ಸಿನಿಮಾ ಸುದ್ದಿ

ಜೂನ್ 6ಕ್ಕೆ ಪಂಚ ಭಾಷೆಗಳಲ್ಲಿ '777 ಚಾರ್ಲಿ' ಟೀಸರ್ ರಿಲೀಸ್: ರಕ್ಷಿತ್ ಶೆಟ್ಟಿ

'777 ಚಾರ್ಲಿ' ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಸದ್ಯದಲ್ಲೇ '777 ಚಾರ್ಲಿ' ಚಿತ್ರದ ಟೀಸರ್ ಹೊರಬರಲಿದೆ. ತಮ್ಮ ಹುಟ್ಟುಹಬ್ಬದ ಪ್ರಯುಕ್ತ '777 ಚಾರ್ಲಿ' ಚಿತ್ರದ ಟೀಸರ್‌ಅನ್ನು ಬಿಡುಗಡೆ ಮಾಡಲು ರಕ್ಷಿತ್ ಶೆಟ್ಟಿ ಮುಂದಾಗಿದ್ದಾರೆ.

ಜೂನ್ 6ಕ್ಕೆ ಪಂಚ ಭಾಷೆಗಳಲ್ಲಿ '777 ಚಾರ್ಲಿ' ಟೀಸರ್ ರಿಲೀಸ್: ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ
Published On :

'777 ಚಾರ್ಲಿ' ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ರಕ್ಷಿತ್ ಶೆಟ್ಟಿ ನಟಿಸುತ್ತಿರುವ '777 ಚಾರ್ಲಿ' ಸಿನಿಮಾದ ಟ್ರೇಲರ್ ಜೂನ್ 6 ರಂದು ಐದು ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೇಲರ್‌ಗೆ 'ಲೈಫ್ ಆಫ್ ಚಾರ್ಲಿ' ಎಂದು ಹೆಸರಿಡಲಾಗಿದ್ದು, ಸಿನಿಮಾದಲ್ಲಿ ಪ್ರೇಕ್ಷಕರು ಏನು ನಿರೀಕ್ಷಿಸಬಹುದು ಎಂಬುದರ ಝಲಕ್ ಟ್ರೇಲರ್‌ನಲ್ಲಿ ಇರಲಿದೆ.

ಜೂನ್ 6 ರಂದು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ. ರಕ್ಷಿತ್ ಶೆಟ್ಟಿ ಬರ್ತಡೇ ಪ್ರಯುಕ್ತ '777 ಚಾರ್ಲಿ' ಚಿತ್ರದ ಅಫೀಶಿಯಲ್ ಟೀಸರ್ 'ಲೈಫ್ ಆಫ್ ಚಾರ್ಲಿ' ಬಿಡುಗಡೆಯಾಗಲಿದೆ. ಈ ವಿಚಾರವನ್ನು ನಟ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಸಿನಿಮಾದ ಫೊಸ್ಟರ್‌ ಈಗಾಗಲೇ ಬಿಡುಗಡೆ ಆಗಿದೆ. ಪೋಸ್ಟರ್‌ನಲ್ಲಿ ರಕ್ಷಿತ್ ಶೆಟ್ಟಿ ಮುದ್ದಾದ ನಾಯಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ನಾಯಿ ನಡುವಿನ ಬಂಧ, ಆತ್ಮೀಯತೆ ಸಿನಿಮಾದ ಪ್ರಮುಖ ಅಂಶವಾಗಿರಲಿದೆ ಎಂಬುದು ಪೋಸ್ಟರ್‌ಗಳಿಂದ ಗೊತ್ತಾಗುತ್ತಿದೆ.

'777 ಚಾರ್ಲಿ' ಸಿನಿಮಾವು ಟ್ರಾವೆಲ್ ಡ್ರಾಮಾ ಆಗಿರುವ ಬಗ್ಗೆಯೂ ಅನುಮಾನವನ್ನು ಪೋಸ್ಟರ್‌ಗಳು ಮೂಡಿಸಿವೆ. ದೇಶದ ಹಲವು ಭಾಗಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಕೊರೋನಾ ಲಾಕ್‌ಡೌನ್‌ ಕಾರಣದಿಂದಾಗಿ ಚಿತ್ರೀಕರಣ ತಡವಾಗಿದ್ದು, ಜೂನ್‌ 6 ರಂದು ಬಿಡುಗಡೆ ಆಗುವ ಟ್ರೇಲರ್‌ನಲ್ಲಿಯೇ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಪ್ರಕಟಿಸುವ ಸಾಧ್ಯತೆ ಇದೆ. '777 ಚಾರ್ಲಿ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ದಾನಿಶ್ ಸೇಟ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ರಕ್ಷಿತ್ ಶೆಟ್ಟಿ ಮತ್ತು ಜಿ.ಎಸ್.ಗುಪ್ತ ನಿರ್ಮಾಣ ಮಾಡಿದ್ದಾರೆ. ನಿರ್ದೇಶನ ಮಾಡಿರುವುದು ಕಿರಣ್‌ರಾಜ್.

ಜೊತೆಗೆ '777 ಚಾರ್ಲಿ' ಚಿತ್ರದ ಅಫೀಶಿಯಲ್ ಟೀಸರ್ 'ಲೈಫ್ ಆಫ್ ಚಾರ್ಲಿ' ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂಬುದನ್ನೂ ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.

'777 ಚಾರ್ಲಿ' ನಂತರ 'ಸಪ್ತಸಾಗರದಾಚೆ ಎಲ್ಲೊ', 'ಪುಣ್ಯಕೋಟಿ', 'ಕಿರಿಕ್ ಪಾರ್ಟಿ 2' ಮತ್ತು ತಮ್ಮದೇ ನಿರ್ದೇಶನದ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.