ಸಿನಿಮಾ ಸುದ್ದಿ

'ಬೆಟ್ಟದ ಹೂವು' ಖ್ಯಾತಿಯ ಪೋಷಕ ನಟ, ಹಿರಿಯ ಕಲಾವಿದ 'ಶಂಖನಾದ' ಅರವಿಂದ್ ಕೊರೋನಾಗೆ ಬಲಿ

"ಬೆಟ್ಟದ ಹೂವು" ಖ್ಯಾತಿಯ ಹಿರಿಯ ಕಲಾವಿದ ಶಂಖನಾದ ಅರವಿಂದ್ (70) ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

'ಬೆಟ್ಟದ ಹೂವು' ಖ್ಯಾತಿಯ ಪೋಷಕ ನಟ, ಹಿರಿಯ ಕಲಾವಿದ 'ಶಂಖನಾದ' ಅರವಿಂದ್ ಕೊರೋನಾಗೆ ಬಲಿ
ಶಂಖನಾದ ಅರವಿಂದ್
Published On :

"ಬೆಟ್ಟದ ಹೂವು" ಖ್ಯಾತಿಯ ಹಿರಿಯ ಕಲಾವಿದ  ಶಂಖನಾದ ಅರವಿಂದ್ (70 ) ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

13 ದಿನಗಳ ಹಿಂದೆ ಕೊರೊನಾ ಸೊಂಕಿಗೆ ತುತ್ತಾಗಿ ವಿಕ್ಟೊರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಅರವಿಂದ್ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ 1 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.

250 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಕಲಾವಿದ ಅರವಿಂದ್ ಮೃತಪಟ್ಟಿರುವ ಬಗ್ಗೆ ಅವರ ಪುತ್ರಿ ಮಾನಸ ಹೊಳ್ಳ ತಮ್ಮ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. "ಸತತ 13 ದಿನಗಳು ಆಸ್ಪತ್ರೆಯಲ್ಲಿ ಹೋರಾಟ ನಡೆಸಿ ಇಂದು 1 ಘಂಟೆಗೆ ದೈವದೀನರಾಗಿದ್ದಾರೆಂದು ತಿಳಿಸಲು ವಿಶಾದಿಸುತ್ತೇನೆ ನಮ್ಮ ತಂದೆಯವರು Shankhanaada Aravinda Kalarunda Aravind MA" ಎಂದು ಅವರು ಬರೆದುಕೊಂಡಿದ್ದಾರೆ.

ಮೃತರು ಮೂವರು ಮಕ್ಕಳನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ,

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.