ಸಿನಿಮಾ ಸುದ್ದಿ

ಅಣ್ಣಯ್ಯ, ರನ್ನ ಸಿನಿಮಾ ನಿರ್ಮಾಪಕ ಎಂ. ಚಂದ್ರಶೇಖರ್ ಇನ್ನಿಲ್ಲ

ಸುದೀಪ್ ನಟನೆಯ 'ರನ್ನ' ಮತ್ತು ರವಿಚಂದ್ರನ್ ನಟನೆಯ ಅಣ್ಣಯ್ಯ ಸಿನಿಮಾ ಖ್ಯಾತಿಯ ನಿರ್ಮಾಪಕ ಎಂ. ಚಂದ್ರಶೇಖರ್ ಕೊರೊನಾಗೆ ಬಲಿಯಾಗಿದ್ದಾರೆ.

ಅಣ್ಣಯ್ಯ, ರನ್ನ ಸಿನಿಮಾ ನಿರ್ಮಾಪಕ ಎಂ. ಚಂದ್ರಶೇಖರ್ ಇನ್ನಿಲ್ಲ
ಎಂ.ಚಂದ್ರಶೇಖರ್
Published On :

ಸುದೀಪ್ ನಟನೆಯ 'ರನ್ನ' ಮತ್ತು ರವಿಚಂದ್ರನ್ ನಟನೆಯ ಅಣ್ಣಯ್ಯ ಸಿನಿಮಾ ಖ್ಯಾತಿಯ ನಿರ್ಮಾಪಕ ಎಂ. ಚಂದ್ರಶೇಖರ್ ಕೊರೊನಾಗೆ ಬಲಿಯಾಗಿದ್ದಾರೆ.

ನಿಮಿಷಾಂಬ ಪ್ರೊಡಕ್ಷನ್ ನ ಅಣ್ಣಯ್ಯ, ಬಿಂದಾಸ್, ಏನೋ ಒಂಥರಾ, ರನ್ನ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಸ್ಯಾಂಡಲ್ ವುಡ್ ನ ಅನ್ನದಾತನನ್ನು ಕೊರೊನಾ ಬಲಿ ಪಡೆದಿದೆ. 

ಕಳೆದ 23 ದಿನಗಳ ಹಿಂದೆ ಚಂದ್ರಶೇಖರ್ ಅವರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿತ್ತು. ನಂತರ ಮಣಿಪಾಲ್ ಸೆಂಟರ್ ಗೆ ದಾಖಲಾಗಿದ್ದರು. ಬಳಿಕ ಕೋವಿಡ್ ನಿಂದ ಗುಣಮುಖರಾಗಿದ್ದಾದರೂ ಶ್ವಾಸಕೋಶ ಸಮಸ್ಯೆ ಉಲ್ಬಣಗೊಂಡು ಇಂದು (ಏಪ್ರಿಲ್ 29) ಕೊನೆಯುಸಿರೆಳೆದಿದ್ದಾರೆ.

ನಿರ್ಮಾಪಕ ಚಂದ್ರಶೇಖರ್ ಇತ್ತೀಚಿಗಷ್ಟೆ ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶನದ ಉಪೇಂದ್ರ ನಟನೆಯ ಹೊಸ ಸಿನಿಮಾ ಅನೌನ್ಸ್ ಮಾಡಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.