'ಬೈ ಟು ಲವ್' ತೆಲುಗು ರೀಮೇಕ್ ಗೆ ಹರಿ ಸಂತೋಷ್ ರೆಡಿ!
ಪ್ರಸ್ತುತ ಪ್ರಿ ಪ್ರೊಡಕ್ಷನ್ ಹಂತದಲ್ಲಿರುವ "ಬೈ ಟು ಲವ್" ಸಿನಿಮಾವನ್ನು ತೆಲುಗಿನಲ್ಲಿ ರೀಮೇಕ್ ಮಾಡುವ ಉದ್ದೇಶವಿದೆ ಎಂದು ನಿರ್ದೇಶಕ ಹರಿ ಸಂತೋಷ್ ಹೇಳಿದ್ದಾರೆ. ರಿಮೇಕ್ ಬಗ್ಗೆ ಅವರ ಗಮನವಿರುವ ಕಾರಣ ಮತ್ತೊಂದು ಯೋಜನೆಯಲ್ಲಿ ಅವರು ತೊಡಗಿಸಿಕೊಳ್ಳುವುದನ್ನು ಮುಂದೂಡಿದ್ದಾರೆ.

ಪ್ರಸ್ತುತ ಪ್ರಿ ಪ್ರೊಡಕ್ಷನ್ ಹಂತದಲ್ಲಿರುವ "ಬೈ ಟು ಲವ್" ಸಿನಿಮಾವನ್ನು ತೆಲುಗಿನಲ್ಲಿ ರೀಮೇಕ್ ಮಾಡುವ ಉದ್ದೇಶವಿದೆ ಎಂದು ನಿರ್ದೇಶಕ ಹರಿ ಸಂತೋಷ್ ಹೇಳಿದ್ದಾರೆ. ರಿಮೇಕ್ ಬಗ್ಗೆ ಅವರ ಗಮನವಿರುವ ಕಾರಣ ಮತ್ತೊಂದು ಯೋಜನೆಯಲ್ಲಿ ಅವರು ತೊಡಗಿಸಿಕೊಳ್ಳುವುದನ್ನು ಮುಂದೂಡಿದ್ದಾರೆ.
ಇದಕ್ಕೆ ಮುನ್ನ ಹರಿ ಸಂತೋಷ್ ಅವರು ತಮ್ಮ 2017ರ "ಕಾಲೇಜ್ ಕುಮಾರ್" ರೀಮೇಕ್ ಮೂಲಕ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. ಇದೀಗ "ಬೈ ಟು ಲವ್" ಕನ್ನಡ ಆವೃತ್ತಿಯ ಪೋಸ್ಟ್ ಪ್ರೊಡಕ್ಷನ್ ಮತ್ತು ತೆಲುಗು ಆವೃತ್ತಿಯ ಪೋಸ್ಟ್ ಪ್ರೊಡಕ್ಷನ್ ನಡುವೆ ಇದ್ದಾರೆ."ಈ ಹಿಂದೆ ಎಸ್.ಎಸ್.ರಾಜಮೌಳಿ ಅವರ "ಈಗ" ನಿರ್ಮಿಸಿದ್ದ ಮತ್ತು ತೆಲುಗಿನಲ್ಲಿ "ಕೆಜಿಎಫ್"ವಿತರಿಸಿದ್ದ ಸಾಯಿ ಕೊರ್ರಪತ್ ಅವರಿಗೆ "ಬೈ ಟು ಲವ್" ಸಾರಾಂಶ ವಿವರಿಸಿದ್ದೇನೆ. ನಾನು ಅದನ್ನು ತೆಲುಗಿನಲ್ಲಿ ಹೆಚ್ಚು ದೊಡ್ಡ ಪ್ರಮಾಣದಲ್ಲಿ ಮತ್ತು ಹೆಚ್ಚು ಜನಪ್ರಿಯ ನಟ ನಟಿಯರ ಮೂಲಕ ಮಾಡಲು ಸೂಚಿಸಿದೆ. ನಿರ್ಮಾಪಕ ಸಾಯಿ ಕೆವಿಎನ್ ಪ್ರೊಡಕ್ಷನ್ ಹೌಸ್ ಸಹಯೋಗದೊಂದಿಗೆ ಯೋಜನೆಗೆ ಹಣ ಹುಡಲು ಮುಂದಾಗಿದ್ದಾರೆ. ಇದು ಕನ್ನಡ ಆವೃತ್ತಿಯ ಹಿಂದಿನ ಪ್ರೊಡಕ್ಷನ್ ಸೆಂಟರ್ ಆಗಿದೆ."
"ಬೈ ಟು ಲವ್"ಕನ್ನಡ ಆವೃತ್ತಿಯಲ್ಲಿ ದನ್ವೀರ್ ಹಾಗೂ ಶ್ರೀಲೀಲಾ ಪ್ರಮುಖ ಪಾತ್ರ ವಹಿಸುತ್ತಿದ್ದರೆ, ತೆಲುಗಿನಲ್ಲಿ ಈ ಪಾತ್ರಗಳಿಗಾಗಿ ಇನ್ನೂ ನಟ ನಟಿಯರು ಅಂತಿಮವಾಗಿಲ್ಲ. ಪಾತ್ರವರ್ಗ ಮತ್ತು ಸಿಬ್ಬಂದಿ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬರಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


