'ಓಲ್ಡ್ ಮಾಂಕ್' ಸಿನಿಮಾ ವಿತರಣೆ ಹಕ್ಕು ಹಿಂದಿ ಡಿಸ್ಟ್ರಿಬ್ಯೂಟರ್ ಗೆ ಮಾರಾಟ!
ನಿರ್ದೇಶಕ ಶ್ರೀನಿ ತಮ್ಮ ಮುಂದಿನ ಸಿನಿಮಾ ಓಲ್ಡ್ ಮಾಂಕ್ ಸಿದ್ದಗೊಳಿಸಿದ್ದಾರೆ. ಓಲ್ಡ್ ಮಾಂಕ್‌ನ ಔಟ್‌ರೇಟ್ ಹಕ್ಕುಗಳನ್ನು ಪ್ರಮುಖ ಹಿಂದಿ ವಿತರಕರಾದ ಅಭಿಜಿತ್ ಎಂಟರ್‌ಪ್ರೈಸಸ್‌ಗೆ ಮಾರಾಟ ಮಾಡಲಾಗಿದೆ.

ನಿರ್ದೇಶಕ ಶ್ರೀನಿ ತಮ್ಮ ಮುಂದಿನ ಸಿನಿಮಾ ಓಲ್ಡ್ ಮಾಂಕ್ ಸಿದ್ದಗೊಳಿಸಿದ್ದಾರೆ. ಓಲ್ಡ್ ಮಾಂಕ್‌ನ ಔಟ್‌ರೇಟ್ ಹಕ್ಕುಗಳನ್ನು ಪ್ರಮುಖ ಹಿಂದಿ ವಿತರಕರಾದ ಅಭಿಜಿತ್ ಎಂಟರ್‌ಪ್ರೈಸಸ್‌ಗೆ ಮಾರಾಟ ಮಾಡಲಾಗಿದೆ.
ಆಶಿಖಿ, ಗುಲಾಮ್, ಗುಲ್ಲಿ ಬಾಯ್ ಹಾಗೂ ತಾನಾಜಿ ಸಿನಿಮಾಗಳನ್ನು ವಿತರಣೆ ಮಾಡಿದ್ದ ಅಬಿಜಿತ್ ಎಂಟರ್ ಪ್ರೈಸಸ್ ಓಲ್ಡ್ ಮಾಂಕ್ ವಿತರಣೆ ಹಕ್ಕು ಪಡೆದುಕೊಂಡಿದೆ.
ರೋಮ್ಯಾಂಟಿಕ್ ಕಥಾ ಹಂದರವುಳ್ಳ ಓಲ್ಡ್ ಮಾಂಕ್ ಸಿನಿಮಾವನ್ನು 2022 ರಲ್ಲಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಸಿನಿಮಾದಲ್ಲಿ ಅದಿತಿ ಪ್ರಭುದೇವ, ಮಲಯಾಳಂ ನಟ ಸುದೇವ್ ನಾಯರ್ ಖಳನಾಯಕನ ಪಾತ್ರಲ್ಲಿ ನಟಿಸಿದ್ದಾರೆ.
ಎಸ್ .ನಾರಾಯಣ, ಸಿಹಿಕಹಿ ಚಂದ್ರು, ಕೆಟಿ ರಮಾ, ಡಿಂಗ್ರಿ ನಾಗರಾಜ್ ಹಾಗೂ ಬೆಂಗಳೂರು ನಾಗೇಶ್ ಸೇರಿದಂತೆ ಹಲವು ಹಿರಿಯ ಕಲಾವಿದರು ನಟಿಸಿದ್ದಾರೆ. ಓಲ್ಡ್ ಮಾಂಕ್ ಚಿತ್ರಕ್ಕೆ ಸೌರಭ್ ವೈಭವ್ ಸಂಗೀತ ನೀಡಿದರೆ, ಭರತ್ ಪರಶುರಾಮ್ ಛಾಯಾಗ್ರಹಣ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


