ಸಿನಿಮಾ ಸುದ್ದಿ

ಧ್ರುವ ಸರ್ಜಾ- ಎ.ಪಿ ಅರ್ಜುನ್ ಕಾಂಬಿನೇಷನ್ ಸಿನಿಮಾ 'ಮಾರ್ಟಿನ್'ಗೆ ವೈಭವಿ ಶಾಂಡಿಲ್ಯ ನಾಯಕಿ

ಮರಾಠಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಸರು ಮಾಡಿರುವ ವೈಭವಿ, 'ರಾಜ್ ವಿಷ್ಣು' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದರು.

ಧ್ರುವ ಸರ್ಜಾ- ಎ.ಪಿ ಅರ್ಜುನ್ ಕಾಂಬಿನೇಷನ್ ಸಿನಿಮಾ 'ಮಾರ್ಟಿನ್'ಗೆ ವೈಭವಿ ಶಾಂಡಿಲ್ಯ ನಾಯಕಿ
ವೈಭವಿ ಶಾಂಡಿಲ್ಯ
Published On :

ನಿರ್ದೇಶಕ ಎ.ಪಿ ಅರ್ಜುನ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ನಿನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಮಾರ್ಟಿನ್ ಗೆ ನಾಯಕಿಯಾಗಿ ನಟಿ ವೈಭವಿ ಶಾಂಡಿಲ್ಯ ಆಯ್ಕೆಯಾಗಿದ್ದಾರೆ.

<strong>ವೈಭವಿ ಶಾಂಡಿಲ್ಯ</strong>
ವೈಭವಿ ಶಾಂಡಿಲ್ಯ

ಮರಾಠಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಸರು ಮಾಡಿರುವ ವೈಭವಿ, 'ರಾಜ್ ವಿಷ್ಣು' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದರು. ನಿರ್ಮಾಣ ಹಂತದಲ್ಲಿರುವ ಯೋಗರಾಜ್ ಭಟ್ ನಿರ್ದೇಶದ ಗಾಳಿಪಟ-2 ಸಿನಿಮಾದಲ್ಲೂ ವೈಭವಿ ನಟಿಸುತ್ತಿದ್ದಾರೆ. 'ಮಾರ್ಟಿನ್' ಅವರ ಮೂರನೇ ಕನ್ನಡ ಸಿನಿಮಾ ಆಗಲಿದೆ.

ತಾರಾಗಣ ವಿಚಾರದಲ್ಲಿ ಮಾರ್ಟಿನ್ ತಂಡ ಗುಟ್ಟು ಕಾಪಾಡಿಕೊಂಡಿದ್ದು, ಯಾವುದೇ ಮಾಹಿತಿಯನ್ನು ಹೊರಬಿಟ್ಟಿಲ್ಲ. ವೈಭವಿ ಶಾಂಡಿಲ್ಯ ಅವರು ಈಗಾಗಲೇ ಚಿತ್ರತಂಡವನ್ನು ಸೇರಿಕೊಂಡಿದ್ದು, ಚಿತ್ರೀಕರಣದಲ್ಲಿ ತೊಡಗಿದ್ದಾರೆ ಎನ್ನುವುದು ಮೂಲಗಳಿಂದ ತಿಳಿದುಬಂದಿದೆ.

Related Article

ಪದವಿ ಪೂರ್ವ ಸಿನಿಮಾಗೆ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಲೇಟೆಸ್ಟ್ ಸೇರ್ಪಡೆ

ಫ್ರಾನ್ಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಟೇಶ್ ಹೆಗ್ಡೆ ನಿರ್ದೇಶನದ ಪೆಡ್ರೊ ಕನ್ನಡ ಸಿನಿಮಾಗೆ ಪ್ರಶಸ್ತಿ

ಶಾನ್ವಿ, ರಘು ದೀಕ್ಷಿತ್ ನಟನೆಯ 'ಬ್ಯಾಂಗ್' ಸಿನಿಮಾದ ಫರ್ಸ್ಟ್ ಲುಕ್, ಟೀಸರ್ ಬಿಡುಗಡೆ

ಪವನ್ ಒಡೆಯರ್ ನಿರ್ದೇಶನದ 'ರೆಮೋ' ಸಂಕ್ರಾಂತಿಗೆ ರಿಲೀಸ್?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.