ನಿರಂಜನ ಸುಧೀಂದ್ರ ಮೂರನೇ ಸಿನಿಮಾಗೆ ವಿನಯ್ ಕೃಷ್ಣ ನಿರ್ದೇಶನ
ನಿರಂಜನ್ ಸುಧೀಂದ್ರ ತನ್ನ ಚೊಚ್ಚಲ ಚಿತ್ರ 'ನಮ್ಮ ಹುಡುಗರು' ಬಿಡುಗಡೆಗೆ ಕಾಯುತ್ತಿದ್ದರೂ, ಈಗಾಗಲೇ ಮೂರನೇ ಸಿನಿಮಾಗೆ ಸಹಿ ಮಾಡಿದ್ದಾರೆ.

ನಿರಂಜನ್ ಸುಧೀಂದ್ರ ತನ್ನ ಚೊಚ್ಚಲ ಚಿತ್ರ 'ನಮ್ಮ ಹುಡುಗರು' ಬಿಡುಗಡೆಗೆ ಕಾಯುತ್ತಿದ್ದರೂ, ಈಗಾಗಲೇ ಮೂರನೇ ಸಿನಿಮಾಗೆ ಸಹಿ ಮಾಡಿದ್ದಾರೆ.
ನಿರಂಜನ್ ಸುಧೀಂದ್ರ ಎರಡನೇ ಚಿತ್ರ, ಸೂಪರ್ ಸ್ಟಾರ್ ಚಿತ್ರೀಕರಣ ಕೊನೆಯ ಹಂತದಲ್ಲಿದೆ, ಇದೇ ವೇಳೆ ವಿನಯ್ ಕೃಷ್ಣ ಜೊತೆ ಮತ್ತೊಂದು ಚಿತ್ರಕ್ಕಾಗಿ ನಿರಂಜನ್ ಜೊತೆಯಾಗಲಿದ್ದಾರೆ. ಸೀಜರ್ ಸಿನಿಮಾ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ವಿನಯ್ ಕೃಷ್ಣ ಅವರ ಎರಡನೇ ಸಿನಿಮಾ ಇದಾಗಿದ್ದು. ಆ್ಯಕ್ಷನ್ ಓರಿಯೆಂಟೆಂಡ್ ಸಿನಿಮಾವಾಗಿದೆ.
ತ್ರಿವಿಕ್ರಮ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಮೂಲಕ ಮಲಯಾಳಂ ನಟಿ ಸೌಮ್ಯ ಮೆನನ್ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರು ಚಿತ್ರದಲ್ಲಿ ಮಹಿಳಾ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದ ಪ್ರಮುಖ ಪಾತ್ರಕ್ಕಾಗಿ ಕನ್ನಡದ ಕೆಲವು ದೊಡ್ಡ ತಾರೆಯರೊಂದಿಗೆ ತಯಾರಕರು ಮಾತುಕತೆ ನಡೆಸುತ್ತಿದ್ದಾರೆ. ಇದರ ಬಗ್ಗೆ ಅಪ್‌ಡೇಟ್ ಶೀಘ್ರದಲ್ಲೇ ಹೊರಬೀಳಲಿದೆ.
ಇನ್ನೂ ಹೆಸರಿಡದ ಈ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಲಿದ್ದಾರೆ. ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಯೋಜಿಸಿದೆ. ಆಗಸ್ಟ್ 20 ರಂದು ನಿರಂಜನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಇತರ ವಿವರಗಳು ಮತ್ತು ಚಿತ್ರದ ಮೊದಲ ಟೀಸರ್ ಬಹಿರಂಗವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


