ಸಿನಿಮಾ ಸುದ್ದಿ

ತಮಿಳು ಕಿರುತೆರೆಯ ಜನಪ್ರಿಯ ನಿರೂಪಕ, ನಟ ಆನಂದ ಕಣ್ಣನ್ ನಿಧನ

1990 ಮತ್ತು 2000 ರ ದಶಕದಲ್ಲಿ ತಮಿಳು ಕಿರುತೆರೆಯಲ್ಲಿ ಜನಪ್ರಿಯ ನಿರೂಪಕರಾಗಿದ್ದ ಆನಂದ ಕಣ್ಣನ್ ಸೋಮವಾರ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ.

ತಮಿಳು ಕಿರುತೆರೆಯ ಜನಪ್ರಿಯ ನಿರೂಪಕ, ನಟ ಆನಂದ ಕಣ್ಣನ್ ನಿಧನ
ಆನಂದ್ ಕಣ್ಣನ್
Published On :

ಚೆನ್ನೈ: 1990 ಮತ್ತು 2000 ರ ದಶಕದಲ್ಲಿ ತಮಿಳು ಕಿರುತೆರೆಯಲ್ಲಿ ಜನಪ್ರಿಯ ನಿರೂಪಕರಾಗಿದ್ದ ಆನಂದ ಕಣ್ಣನ್ ಸೋಮವಾರ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ.

48 ವರ್ಷದ ಆನಂದ್ ಕಣ್ಣನ್ ಸಿಂಗಾಪೂರ್ ನಲ್ಲಿ ನಿರೂಪಣಾ ವೃತ್ತಿ ಆರಂಭಿಸಿ ನಂತರ ಚೆನ್ನೈಗೆ ಶಿಫ್ಟ್ ಆಗಿದ್ದರು. ತಮಿಳು ರೇಡಿಯೋ ಚಾನೆಲ್ ನಲ್ಲಿ ಆರ್ ಜೆ ಯಾಗಿ ಕೆಲಸ ಮಾಡುತ್ತಿದ್ದರು. ನಂತರ ಅವರು ಪ್ರಸಿದ್ದ ಚಾನೆಲ್ ನಲ್ಲಿ ವಿಜೆಯಾಗಿ ಜನಪ್ರಿಯರಾದರು. ಇವರಿಗೆ ಅಪಾರ ಅಭಿಮಾನಿ ಬಳಗವಿತ್ತು.

ಇದರ ಜೊತೆಗೆ ಕೆಲವು ಧಾರಾವಾಹಿ ಮತ್ತು ಸಿನಿಮಾಗಳಲ್ಲಿಯೂ ನಟಿಸಿದ್ದರು. ಅವರ ಅಕಾಲಿಕ ನಿಧನದಿಂದ ಅಭಿಮಾನಿಗಳು ಆಘಾತ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.