ಶಾನ್ವಿ, ರಘು ದೀಕ್ಷಿತ್ ನಟನೆಯ 'ಬ್ಯಾಂಗ್' ಸಿನಿಮಾದ ಫರ್ಸ್ಟ್ ಲುಕ್, ಟೀಸರ್ ಬಿಡುಗಡೆ
ಗಣೇಶ್ ಪರಶುರಾಮ್ ಬ್ಯಾಂಗ್ ಸಿನಿಮಾ ನಿರ್ದೇಶಿಸಿದ್ದಾರೆ. ರಿತ್ವಿಕ್ ಮುರಳೀಧರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅವರು ಈ ಹಿಂದೆ 'ಸಂಕಷ್ಟಕರ ಗಣಪತಿ' ಸಿನಿಮಾಗೆ ಸಂಗೀತ ನೀಡಿದ್ದರು.

ಶ್ರೀಗಣೇಶ್ ಪರಶುರಾಮ್ ಬರೆದು ನಿರ್ದೇಶಿಸಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಬ್ಯಾಂಗ್' ಫರ್ಸ್ಟ್ ಲುಕ್ ಮತ್ತು ಟೀಸರ್ ಬಿಡುಗಡೆಯಾಗಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಶಾನ್ವಿ ಶ್ರೀವಾಸ್ತವ, ರಿತ್ವಿಕ್ ಮುರಳೀಧರ್, ಸಾತ್ವಿಕಾ, ನಾಟ್ಯ ರಂಗ, ಸುನಿಲ್ ಗುಜ್ಜರ್ ಅವರು ನಟಿಸಿದ್ದಾರೆ.
ಇದನ್ನೂ ಓದಿ: ಕೊನೆಗೂ ಹೇರ್ ಕಟ್ ಮಾಡಿಸಿದ ಪ್ರಜ್ವಲ್ ದೇವರಾಜ್: ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿದ 'ಡೈನಾಮಿಕ್ ಪ್ರಿನ್ಸ್'
ಗಣೇಶ್ ಪರಶುರಾಮ್ ಬ್ಯಾಂಗ್ ಸಿನಿಮಾ ನಿರ್ದೇಶಿಸಿದ್ದಾರೆ. ರಿತ್ವಿಕ್ ಮುರಳೀಧರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅವರು ಈ ಹಿಂದೆ 'ಸಂಕಷ್ಟಕರ ಗಣಪತಿ' ಸಿನಿಮಾಗೆ ಸಂಗೀತ ನೀಡಿದ್ದರು. ವಿನೂತನ ಕಥಾವಸ್ತುವನ್ನು ಹೊಂದಿದ್ದ ಆ ಸಿನಿಮಾ ಪ್ರೇಕ್ಷಕರನ್ನು ನಗಿಸಿತ್ತು.
ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ನಟರಾಗುತ್ತಿದ್ದಾರೆ ಎನ್ನುವುದು ವಿಶೇಷ. ಬ್ಯಾಂಗ್ ಸಿನಿಮಾಗೆ ಪೂಜಾ ವಸಂತ್ ಕುಮಾರ್ ಅವರು ಹಣ ಹೂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


