ಸಿನಿಮಾ ಸುದ್ದಿ

'ಲೆಟ್ಸ್ ಬ್ರೇಕ್ ಅಪ್' ಕಲಾವಿದರು ಬದಲು: ಪ್ರಮುಖ ಪಾತ್ರದಲ್ಲಿ ರಚನಾ ಇಂದರ್, ಶ್ರೀ ಮಹಾದೇವ್

ಸ್ವರೂಪ್ ನಿರ್ದೇಶನದ ಲೆಟ್ಸ್ ಬ್ರೇಕ್ ಅಪ್ ಸಿನಿಮಾ ಕಲಾವಿದರು ಬದಲಾಗಿದ್ದಾರೆ. ಇರುವುದೆಲ್ಲವ ಬಿಟ್ಟು ಸಿನಿಮಾದ ಶ್ರೀ ಮಹಾದೇವ್, ಮತ್ತು ಲವ್ ಮಾಕ್ಟೇಲ್ ನಟಿ ರಚನಾ ಇಂದರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

'ಲೆಟ್ಸ್ ಬ್ರೇಕ್ ಅಪ್' ಕಲಾವಿದರು ಬದಲು: ಪ್ರಮುಖ ಪಾತ್ರದಲ್ಲಿ ರಚನಾ ಇಂದರ್, ಶ್ರೀ ಮಹಾದೇವ್
ರಚನಾ ಮತ್ತು ಶ್ರೀ ಮಹಾದೇವ್
Published On :

ಸ್ವರೂಪ್ ನಿರ್ದೇಶನದ ಲೆಟ್ಸ್ ಬ್ರೇಕ್ ಅಪ್ ಸಿನಿಮಾ ಕಲಾವಿದರು ಬದಲಾಗಿದ್ದಾರೆ. ಇರುವುದೆಲ್ಲವ ಬಿಟ್ಟು ಸಿನಿಮಾದ ಶ್ರೀ ಮಹಾದೇವ್, ಮತ್ತು ಲವ್ ಮಾಕ್ಟೇಲ್ ನಟಿ ರಚನಾ ಇಂದರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ಈ ಹಿಂದೆ ವಿಹಾನ್ ಮತ್ತು ಸಂಜನಾ ದಾಸ್ ಈ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಸ್ವರೂಪ್ ಈ ಹಿಂದೆ ಉಪೇಂದ್ರ ಜೊತೆ ಕೆಲಸ ಮಾಡಿದ್ದರು, ಸ್ವರೂಪ್ ಯಾದವ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಏಪ್ರಿಲ್ 9  ರಂದು ಸ್ಕ್ಪಿಪ್ಟ್ ಪೂಜೆ ನಡೆದಿತ್ತು, ಈಗಾಗಲೇ ಟೀಸರ್ ಶೂಟಿಂಗ್ ಮುಗಿದಿದೆ, ಕೊರೋನಾ ಲಾಕ್ ಡೌನ್ ಮುಗಿದ ನಂತರ ಸಿನಿಮಾಗೆ ಮುಹೂರ್ಥ ನೆರವೇರಿಸಲಾಗುವುದು.

ಸಾಂಕ್ರಾಮಿಕ ಪರಿಸ್ಥಿತಿಗೆ ಅನುಗುಣವಾಗಿ ಮೇ-ಅಂತ್ಯ ಅಥವಾ ಜೂನ್ ವೇಳೆಗೆ ಪ್ರಾಜೆಕ್ಟ್ ಪ್ರಾರಂಭಿಸಲು ತಂಡವು ಆಶಿಸಿದೆ. ಕೃಷ್ಣನ ಲವ್ ಮಾಕ್ಟೇಲ್ ಚಿತ್ರದ ನಟಿ ರಚನಾ ಇಂದರ್, ಮಹೇಶ್ ಗೌಡ ನಿರ್ದೇಶನದ ಗಣೇಶ್ ಅಭಿನಯದ ಟ್ರಿಬಲ್ ರೈಡಿಂಗ್‌ನಲ್ಲೂ ಕೆಲಸ ಮಾಡುತ್ತಿದ್ದಾರೆ ಮತ್ತು ರಿಷಬ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲಾ ಗಿರಿಕಥೆ ಯಲ್ಲಿಯೂ ನಟಿಸಿದ್ದಾರೆ.

ಇದುವರೆಗೂ ಮಲ್ಟಿಸ್ಟಾರ್ಸ್ ಸಿನಿಮಾಗಳಲ್ಲಿ ನಟಿಸುತ್ತಿದ್ದ ಶ್ರೀ ಮಹಾದೇವ್ ಇದೇ ಮೊದಲ ಬಾರಿಗೆ ಒಬ್ಬ ಹೀರೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಟೆಲಿ-ಸೀರಿಯಲ್‌ಗಳಿಂದ ಬೆಳ್ಳಿ ಪರದೆಗೆ ಬಂದಿರುವ ಶ್ರೀ ಮಹಾದೇವ್ ಈಗ ಹೊಂದಿಸಿ ಬರೆಯಿರಿ ಮತ್ತು ಗಜಾನನ ಮತ್ತು ಗ್ಯಾಂಗ್ ಎಂಬ ಎರಡು ಯೋಜನೆಗಳ ಭಾಗವಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.