6-5=2, ದಿಯಾ ನಂತರ ಥ್ರಿಲ್ಲರ್ ಚಿತ್ರಕ್ಕೆ ಕೆ.ಎಸ್. ಅಶೋಕ ನಿರ್ದೇಶನ
ಕನ್ನಡದಲ್ಲಿ 6-5=2 ಹಾರರ್ ನಂತರ ರೊಮ್ಯಾಂಟಿಕ್ ದಿಯಾ ಚಿತ್ರ ನಿರ್ದೇಶಿಸಿದ್ದ ನಿರ್ದೇಶಕ ಕೆ.ಎಸ್.ಅಶೋಕ ಇದೀಗ ಥ್ರಿಲ್ಲರ್ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ.

ಕನ್ನಡದಲ್ಲಿ 6-5=2 ಹಾರರ್ ನಂತರ ರೊಮ್ಯಾಂಟಿಕ್ ದಿಯಾ ಚಿತ್ರ ನಿರ್ದೇಶಿಸಿದ್ದ ನಿರ್ದೇಶಕ ಕೆ.ಎಸ್.ಅಶೋಕ ಇದೀಗ ಥ್ರಿಲ್ಲರ್ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ.
ಸದ್ಯ ಕೊರೋನಾ ಲಾಕ್ ಡೌನ್ ನಿಂದಾಗಿ ಮಂಗಳೂರಿನಲ್ಲಿ ಬೀಡು ಬಿಟ್ಟಿರುವ ಅಶೋಕ್ ಅವರು ಈ ಸಮಯದಲ್ಲಿ ಕಥೆಯೊಂದನ್ನು ಬರೆಯುತ್ತಿದ್ದಾರೆ. ನನ್ನ ತಲೆಯಲ್ಲಿ ಒಂದು ಕಥೆ ಇದೆ. ಅದನ್ನು ಈಗ ಕಾಗದದ ಮೇಲೆ ತರುತ್ತಿದ್ದೇನೆ. ನಾನು ಕಳೆದ ಒಂದು ವಾರದಿಂದ ಮಂಗಳೂರಿನಲ್ಲಿದ್ದೇನೆ. ನನ್ನ ಮುಂದಿನ ಚಿತ್ರಕ್ಕಾಗಿ ಸ್ಕ್ರಿಪ್ಟ್ ಬರೆಯುತ್ತಿದ್ದೇನೆ ಎಂದು ಅಶೋಕ ಹೇಳುತ್ತಾರೆ. ನಾನು ಸ್ಕ್ರಿಪ್ಟ್ ಪೂರ್ಣಗೊಳಿಸಿದ ನಂತರ ಪಾತ್ರಧಾರಿಗಳಿಗಾಗಿ ಹುಡುಕಾಟ ನಡೆಸುತ್ತೇನೆ ಎಂದರು.
ಅಶೋಕ ಪ್ರಸ್ತುತ ಥ್ರಿಲ್ಲರ್ ಕಥೆಯೊಂದನ್ನು ಬರೆಯುತ್ತಿದ್ದಾರೆ. ಅದು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸರಿಹೊಂದುತ್ತದೆ. "ಪ್ರತಿಯೊಂದು ಚಿತ್ರವನ್ನೂ ದೊಡ್ಡ ಪರದೆಯಲ್ಲಿ ನೋಡಬೇಕೆಂದು ನಾವು ಭಾವಿಸುತ್ತೇವೆ. ಆದರೆ ಈ ಸಮಯದಲ್ಲಿ, ಒಟಿಟಿ ಮೊರೆ ಹೋಗಬೇಕಾಗಿದೆ. ನನಗೆ ತಿಳಿದಂತೆ ಒಟಿಟಿಯಲ್ಲಿ ಥ್ರಿಲ್ಲರ್ ಚಿತ್ರಗಳಿಗೆ ಭಾರೀ ಬೇಡಿಕೆ ಇದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾನು ಸ್ಕ್ರಿಪ್ಟ್ ಬರೆಯುತ್ತಿದ್ದೇನೆ. ಆದರೂ ನನ್ನ ಆಸೆ ಚಿತ್ರಗಳು ಯಾವಾಗಲೂ ಥಿಯೇಟರ್ ನಲ್ಲೇ ಬಿಡುಗಡೆಬೇಕು ಎಂದು ಅಶೋಕ ಹೇಳುತ್ತಾರೆ.
ಮುಂದಿನ ಅಕ್ಟೋಬರ್-ನವೆಂಬರ್ನಲ್ಲಿ ಶೂಟಿಂಗ್ ಪ್ರಾರಂಭಿಸಲು ಉದ್ದೇಶಿಸಿದ್ದೇನೆ. ದೇಶ ಮತ್ತು ರಾಜ್ಯದಲ್ಲಿ ಸಾಂಕ್ರಾಮಿಕ ಪರಿಸ್ಥಿತಿಯಿಂದ ಹತೋಟಿಗೆ ಬಂದರೆ, ಶೀಘ್ರದಲ್ಲೇ ನನ್ನ ಯೋಜನೆಯನ್ನು ಪ್ರಾರಂಭಿಸುವ ಭರವಸೆಯನ್ನು ನಾನು ಹೊಂದಿದ್ದೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


