ಸಿನಿಮಾ ಸುದ್ದಿ

ಮಧುರ ಪ್ರೇಮಕಥೆಗಾಗಿ ಒಂದಾಗುತ್ತಿದ್ದಾರೆ ಡಾರ್ಲಿಂಗ್ ಕೃಷ್ಣ- ಶಿವ ತೇಜಸ್

ಹಲವು ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟ ಕೃಷ್ಣ ನಿರ್ದೇಶಕ ಶಿವ ತೇಜಸ್ ಅವರ ರೋಮ್ಯಾಂಟಿಕ್ ಪ್ರೇಮಕಥೆಯಲ್ಲಿ ನಟಿಸುತ್ತಿದ್ದಾರೆ.

ಮಧುರ ಪ್ರೇಮಕಥೆಗಾಗಿ ಒಂದಾಗುತ್ತಿದ್ದಾರೆ ಡಾರ್ಲಿಂಗ್ ಕೃಷ್ಣ- ಶಿವ ತೇಜಸ್
ಕೃಷ್ಣ
Published On :

ಹಲವು ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟ ಕೃಷ್ಣ ನಿರ್ದೇಶಕ ಶಿವ ತೇಜಸ್ ಅವರ ರೋಮ್ಯಾಂಟಿಕ್ ಪ್ರೇಮಕಥೆಯಲ್ಲಿ ನಟಿಸುತ್ತಿದ್ದಾರೆ.

ಮಳೆ, ಧೈರ್ಯಂ ಮತ್ತು ಶಿವಾರ್ಜುನ ಸಿನಿಮಾಗಳನ್ನು ನಿರ್ದೇಶಿಸಿರುವ ಶಿವ ತೇಜಸ್ ಜೊತೆ ಲವ್ ಮಾಕ್ಟೇಲ್ ಹೀರೋ ಜೊತೆಯಾಗಲಿದ್ದಾರೆ. 

ಸುಮಂತ್ ಕ್ರಾಂತಿ ಅವರ ರಶ್ಮಿ ಫಿಲ್ಮ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ, ಆಗಸ್ಟ್ 27 ರಂದು ಸ್ಕ್ರಿಪ್ಟ್ ಪೂಜೆ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ನವೆಂಬರ್ ನಲ್ಲಿ ಶೂಟಿಂಗ್ ಆರಂಭವಾಗಲಿದ್ದು  ಕಲಾವಿದರ ಆಯ್ಕೆ ಅಂತಿಮವಾಗಲಿದೆ.

ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಇದೇ ವೇಳೆ ಹಲವು ದಿನಗಳಿಂದ ವಿಶ್ರಾಂತಿಯಲ್ಲಿದ್ದ ಕೃಷ್ಣ ಆಗಸ್ಟ್ 27 ರಿಂದ ಬ್ಯಾಚಲರ್ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.

ಇದಾದ ನಂತರ ರಚಿತಾ ರಾಮ್ ನಟನೆಯ ಲವ್ ಮಿ ಆರ್ ಹೇಟ್ ಮಿ ಹಾಗೂ ಶುಗರ್ ಫ್ಯಾಕ್ಟರಿ ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೋಳ್ಳಲಿದ್ದಾರೆ.  ಇದರ ಜೊತೆಗೆ ಲವ್ ಮಾಕ್ಟೇಲ್ 2 ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.