ಜುಲೈ 2ನೇ ವಾರದಲ್ಲಿ 'ಪೆಟ್ರೋಮ್ಯಾಕ್ಸ್' ಟೀಸರ್ ಬಿಡುಗಡೆ
ಸತೀಶ್ ನೀನಾಸಂ ಮತ್ತು ಹರಿಪ್ರಿಯಾ ನಟನೆಯ ಪೆಟ್ರೋಮ್ಯಾಕ್ಸ್ ಸಿನಿಮಾ ಶೂಟಿಂಗ್ ಸಂಪೂರ್ಣವಾಗಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

ಸತೀಶ್ ನೀನಾಸಂ ಮತ್ತು ಹರಿಪ್ರಿಯಾ ನಟನೆಯ ಪೆಟ್ರೋಮ್ಯಾಕ್ಸ್ ಸಿನಿಮಾ ಶೂಟಿಂಗ್ ಸಂಪೂರ್ಣವಾಗಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.
ಜುಲೈ 2 ನೇ ವಾರದಲ್ಲಿ ಪೆಟ್ರೋಮ್ಯಾಕ್ಸ್ ಸಿನಿಮಾ ಟೀಸರ್ ರಿಲೀಸ್ ಮಾಡುವುದಾಗಿ ನಿರ್ದೇಶಕ ವಿಜಯ ಪ್ರಸಾದ್ ತಿಳಿಸಿದ್ದಾರೆ.
ಸಿದ್ಲಿಂಗು, ನೀರ್ ದೋಸೆ ಗಳಂತ ಕ್ಲಾಸಿಕ್ ಸಿನಿಮಾ ನಿರ್ದೇಶಿಸಿರುವ ವಿಜಯ ಪ್ರಸಾದ್ ಪೆಟ್ರೋಮ್ಯಾಕ್ಸ್ ನಂತ ವಿಭಿನ್ನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ನಾಲ್ಕು ಅನಾಥ ಮಕ್ಕಳು ಮತ್ತು ವೃದ್ದೆ ಜೊತೆಗಿನ ಭಾವನಾತ್ಮಕ ಸಂಬಂಧ ಕುರಿತ ಕಥೆ ಇದಾಗಿದೆ.
ಪಾತ್ರಗಳು ಹೇಗೆ ಭೇಟಿಯಾಗುತ್ತವೆ ಮತ್ತು ಹೇಗೆ ಒಟ್ಟಿಗೆ ಪ್ರಯಾಣಿಸುತ್ತವೆ ಎಂಬುದನ್ನು ಹಾಸ್ಯ, ಎಮೋಶನ್ ಮತ್ತು ಭಾವನೆಗಳ ಬೆಸೆದು ಸಿನಿಮಾ ತಯಾರಿಸಲಾಗಿದೆ ಎಂದು ವಿಜಯಾ ಪ್ರಸಾದ್ ತಿಳಿಸಿದ್ದಾರೆ, ಕೇವಲ 36 ದಿನಗಳಲ್ಲಿ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ.
ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ನೀಸಾಸಂ ಸತೀಶ್ ಹಾಗೂ ಹರಿಪ್ರಿಯಾ ನಟಿಸಿದ್ದಾರೆ. ಸತೀಶ್ ಪಿಕ್ಚರ್ಸ್ ಸ್ಟುಡಿಯೋ 18 ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಸಿನಿಮಾಗೆ ಅನೂಪ್ ಸಿಳೀನ್ ಸಂಗೀತ ನೀಡಿದ್ದಾರೆ, ನಿರಂಜನ ಬಾಬು ಛಾಯಾಗ್ರಹಣವಿದೆ,
ಪೆಟ್ರೋಮ್ಯಾಕ್ಸ್ ಸಿನಿಮಾವನ್ನು ಥಿಯೇಟರ್ ಗಳಲ್ಲೇ ರಿಲೀಸ್ ಮಾಡಲಿದ್ದು, ಪ್ರೇಕ್ಷಕರು ಸಿನಿಮಾ ಎಂಜಾಯ್ ಮಾಡಲಿದ್ದಾರೆ ಎಂದು ವಿಜಯ ಪ್ರಸಾದ್ ತಿಳಿಸಿದ್ದಾರೆ,
ವಿಜಯಾ ಪ್ರಸಾದ್ ತೋತಾಪುರಿ ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಇದು ಮತ್ತೊಂದು ಕ್ಲಾಸಿಕ್ ಸಿನಿಮಾವಾಗಿದ್ದು, ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


