ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ: ಶ್ರೀಲೀಲಾ
ಒಂದು ವೇಳೆ ಸಿನಿಮಾಗಳಲ್ಲಿ ನಟಿಸದಿದ್ದರೇ ತಾನು ವ್ಯಾಸಂಗದ ಕಡೆ ಅಥವಾ ನೃತ್ಯದ ಕಡೆ ತಾನು ಗಮನ ಹರಿಸುತ್ತಿದ್ದೆ ಎಂದು ಕಿಸ್ ಚಿತ್ರದ ನಾಯಕಿ ಶ್ರೀಲೀಲಾ ಹೇಳಿದ್ದಾರೆ.

ಒಂದು ವೇಳೆ ಸಿನಿಮಾಗಳಲ್ಲಿ ನಟಿಸದಿದ್ದರೇ ತಾನು ವ್ಯಾಸಂಗದ ಕಡೆ ಅಥವಾ ನೃತ್ಯದ ಕಡೆ ತಾನು ಗಮನ ಹರಿಸುತ್ತಿದ್ದೆ ಎಂದು ಕಿಸ್ ಚಿತ್ರದ ನಾಯಕಿ ಶ್ರೀಲೀಲಾ ಹೇಳಿದ್ದಾರೆ.
ಎಲ್ಲೆಡೆ ಕೊರೋನಾ ಸೋಂಕು ಹೆಚ್ಚುತ್ತಿದೆ, ಇಂತಹ ಸಂದರ್ಭದಲ್ಲಿ ನಾನು ಕೇವಲ ದೇವರ ಮೇಲೆ ಭಾರ ಹಾಕುತ್ತೇನೆ, ಕೊರೋನಾ ಎರಡನೇ ಅಲೆ ಅಪ್ಪಳಿಸಿದಾಗ ಯಾರು ಹೆಚ್ಚಿ ನ ಪ್ರಮಾಣದಲ್ಲಿ ಕೇರ್ ಮಾಡಲಿಲ್ಲ, ವರ್ಷದ ಆರಂಭದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಿತ್ತು, ಆದರೆ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಕೊವಿಡ್ ಸೋಂಕಿನ ಬಗ್ಗೆ ಶ್ರೀಲೀಲಾ ಆತಂಕ ವ್ಯಕ್ತ ಪಡಿಸಿದ್ದಾರೆ.
ಕನ್ನಡದ ಈ ಪ್ರತಿಭೆ ತೆಲುಗಿನ ದೊಡ್ಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪೆಲ್ಲಿ ಸಂದಾಡಿ ಎಂಬ ಸಿನಿಮಾದಲ್ಲಿ ರೋಶನ್ ಮೆಕಾ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ಹರಿ ಸಂತೋಷ್ ನಿರ್ದೇಶನದ ಸಿನಿಮಾದ ಬೈ ಟು ಲವ್ ಸಿನಿಮಾದಲ್ಲಿಯೂ ಶ್ರೀಲೀಲಾ ನಟಿಸುತ್ತಿದ್ದಾರೆ. ಜೊತೆಗೆ ತೆಲುಗು ಸಿನಿಮಾ ರಂಗಕ್ಕೂ ಕಾಲಿಡುತ್ತಿದ್ದಾರೆ, ಲಾಕ್ ಡೌನ್ ಗೂ ಮೊದಲ ಚಿತ್ರದ ಪ್ರಮುಖ ಭಾಗಗಳನ್ನು ಚಿತ್ರೀಕರಿಸಲಾಗಿದೆ.
ತಮ್ಮ ಚೊಚ್ಚಲ ತೆಲುಗು ಸಿನಿಮಾದ ಬಗ್ಗೆ ಮಾತನಾಡಿರುವ ಶ್ರೀಲೀಲಾ ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಡುವೆ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಹೇಳಿದ್ದಾರೆ.
ಭಾಷೆಯ ವ್ಯತ್ಯಾಸ ಹೊರತು ಪಡಿಸಿದರೇ ಅಂತ ವ್ಯತ್ಯಾಸವೇನಿಲ್ಲ, ಸೆಟ್ ನಲ್ಲಿ ಹಲವರು ನನ್ನ ಜೊತೆ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಇದರಿಂದ ನನಗೆ ಹೆಚ್ಚು
ಕಂಪರ್ಟಬಲ್ ಅನ್ನಿಸುತ್ತಿತ್ತು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ನನಗೆ ಆಫರ್ ಬಂದಾನ ನಿಜವಾಗಿಯೂ ಆಶ್ಚರ್ಯವಾಗಿತ್ತು. ಕಥೆ ನನಗೆ ಬಹಳ ಹಿಡಿಸಿತು. ಈ ಪ್ರಾಜೆಕ್ಟ್ ನ ಭಾಗವಾಗಿರುವುದು ನನಗೆ ಖುಷಿ ತಂದಿದೆ, ಲಾಕ್ ಡೌನ್ ನಂತರ ಆರಂಭವಾಗುವ ನನ್ನ ಮೊದಲ ಶೂಟಿಂಗ್ ಇದೇ ಆಗಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ನಾನು ನಟಿಯಾಗದಿದ್ದರೇ ವೈದ್ಯೆಯಾಗುತ್ತಿದ್ದೆ ಇಲ್ಲವೇ ನೃತ್ಯ ಕಲಾವಿದೆಯಾಗುತ್ತಿದ್ದೆ ಎಂದು ತಿಳಿಸಿದ್ದಾರೆ. “ಇಲ್ಲಿಯವರೆಗೆ ನಾನು ವರ್ಣರಂಜಿತ ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ಇತರ ಬೇರೆ ಪ್ರಕಾರಗಳ ಭಾಗವಾಗಲು ಆಸಕ್ತಿ ಹೊಂದಿದ್ದೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


