ವರದಕ್ಷಿಣೆ ಕಿರುಕುಳ: ಪೋಲೀಸರಿಗೆ ಶರಣಾಗುವಂತೆ ಮಲಯಾಳಂ ಟಿವಿ ನಟ ಆದಿತ್ಯನ್ ಜಯನ್ ಗೆ ಕೇರಳ ಹೈಕೋರ್ಟ್ ನಿರ್ದೇಶನ
ತನ್ನ ಪತ್ನಿ ಅಂಬಿಲಿ ದೇವಿ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಶರಣಾಗುವಂತೆ ಆದಿತ್ಯನ್ ಎಂದೇ ಖ್ಯಾನಾದ ಮಲಯಾಳಂ ಟಿವಿ ನಟ ಜಯನ್ ಎಸ್ ಅವರಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.

ಕೊಚ್ಚಿ: ತನ್ನ ಪತ್ನಿ ಅಂಬಿಲಿ ದೇವಿ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಶರಣಾಗುವಂತೆ ಆದಿತ್ಯನ್ ಎಂದೇ ಖ್ಯಾನಾದ ಮಲಯಾಳಂ ಟಿವಿ ನಟ ಜಯನ್ ಎಸ್ ಅವರಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ. ಆತನ ಬಂಧನವನ್ನು ದಾಖಲಿಸಿದ ನಂತರ ಮತ್ತು ಅವರ ವಿಚಾರಣೆಯನ್ನು ಮುಗಿಸಿದ ನಂತರ ಅವರನ್ನು ಜಾಮೀನಿನ ಮೇಲೆ ಬಿಡಲಾಗುತ್ತದೆ.
ನ್ಯಾಯಮೂರ್ತಿ ವಿ ಶಿರ್ಸಿ ನಟನನ್ನು ಜುಲೈ 13 ರಂದು ಶರಣಾಗುವಂತೆ ನಿರ್ದೇಶಿಸಿದ್ದಾರೆ. ಆ ನಂತರ ಅವರನ್ನು ಒಂದು ಲಕ್ಷ ರೂ.ಗಳ ಬಾಂಡ್ ಮೇಲೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ನ್ಯಾಯಾಲಯವು ವಿಧಿಸಿರುವ ಇತರ ಷರತ್ತುಗಳೆಂದರೆ, ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಅಗತ್ಯವಿದ್ದಾಗ, ಅವರು ಪ್ರಕರಣದ ತನಿಖೆ ಮತ್ತು ವಿಚಾರಣೆಗೆ ಸಹಕರಿಸಬೇಕು, ಅವರು ಪ್ರಕರಣದಲ್ಲಿ ಯಾವುದೇ ಸಾಕ್ಷಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬೆದರಿಸುವಂತಿಲ್ಲ, ಪ್ರೇರೇಪಿಸಬಾರರು, ಸಾಕ್ಷ್ಯವನ್ನು ಹಾಳು ಮಾಡಬಾರದು ಮತ್ತು ಅವರು ತನ್ನ ವಿಚ್ಚೇದಿತ ಪತ್ನಿಯ ನಿವಾಸಕ್ಕೆ ಭೇಟಿ ನೀಡಬಾರದು.
ನಟ ಮತ್ತು ನೃತ್ಯ ಶಾಲೆಯನ್ನು ನಡೆಸುತ್ತಿರುವ ಅವರ ಪತ್ನಿ ಅಂಬಿಲಿ ದೇವಿ ಅವರ ಕೆಲಸಕ್ಕೆ ಯಾವುದೇ ತೊಂದರೆ ನೀಡಬಾರದೆಂದು ನ್ಯಾಯಾಲಯವು ನಿರ್ದೇಶಿಸಿದೆ ಮತ್ತು ಅವರ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಯಾವುದೇ ಚಾನೆಲ್ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸಂದರ್ಶನಗಳನ್ನು ನೀಡಬಾರದು ಅಥವಾ ಅವರ ಪ್ರತಿಷ್ಠೆಯ ಮೇಲೆ ಪರಿಣಾಮ ಬೀರುವ ಯಾವುದೇ ಅವಹೇಳನಕಾರಿ ಟೀಕೆಗಳನ್ನು ಮಾಡಬಾರದು ಎಂದಿದೆ.
ವರದಕ್ಷಿಣೆ ಕಿರುಕುಳ, ಕ್ರಿಮಿನಲ್ ಬೆದರಿಕೆ ಮತ್ತು ತನ್ನ ವಿಚ್ಚೇದಿತ ಪತ್ನಿಯ ದೂರಿನ ಮೇರೆಗೆ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಮಾತುಗಳನ್ನು ಆಡಿದ್ದಕ್ಕಾಗಿ ತನ್ನ ವಿರುದ್ಧ ದಾಖಲಾದ ಪ್ರಕರಣದಲ್ಲಿ ಬಂಧನಗೊಳ್ಳಬಹುದೆಂಬ ಭಯದಿಂದ ಆದಿತ್ಯನ್ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಂತರ ಈ ಆದೇಶ ಹೊರಬಿದ್ದಿದೆ. ತನ್ನ ದೂರಿನಲ್ಲಿ, ನಟನ ಪತ್ನಿ 10 ಲಕ್ಷ ರೂ.ಗಳ ಚಿನ್ನದ ಆಭರಣಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಅಲ್ಲದೆ ಆಕೆಗೆ ತೀವ್ರ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾಗಿ ಸಹ ದೂರಿನಲ್ಲಿ ಹೇಳಲಾಗಿದೆ. ನಟ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಬೆದರಿಕೆ ಹಾಕುತ್ತಿದ್ದನೆಂದು ಆಕೆ ಹೇಳಿದ್ದಾರೆ. ಅವರು 2019 ರ ಜನವರಿಯಲ್ಲಿ ವಿವಾಹವಾದರು ಮತ್ತು ಅದೇ ವರ್ಷ ನವೆಂಬರ್‌ನಲ್ಲಿ ಜನಿಸಿದ ಮಗನನ್ನು ಹೊಂದಿದ್ದಾರೆ. ಇವರಿಬ್ಬರಿಗೆ ಇದು ಎರಡನೇ ಮದುವೆ ಮತ್ತು ದೇವಿ ಅವರ ಮೊದಲ ಮದುವೆಯಿಂದ ಹುಟ್ಟಿದ ಒಬ್ಬ ಮಗನನ್ನು ಹೊಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


