ಅಮೆರಿಕಾದಿಂದ ಸೂಪರ್ ಸ್ಟಾರ್ ರಜನಿಕಾಂತ್ ವಾಪಸ್: ಫಿಟ್ ಅಂಡ್ ಫೈನ್ ಆಗಿ ಮರಳಿದ ತಲೈವಾ!
ಆರೋಗ್ಯ ತಪಾಸಣೆಗೆಂದು ಯುಎಸ್‌ಗೆ ತೆರಳಿದ್ದ ದಕ್ಷಿಣ ಭಾರತದ ಸೂಪರ್ ಸ್ಟಾರ್, ಕಾಲಿವುಡ್ ತಲೈವಾ ರಜನಿಕಾಂತ್ ಚೆನ್ನೈಗೆ ಮರಳಿದ್ದಾರೆ

ಆರೋಗ್ಯ ತಪಾಸಣೆಗೆಂದು ಯುಎಸ್‌ಗೆ ತೆರಳಿದ್ದ ದಕ್ಷಿಣ ಭಾರತದ ಸೂಪರ್ ಸ್ಟಾರ್, ಕಾಲಿವುಡ್ ತಲೈವಾ ರಜನಿಕಾಂತ್ ಚೆನ್ನೈಗೆ ಮರಳಿದ್ದಾರೆ.
ಆರೋಗ್ಯ ತಪಾಸಣೆಗಾಗಿ ಕಳೆದ ತಿಂಗಳು ನಟ ರಜನಿಕಾಂತ್. ಪತ್ನಿ ಲತಾ, ಪುತ್ರಿ ಐಶ್ವರ್ಯ ಜೊತೆಗೆ ಯುಎಸ್‌ಗೆ ರಜನಿಕಾಂತ್ ತೆರಳಿದ್ದರು. ಅಲ್ಲಿನ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾದರು.
ಮೂರು ವಾರಗಳ ಕಾಲ ಯುಎಸ್‌ನಲ್ಲಿದ್ದ ರಜನಿಕಾಂತ್ ಇಂದು ಬೆಳಗ್ಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಚೆನ್ನೈಗೆ ರಜನಿಕಾಂತ್ ಬಂದಿಳಿಯಲಿದ್ದಾರೆ ಎಂಬ ಸುದ್ದಿ ಬಹಿರಂಗವಾದ ನಂತರ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ದಂಡು ನೆರೆದಿತ್ತು.
ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳ ಸಾಗರವೇ ಏರ್‌ಪೋರ್ಟ್‌ನತ್ತ ಹರಿದುಬಂದಿತ್ತು. ಅಭಿಮಾನಿಗಳಿಗೆ ನಮಸ್ಕಾರ ಮಾಡಿದ ರಜನಿಕಾಂತ್ ತಮ್ಮ ನಿವಾಸದತ್ತ ಹೊರಟರು. ಆರೋಗ್ಯವಾಗಿ ವಾಪಸ್ ಬಂದ ರಜನಿಕಾಂತ್‌ರನ್ನ ನೋಡಿದ ಅಭಿಮಾನಿಗಳು ಸಂತಸಗೊಂಡರು. ರಜಿನಿಕಾಂತ್ ಫುಲ್ ಫಿಟ್ ಅಂಡ್ ಫೈನ್ ಆಗಿ ವಾಪಸ್ ಬಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


