ಸಿನಿಮಾ ಸುದ್ದಿ

ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಪ್ರಕಾಶ್ ರೈ ಕಪಾಳ ಮೋಕ್ಷ: ದೃಶ್ಯದ ಬಗ್ಗೆ ನೆಟ್ಟಿಗರ ಆಕ್ರೋಶ

ನಟ ಸೂರ್ಯ ಅಭಿನಯದ ತಮಿಳು ಸಿನಿಮಾ ಜೈ ಭೀಮ್ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಿದ್ದು ಎಲ್ಲರ ಮೆಚ್ಚುಗೆ ಗಳಿಸುತ್ತಿದೆ.

ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಪ್ರಕಾಶ್ ರೈ ಕಪಾಳ ಮೋಕ್ಷ: ದೃಶ್ಯದ ಬಗ್ಗೆ ನೆಟ್ಟಿಗರ ಆಕ್ರೋಶ
ಪ್ರಕಾಶ್ ರೈ
Published On :

ನವದೆಹಲಿ: ನಟ ಸೂರ್ಯ ಅಭಿನಯದ ತಮಿಳು ಸಿನಿಮಾ ಜೈ ಭೀಮ್ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಿದ್ದು ಎಲ್ಲರ ಮೆಚ್ಚುಗೆ ಗಳಿಸುತ್ತಿದೆ.

ಈಗ ಜೈ ಭೀಮ್ ಸಿನಿಮಾದ  ಒಂದು ಸೀನ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ವ್ಯಕ್ತಿಯೋರ್ವ ಹಿಂದಿಯಲ್ಲಿ ಮಾತನಾಡಿದ್ದಕ್ಕೆ  ಪ್ರಕಾಶ್ ರೈ ಕಪಾಳ ಮೋಕ್ಷ ಮಾಡಿದ್ದಾರೆ.  ಅಲ್ಲದೇ ತಮಿಳಿನಲ್ಲಿ ಮಾತಾಡು ಎಂದು ಆಗ್ರಹಿಸಿದ್ದಾರೆ. ಪ್ರಕಾಶ್ ರೈ ವ್ಯಕ್ತಿಯೊಬ್ಬರ ಕೆನ್ನೆಗೆ ಬಾರಿಸಿ ತಮಿಳಿನಲ್ಲೇ ಮಾತಾಡು ಎಂದಿರುವ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿದೆ.

ಪ್ರಕಾಶ್ ರೈ ನಟಿಸಿರುವ ಈ ವಿಡಿಯೋಗೆ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿವೆ,  ಜೈ ಭೀಮ್’ ಚಿತ್ರದಲ್ಲಿ ದೃಶ್ಯವೊಂದು ಬರುತ್ತದೆ. ಈ ದೃಶ್ಯದಲ್ಲಿ ಪ್ರಕಾಶ್​ ರಾಜ್​ ಬಳಿ ಬರುವ ಅಟೆಂಡರ್​ ಓರ್ವ ಹಿಂದಿಯಲ್ಲಿ ಮಾತನಾಡುತ್ತಾನೆ. ಈ ವೇಳೆ ಪ್ರಕಾಶ್​ ರೈ ಕೆನ್ನೆಗೆ ಬಾರಿಸಿ ತಮಿಳಿನಲ್ಲಿ ಮಾತನಾಡುವಂತೆ ಸೂಚಿಸುತ್ತಾರೆ. ಇದೇ ದೃಶ್ಯವನ್ನು ಇಟ್ಟುಕೊಂಡು ಕೆಲವರು ಕೊಂಕು ತೆಗೆದಿದ್ದಾರೆ.

ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಅವರವರ ಇಷ್ಟ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಅಟೆಂಡರ್​ ಹಿಂದಿ ಮಾತನಾಡಿದ ಎನ್ನುವ ಕಾರಣಕ್ಕೆ ಅವನಿಗೆ ಹೊಡೆಯುವ ಅಧಿಕಾರವನ್ನು ಪ್ರಕಾಶ್​ ರೈಗೆ ಕೊಟ್ಟವರು ಯಾರು’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೆಲವರು ವಿರೊಧ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.