ಸಿನಿಮಾ ಸುದ್ದಿ

ಧನಂಜಯ್ ಮತ್ತು ಕೆಆರ್‌ಜಿ ಸ್ಟುಡಿಯೋಸ್ ನಡುವೆ ಹಲವು ಚಿತ್ರಗಳ ಒಪ್ಪಂದಕ್ಕೆ ಸಹಿ!

ರತ್ನನ್ ಪ್ರಪಂಚ ಚಿತ್ರಕ್ಕಾಗಿ ಕೆಆರ್‌ಜಿ ಸ್ಟುಡಿಯೋ ಜೊತೆ ಕೈಜೋಡಿಸಿರುವ ಧನಂಜಯ್ ಪ್ರೊಡಕ್ಷನ್ ಹೌಸ್‌ನೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದಾರೆ.

ಧನಂಜಯ್ ಮತ್ತು ಕೆಆರ್‌ಜಿ ಸ್ಟುಡಿಯೋಸ್ ನಡುವೆ ಹಲವು ಚಿತ್ರಗಳ ಒಪ್ಪಂದಕ್ಕೆ ಸಹಿ!
ಧನಂಜಯ್
Published On :

ರತ್ನನ್ ಪ್ರಪಂಚ ಚಿತ್ರಕ್ಕಾಗಿ ಕೆಆರ್‌ಜಿ ಸ್ಟುಡಿಯೋ ಜೊತೆ ಕೈಜೋಡಿಸಿರುವ ಧನಂಜಯ್ ಪ್ರೊಡಕ್ಷನ್ ಹೌಸ್‌ನೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದಾರೆ. 

ನಟ ಮತ್ತು ಕೆಆರ್ಜಿ ಸ್ಟುಡಿಯೋಸ್ ನಿರ್ಮಾಪಕರಾದ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಹಲವು ಚಿತ್ರಗಳ ಒಪ್ಪಂದಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಗಾಂಧಿನಗರದಿಂದ ಕೇಳಿಬರುತ್ತಿವೆ.

ಒಪ್ಪಂದದಲ್ಲಿ ನಿಖರವಾದ ಸಂಖ್ಯೆಯ ಚಲನಚಿತ್ರಗಳು ಅಘೋಷಿತವಾಗಿದ್ದರೂ, ಸಹಯೋಗವು ದೀರ್ಘಕಾಲದವರೆಗೆ ಇರುತ್ತದೆ. ಕಥೆಗಳು ಮತ್ತು ಸಿಬ್ಬಂದಿಯನ್ನು ಅಂತಿಮಗೊಳಿಸಿದಾಗ ಯೋಜನೆಗಳ ಅಧಿಕೃತ ಘೋಷಣೆ  ಮಾಡಲಾಗುತ್ತದೆ ಎಂದು ಬಲ್ಲ ಮೂಲವೊಂದು ತಿಳಿಸಿದೆ.

ಎರಡನೇ ಲಾಕ್‌ಡೌನ್‌ನ ನಂತರ ಚಿತ್ರೀಕರಣಕ್ಕೆ ಮುಂದಾದ ಕನ್ನಡದ ಮೊದಲ ಕೆಲವು ಯೋಜನೆಗಳಲ್ಲಿ ರತ್ನನ್ ಪ್ರಪಂಚ ಸೇರಿದೆ. ಹಾಡುಗಳ ಚಿತ್ರೀಕರಣ ಹೊರತುಪಡಿಸಿ ಉಳಿದ ಭಾಗಗಳನ್ನು ಚಿತ್ರೀಕರಣ ಮುಗಿದಿದೆ. 

ರೋಹಿತ್ ಪಡಕಿ ನಿರ್ದೇಶನದ ಈ ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ನಿರ್ಮಾಪಕರು ಸಹ ಡಬ್ಬಿಂಗ್ ಕೆಲಸಗಳನ್ನು ನಡೆಸುತ್ತಿದ್ದಾರೆ. ಧನಂಜಯ್ ಅವರೊಂದಿಗೆ ಚಿತ್ರದಲ್ಲಿ ರೆಬಾ ಮೋನಿಕಾ ಜಾನ್, ಪ್ರಮೋದ್, ವೈನಿಧಿ ಜಗದೀಶ್, ಮತ್ತು ಹಿರಿಯ ನಟ ಉಮಾಶ್ರೀ ಕಾಣಿಸಿಕೊಂಡಿದ್ದಾರೆ. 

ಏತನ್ಮಧ್ಯೆ, ಅಲ್ಲು ಅರ್ಜುನ್ ಅಭಿನಯದ ಪ್ಯಾನ್-ಇಂಡಿಯಾ ಚಿತ್ರ ಪುಷ್ಪಾ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಧನಂಜಯ್ ಸಿಕಂದರಾಬಾದ್‌ಗೆ ತೆರಳಿದ್ದಾರೆ. ಜುಲೈ 7ರಂದು ಅವರು ಚಿತ್ರೀಕರಣ ಪುನರಾರಂಭಿಸಲಿದ್ದಾರೆ. ನಂತರ ವಿಜಯ್ ಮಿಲ್ಟನ್ ನಿರ್ದೇಶನದ ಶಿವರಾಜ್‌ಕುಮಾರ್ ಅವರ 123ನೇ ಚಿತ್ರದ ತಂಡವನ್ನು ಸೇರಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.