ಸಿನಿಮಾ ಸುದ್ದಿ

ಭಾರತೀಯ ಚಿತ್ರರಂಗದಿಂದ ಈ ವರ್ಷ ಅತಿ ಹೆಚ್ಚು ರೀ ಟ್ವೀಟ್, ಲೈಕ್ ಪಡೆದ ಪೋಸ್ಟ್ ಇದು!

ದಕ್ಷಿಣ ಭಾರತದ ನಟ ವಿಜಯ್ ದಳಪತಿ ಫೋಸ್ಟ್ ಮಾಡಿದ್ದ ಅವರ ಮುಂದಿನ 'ಬೀಸ್ಟ್' ಚಿತ್ರದ ಫಸ್ಟ್ ಲುಕ್ 2021ರಲ್ಲಿ ಭಾರತೀಯ ಸಿನಿಮಾದಿಂದ ಅತಿ ಹೆಚ್ಚು ರೀ ಟ್ವೀಟ್ ಹಾಗೂ ಅತಿ ಹೆಚ್ಚು ಲೈಕ್ ಮಾಡಲಾಗಿದೆ ಎಂದು ಟ್ವೀಟರ್ ಗುರುವಾರ ಹೇಳಿದೆ.

ಭಾರತೀಯ ಚಿತ್ರರಂಗದಿಂದ ಈ ವರ್ಷ ಅತಿ ಹೆಚ್ಚು ರೀ ಟ್ವೀಟ್, ಲೈಕ್ ಪಡೆದ ಪೋಸ್ಟ್ ಇದು!
ನಟ ವಿಜಯ್ ದಳಪತಿ
Published On :

ನವದೆಹಲಿ: ದಕ್ಷಿಣ ಭಾರತದ ನಟ ವಿಜಯ್ ದಳಪತಿ ಫೋಸ್ಟ್ ಮಾಡಿದ್ದ ಅವರ ಮುಂದಿನ 'ಬೀಸ್ಟ್' ಚಿತ್ರದ ಫಸ್ಟ್ ಲುಕ್ 2021ರಲ್ಲಿ ಭಾರತೀಯ ಸಿನಿಮಾದಿಂದ ಅತಿ ಹೆಚ್ಚು ರೀ ಟ್ವೀಟ್ ಹಾಗೂ ಅತಿ ಹೆಚ್ಚು ಲೈಕ್ ಮಾಡಲಾಗಿದೆ ಎಂದು ಟ್ವೀಟರ್ ಗುರುವಾರ ಹೇಳಿದೆ.

 ಈ ವರ್ಷದ ಆರಂಭದಲ್ಲಿ 'ಮಾಸ್ಟರ್ ' ಬ್ಲಾಕ್ ಬೂಸ್ಟರ್ ನೊಂದಿಗೆ ಇದೇ ವರ್ಷದ ಜೂನ್ ನಲ್ಲಿ ತನ್ನ ಹೊಸ ಚಿತ್ರದ ಫಸ್ಟ್ ಲುಕ್ ನ್ನು ವಿಜಯ್ ಫೋಸ್ಟ್ ಮಾಡಿದ್ದರು. ಈ ಪೋಸ್ಟ್ ಸುಮಾರು 3.42 ಲಕ್ಷ ಕ್ಕೂ ಹೆಚ್ಚು ಲೈಕ್ ಮತ್ತು 10 ಸಾವಿರ ಕ್ಕೂ ಹೆಚ್ಚು  ರೀ ಟ್ವೀಟ್ ಪಡೆದುಕೊಂಡಿದೆ. ಕಳೆದ ವರ್ಷ ವಿಜಯ್ ಅವರ ಸೆಲ್ಫಿ ವಿತ್ ಫ್ಯಾನ್ಸ್ ಪೋಸ್ಟ್ ಕೂಡಾ ಹೆಚ್ಚಿನ ರೀ ಟ್ವೀಟ್ ಮಾಡಲಾಗಿತ್ತು. 

ಚಿತ್ರರಂಗದಿಂದ ದಕ್ಷಿಣದ ಐದು ಚಿತ್ರಗಳು ಹೆಚ್ಚಿನ ರೀ ಟ್ವೀಟ್ ಹಾಗೂ ಲೈಕ್ ಪಡೆದುಕೊಂಡಿವೆ. ವಿಜಯ್ ಅವರ ಮಾಸ್ಟರ್, ಬೀಸ್ಟ್ ಚಿತ್ರಗಳು ಕ್ರಮವಾಗಿ ನಂಬರ್ 1 ಮತ್ತು ಮೂರನೇ ಸ್ಥಾನದಲ್ಲಿದ್ದರೆ. ಅಜಿತ್ ಕುಮಾರ್ ಅಭಿನಯದ ವಾಲಿಮೈ ನಂಬರ್ 2, ಸೂರ್ಯ ಅಭಿಯನದ ಜೈ ಭೀಮ್ ನಾಲ್ಕನೇ ಸ್ಥಾನದಲ್ಲಿದೆ. ಪವನ್ ಕಲ್ಯಾಣ್ ಅವರ ವಕೀಲ್ ಸಾಬ್ ಮತ್ತು ಅಮಿತಾಬ್ ಬಚ್ಚನ್ ಮತ್ತು ತಾಪ್ಸೆ ಅಭಿನಯದ ತೆಲುಗು ರೀಮೆಕ್ ಪಿಂಕ್ ಐದನೇ ಸ್ಥಾನದಲ್ಲಿದೆ. 

ಸಾಂಕ್ರಾಮಿಕ ಅವಧಿಯಲ್ಲಿ ಜನರಿಗೆ ವಿವಿಧ ರೀತಿಯ ಮಾನವೀಯ ಕೆಲಸಗಳನ್ನು ಮಾಡಿದ ಬಾಲಿವುಡ್ ನಟ ಸೋನು ಸೂದ್ ಬಗ್ಗೆ ಹೆಚ್ಚಿನ ಜನರು ಮಾತನಾಡಿದ್ದರೆ, ನಂತರದ ಸ್ಥಾನದಲ್ಲಿ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಮತ್ತು ಶಾರೂಖ್ ಖಾನ್ ಇದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.