ಸಿನಿಮಾ ಸುದ್ದಿ

ನಾಗೇಂದ್ರ ಪ್ರಸಾದ್ ನಿರ್ದೇಶನದ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ: ಲವ್ ಮಾಕ್ಟೇಲ್ ಹೀರೋ ಕೈಯ್ಯಲ್ಲಿ ಸಾಲು ಸಾಲು ಚಿತ್ರ

ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್ -2 ನಿರ್ದೇಶನದ ಜೊತೆಗೆ ಹಲವು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ನಾಗೇಂದ್ರ ಪ್ರಸಾದ್ ಅವರ ನಿರ್ದೇಶನದ ರೋಮ್ಯಾಂಟಿಕ್ ಸಿನಿಮಾದ ಶೂಟಿಂಗ್ ನಲ್ಲಿ ಕೃಷ್ಣ ಸೋಮವಾರದಿಂದ ಭಾಗವಹಿಸಲಿದ್ದಾರೆ.

ನಾಗೇಂದ್ರ ಪ್ರಸಾದ್ ನಿರ್ದೇಶನದ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ: ಲವ್ ಮಾಕ್ಟೇಲ್ ಹೀರೋ ಕೈಯ್ಯಲ್ಲಿ ಸಾಲು ಸಾಲು ಚಿತ್ರ
ಡಾರ್ಲಿಂಗ್ ಕೃಷ್ಣ
Published On :

ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್ -2 ನಿರ್ದೇಶನದ ಜೊತೆಗೆ ಹಲವು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.  ನಾಗೇಂದ್ರ ಪ್ರಸಾದ್ ಅವರ ನಿರ್ದೇಶನದ ರೋಮ್ಯಾಂಟಿಕ್ ಸಿನಿಮಾದ ಶೂಟಿಂಗ್ ನಲ್ಲಿ ಕೃಷ್ಣ ಸೋಮವಾರದಿಂದ ಭಾಗವಹಿಸಲಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ಶೂಟಿಂಗ್ ಆರಂಭವಾಗಲಿದೆ, ತಮಿಳಿನ ಹಿಟ್ ಸಿನಿಮಾ ಓ ಮೈ ಕಾದಲುವೆ ಎಂಬ ಚಿತ್ರದಿಂದ ಸ್ಫೂರ್ತಿ ಪಡೆದು ನಾಗೇಂದ್ರ ಪ್ರಸಾದ್ ಸಿನಿಮಾ ಮಾಡುತ್ತಿದ್ದಾರೆ, ನೃತ್ಯ ನಿರ್ದೇಶಕರಾಗಿದ್ದ ನಾಗೇಂದ್ರ ಪ್ರಸಾದ್ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ, ಸಂಗೀತಾ ಶೃಂಗೇರಿ  ಮತ್ತು ರೋಷಿಣಿ ನಾಯಕಿಯಾಗಿದ್ದಾರೆ,ಈ ಸಿನಿಮಾದಲ್ಲಿ ನಾನು ನನ್ನ ಪಾತ್ರದ ಭಾಗವನ್ನು ಪೂರ್ಣಗೊಳಿಸಲಿದ್ದೇನೆ ಎಂದು ತಿಳಿಸಿದ್ದಾರೆ, ಇದರ ಜೊತೆಗೆ ನಾಗಶೇಖರ್ ನಿರ್ದೇಶನದ ಶ್ರೀಕೃಷ್ಣ@ಜಿಮೇಲ್ .ಕಾಮ್ ಸಿನಿಮಾ ಶೂಟಿಂಗ್ 10 ದಿನಗಳಷ್ಟು ಬಾಕಿಯಿದೆ.

ಇವುಗಳ ನಂತರ ನಾನು ಮಿ.ಬ್ಯಾಚಲರ್ ಮತ್ತು ಶುಗರ ಫ್ಯಾಕ್ಟರಿ  ಸಿನಿಮಾ ಕಡೆ ಗಮನ ಹರಿಸುತ್ತೇನೆ, ಇವೆಲ್ಲಾ ಮುಗಿದ ನಂತರ ಲವ್ ಮಿ ಆರ್ ಹೇಟ್ ಮಿ ಸಿನಿಮಾ ಕಡೆ ನನ್ನ ಸಂಪೂರ್ಣ ಗಮನ ಹರಿಸುವುದಾಗಿ ತಿಳಿಸಿದ್ದಾರೆ,

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.