ನಾಲ್ಕು ಚಿತ್ರಗಳನ್ನು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಲು ತಮಿಳು ನಟ ಸೂರ್ಯ ಸಹಿ
ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಸೂರ್ಯ ಅವರು ಗುರುವಾರ, ಆಗಸ್ಟ್ 5, 2021 ರಂದು, ಅಮೆಜಾನ್ ಪ್ರೈಮ್ ವೀಡಿಯೋದೊಂದಿಗೆ ವಿಶೇಷ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಮುಂಬೈ: ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಸೂರ್ಯ ಅವರು ಗುರುವಾರ, ಆಗಸ್ಟ್ 5, 2021 ರಂದು, ಅಮೆಜಾನ್ ಪ್ರೈಮ್ ವೀಡಿಯೋದೊಂದಿಗೆ ವಿಶೇಷ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದದಡಿಯಲ್ಲಿ ಅವರ ನಾಲ್ಕು ಮುಂಬರುವ ಚಿತ್ರಗಳು ನೇರವಾಗಿ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತವೆ.
ಒಪ್ಪಂದದ ಭಾಗವಾಗಿ, ಮುಂದಿನ ನಾಲ್ಕು ತಿಂಗಳಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸೂರ್ಯ ಅವರ ನಿರ್ಮಾಣ ಸಂಸ್ಥೆ 2ಡಿ ಎಂಟರ್ಟೈನ್ಮೆಂಟ್ನ ಮುಂದಿನ ನಾಲ್ಕು ತಮಿಳು ಚಿತ್ರಗಳು ಅಮೆಜಾನ್ ಪ್ರೈಮ್ ನಲ್ಲಿ ಪ್ರದರ್ಶನಗೊಳ್ಳಲಿವೆ.
ಈ ಹಿಂದೆ "ಪೊನ್ಮಂಗಲ್ ವಂದಲ್" ಮತ್ತು "ಸೂರರೈ ಪೊಟ್ರು" ನಂತಹ ಚಿತ್ರಗಳನ್ನು ಒಟಿಟಿಯಲ್ಲಿ ಅಭಿಮಾನಿಗಳು ವೀಕ್ಷಿಸಿದ್ದರು. ಈ ಪಾಲುದಾರಿಕೆಯಲ್ಲಿ ಮತ್ತೊಂದು ಹೆಜ್ಜೆ ಹಾಕಲು ನನಗೆ ಸಂತೋಷವಾಗುತ್ತಿದೆ ಎಂದು 2ಡಿ ಎಂಟರ್ಟೈನ್ಮೆಂಟ್ನ ಸಂಸ್ಥಾಪಕ ಸೂರ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಕಳೆದ ವರ್ಷದಿಂದ ನಾವು ಬದಲಾಗಿದ್ದೇವೆ. ಅಭೂತಪೂರ್ವ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು, ನಾವು ವಿಭಿನ್ನ ಮಾದರಿಗಳ ಬಿಡುಗಡೆಗಳಲ್ಲಿ ಹೊಸತನವನ್ನು ಹೊಂದಿದ್ದೇವೆ. 2 ಡಿ ಯ ಇತ್ತೀಚಿನ ಚಲನಚಿತ್ರ ಬಿಡುಗಡೆಗಾಗಿ ಅಮೆಜಾನ್, ಸ್ಟ್ರೀಮಿಂಗ್ ಸೇವೆಯಾಗಿ ಹೊರಹೊಮ್ಮಿತು. 'ಪೊನ್ಮಂಗಲ್ ವಂದಲ್' ನಿಂದ 'ಸೂರರೈ ಪೊಟ್ರು' ನಂತಹ ಸುಂದರ ಕಥೆಗಳು ಪ್ರೇಕ್ಷಕರನ್ನು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ರಂಜಿಸಿದವು "ಎಂದು ಸೂರ್ಯ ಹೇಳಿದ್ದಾರೆ.
ಈಗ "ಜೈ ಭೀಮ್", ಕೌಟುಂಬಿಕ ಚಿತ್ರ "ಉದನ್ಪಿರಪ್ಪೆ", ಮಕ್ಕಳ ಚಿತ್ರ "ಓ ಮೈ ಡಾಗ್" ಮತ್ತು ವಿಡಂಬನಾತ್ಮಕ ಚಿತ್ರ "ರಾಮನ್ ಆಂಡಲಂ ರಾವಣನ್ ಆಂಡಲಮ್" ಅಮೆಜಾನ್ ಪ್ರೈಮ್ ನಲ್ಲಿ ನಲ್ಲಿ ಬಿಡುಗಡೆಯಾಗುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


