ಸಿನಿಮಾ ಸುದ್ದಿ

ಪ್ರಭು ಶ್ರೀನಿವಾಸ್ ನಿರ್ದೇಶನದ 'ಬಾಡಿ ಗಾಡ್' ಕಾಮಿಡಿ ಸಿನಿಮಾದಲ್ಲಿ ಗುರುಪ್ರಸಾದ್ ನಟನೆ

ಕರಿಯ-2 ಮತ್ತು ಗಣಪ ಸಿನಿಮಾ ನಿರ್ದೇಶಕ ಪ್ರಭು ಶ್ರೀನಿವಾಸ್ ಪಕ್ಕಾ ಕಾಮಿಡಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಬಾಡಿಗಾಡ್ ಸಿನಿಮಾದಲ್ಲಿ ಓ ಪ್ರೇಮವೇ ಸಿನಿಮಾ ನಾಯಕ ಮನೋಜ್ ನಿರ್ದೇಶಕ ಗುರುಪ್ರಸಾದ್ ಹಾಗೂ ದೀಪಿಕಾ ಆರಾಧ್ಯ ನಟಿಸುತ್ತಿದ್ದಾರೆ.

ಪ್ರಭು ಶ್ರೀನಿವಾಸ್ ನಿರ್ದೇಶನದ 'ಬಾಡಿ ಗಾಡ್' ಕಾಮಿಡಿ ಸಿನಿಮಾದಲ್ಲಿ ಗುರುಪ್ರಸಾದ್ ನಟನೆ
ಬಾಡಿ ಗಾಡ್ ಚಿತ್ರದ ದೃಶ್ಯ.
Published On :

ಕರಿಯ-2 ಮತ್ತು ಗಣಪ ಸಿನಿಮಾ ನಿರ್ದೇಶಕ ಪ್ರಭು ಶ್ರೀನಿವಾಸ್ ಪಕ್ಕಾ ಕಾಮಿಡಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಬಾಡಿಗಾಡ್ ಸಿನಿಮಾದಲ್ಲಿ ಓ ಪ್ರೇಮವೇ ಸಿನಿಮಾ ನಾಯಕ ಮನೋಜ್ ನಿರ್ದೇಶಕ ಗುರುಪ್ರಸಾದ್ ಹಾಗೂ ದೀಪಿಕಾ ಆರಾಧ್ಯ ನಟಿಸುತ್ತಿದ್ದಾರೆ. 

ಕೊರೋನ ಲಾಕ್ ಡೌನ್ ಸಮಯದಲ್ಲಿ ಗುರುಪ್ರಸಾದ್ ವಿಭಿನ್ನ ಕಥಾಹಂದರ ಹೊಂದಿರುವ “ಬಾಡಿ ಗಾಡ್” ಚಿತ್ರದಲ್ಲಿ ನಟಿಸಿದ್ದಾರೆ. ಸತ್ತ ವ್ಯಕ್ತಿಯ ದೇಹ ಇಟ್ಟುಕೊಂಡು ಕತೆ ಹೆಣೆದಿರುವ ಸಿನಿಮಾ ‘ಬಾಡಿ ಗಾಡ್‌’. ಇಲ್ಲಿ ಹೆಣದ ಪಾತ್ರ ಮಾಡಿರುವುದು ಮಠ ಗುರುಪ್ರಸಾದ್‌. ಬಾಡಿಯನ್ನು ಕಾಯುವ ಮುಗ್ಧನಾಗಿ ಕಾಣಿಸಿಕೊಂಡಿರುವುದು ಮನೋಜ್‌. ಈ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಆಗಿದೆ.

ಮೋಷನ್‌ ಪೋಸ್ಟರ್‌ ಬಿಡುಗಡೆ ನೆಪದಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಈ ಚಿತ್ರದ ನಿರ್ದೇಶಕ ಪ್ರಭು ಶ್ರೀನಿವಾಸ್‌. ಚಿತ್ರಕ್ಕೆ ಶೂಟಿಂಗ್‌ ಮುಕ್ತಾಯವಾಗಿದೆ. ವಿದೇಶದಲ್ಲಿ ನೆಲೆಸಿರುವ ಮಕ್ಕಳು, ಸ್ವದೇಶದಲ್ಲಿ ಕಾಯುತ್ತಿರುವ ಹೆತ್ತವರು ನಮ್ಮ ಚಿತ್ರದ ಮುಖ್ಯ ಪಿಲ್ಲರ್‌ಗಳು. ಪ್ರಮೋಷನಲ್‌ ಹಾಡಿನ ಚಿತ್ರೀಕರಣ ಮಾಡಬೇಕಿದೆ. ಈ ಹಾಡನ್ನು ನಟ ಪುನೀತ್‌ ರಾಜ್‌ಕುಮಾರ್‌ ಹಾಡಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಪ್ಲಾನ್‌ ಇದೆ’ ಎನ್ನುತ್ತಾರೆ ಪ್ರಭು ಶ್ರೀನಿವಾಸ್‌.

ಬಾಡಿ ಗಾಡ್​’ ಚಿತ್ರದಲ್ಲಿ ಮನೋಜ್​ ಅವರ ನಟನೆಗೆ ನಿರ್ದೇಶಕರಿಗೆ ಮೆಚ್ಚುಗೆ ಆಗಿದೆ. ನಿರಂಜನ್, ಅಶ್ವಿನ್ ಹಾಸನ್ ಕೂಡ ನಟಿಸಿದ್ದಾರೆ. ಕರಣ್ ಬಿ. ಕೃಪ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಂಕಲನಕಾರರಾಗಿ ಉಜ್ವಲ್ ಚಂದ್ರ ಕೆಲಸ ಮಾಡಿದ್ದಾರೆ.

ಪ್ರಮೋಷನಲ್ ಸಾಂಗ್ ಒಂದರ ಚಿತ್ರೀಕರಣ ಬಿಟ್ಟು ಬಾಕಿ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ‌ ಕೂಡ ತೆರೆಗೆ ಬರಲು ಬಹುತೇಕ ಸಿದ್ದವಾಗಿದೆ.‌ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರುತ್ತೇನೆ ಎನ್ನುತ್ತಾರೆ ಪ್ರಭು ಶ್ರೀನಿವಾಸ್.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.