ಸಿನಿಮಾ ಸುದ್ದಿ

ರೋಮ್ಯಾಂಟಿಕ್ ಆಲ್ಬಂ ''ನಾನು ನಾನು ಪ್ರೀತಿಸುತ್ತಿರುವೆ' ಹಾಡಿನಲ್ಲಿ ಮೇಘಶ್ರೀ ನಟನೆ

ಕೃಷ್ಣ ತುಳಸಿ, ದಶರಥ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಮೇಘಶ್ರೀ ಇದೇ ಮೊದಲ ಬಾರಿಗೆ ಆಲ್ಬಂ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ರೋಮ್ಯಾಂಟಿಕ್ ಆಲ್ಬಂ ''ನಾನು ನಾನು ಪ್ರೀತಿಸುತ್ತಿರುವೆ' ಹಾಡಿನಲ್ಲಿ ಮೇಘಶ್ರೀ ನಟನೆ
ಮೇಘಶ್ರೀ
Published On :

ಕೃಷ್ಣ ತುಳಸಿ, ದಶರಥ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಮೇಘಶ್ರೀ ಇದೇ ಮೊದಲ ಬಾರಿಗೆ ಆಲ್ಬಂ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಲವ್ ಸ್ಟೋರಿಯುಳ್ಳ ಈ 'ನಾನು ನಾನು ಪ್ರೀತಿಸುತ್ತಿರುವೆ' ಆಲ್ಬಂ ಹಾಡಿನಲ್ಲಿ ಮೇಘಶ್ರೀ ಜೊತೆಗೆ ಹೊಸ ಪ್ರತಿಭೆ ಅರುಣ್ ಚಂದ್ರಪ್ಪ ನಾಯಕರಾಗಿ ಮಿಂಚಿದ್ದಾರೆ. ಈ ಹಾಡನ್ನು ರಿಲೀಸ್ ಮಾಡಿ, ಇಡೀ ತಂಡ ಶುಭ ಹಾರೈಸಿದ್ದಾರೆ 'ರಿಯಲ್ ಸ್ಟಾರ್' ಉಪೇಂದ್ರ.

ತನಿಖೆ ಎಂಬ ಚಿತ್ರಕ್ಕೆ ನಿರ್ದೇಶನ ಮಾಡಿರುವ ಜಿ.ಎಸ್. ಕಲಿಗೌಡ ಈ ಆಲ್ಬಂ ಹಾಡಿಗೆ ಸಾಹಿತ್ಯ ಬರೆದಿದ್ದು, ನಿರ್ದೇಶನವನ್ನೂ ಮಾಡಿದ್ದಾರೆ. ಮುರಳಿ ಮಾಸ್ಟರ್, ಹುಸೇನ್ ನೃತ್ಯ ನಿರ್ದೇಶನ ಮಾಡಿದ್ದು, ಕ್ರಿಸ್ಟೋಫರ್ ಜೈಸನ್ ಸಂಗೀತ ನೀಡಿದ್ದಾರೆ.  ಶ್ಯಾಮ್ ಸಿಂಧನೂರು ಛಾಯಾಗ್ರಹಣ ಮಾಡಿದ್ದಾರೆ.

ಡಿಎಂಎಫ್ (ಡೈಮೆಂಡ್ ಟ್ರೀ ಮ್ಯೂಸಿಕ್ ಫ್ಯಾಕ್ಟರಿ) ಆಡಿಯೋ ಸಂಸ್ಥೆಯ ಮಮತಾ ಶ್ರೀ ಈ ಆಲ್ಬಂ ಸಾಂಗ್‌ನ ನಿರ್ಮಾಣವನ್ನು ಮಾಡಿದ್ದಾರೆ. 'ಹೊಸಬರಿಗೆ ವೇದಿಕೆ ಕಲ್ಪಿಸಬೇಕೆಂಬ
ನಮ್ಮ ಮೊದಲ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಪ್ರಯತ್ನದಲ್ಲೇ ಗೆದ್ದಿರುವ ಖುಷಿ ತಂಡಕ್ಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.