂತೂ ಇಂತೂ ಒಳ್ಳೆ ಬುದ್ಧಿ ಬಂತಾ? ಫ್ಯಾನ್ಸ್ ವಾರ್ ಗೆ ಫುಲ್ ಸ್ಟಾಪ್ ಇಟ್ಟ ಫ್ಯಾನ್ಸ್!

ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಪ್ರಕಾಶ್ ರೈ ಕಪಾಳ ಮೋಕ್ಷ: ದೃಶ್ಯದ ಬಗ್ಗೆ ನೆಟ್ಟಿಗರ ಆಕ್ರೋಶ

ಈಗಲೂ ಪುನೀತ್ ನಿಧನದ ಸುದ್ದಿ ನಂಬಲಾಗುತ್ತಿಲ್ಲ: ರಾಮ್ ಚರಣ್

ನಟ ಪುನೀತ್ ರಾಜ್ ಕುಮಾರ್ ಸಮಾಧಿ ನೋಡಲು ಅಭಿಮಾನಿಗಳಿಗೆ ಅವಕಾಶ

ಖ್ಯಾತ ತೆಲುಗು ನಟ ನಂದಮೂರಿ ಬಾಲಕೃಷ್ಣ ಆಸ್ಪತ್ರೆಗೆ ದಾಖಲು, ಭುಜದ ಶಸ್ತ್ರಚಿಕಿತ್ಸೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.