ಟಾಲಿವುಡ್ ಹಿರಿಯ ನಟ ಪೊಟ್ಟಿ ವೀರಯ್ಯ ವಿಧಿವಶ
ಟಾಲಿವುಡ್ ಹಿರಿಯ ನಟ ಪೊಟ್ಟಿ ವೀರಯ್ಯ (74) ನಿಧನರಾಗಿದ್ದಾರೆ. ಸ್ವಲ್ಪ ಸಮಯ ಅನಾರೋಗ್ಯದಿಂದ ಬಳಲುತ್ತಿದ್ದ ವೀರಯ್ಯ ಹೃದಯಾಘಾತದಿಂದ ಭಾನುವಾರ ಆಸ್ಪತ್ರೆಯಲ್ಲಿ ನಿಧನರಾದರು.

ಹೈದರಾಬಾದ್: ಟಾಲಿವುಡ್ ಹಿರಿಯ ನಟ ಪೊಟ್ಟಿ ವೀರಯ್ಯ (74) ನಿಧನರಾಗಿದ್ದಾರೆ. ಸ್ವಲ್ಪ ಸಮಯ ಅನಾರೋಗ್ಯದಿಂದ ಬಳಲುತ್ತಿದ್ದ ವೀರಯ್ಯ ಹೃದಯಾಘಾತದಿಂದ ಭಾನುವಾರ ಆಸ್ಪತ್ರೆಯಲ್ಲಿ ನಿಧನರಾದರು.
ವೀರಯ್ಯ ನಲ್ಗೊಂಡ ಜಿಲ್ಲೆಯ ತಿರುಮಲಗಿರಿ ತಾಲ್ಲೂಕಿನ ಫಣಿಗಿರಿ ಎಂಬ ಹಳ್ಳಿಯ ಪ್ರೌಢಶಾಲೆಯಲ್ಲಿದ್ದಾಗ ನಾಟಕಗಳಲ್ಲಿ ಪಾತ್ರಗಳ ಮಾಡುವ ಮೂಲಕ ಎಲ್ಲರನ್ನೂ ನಗಿಸುತ್ತಿದ್ದರು. ಸಿನಿಮಾಗೆ ಬರುವ ಮೊದಲು ಅವರು ಹೂವಿನ ಅಲಂಕಾರ ಮಾಡುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
ವೀರಯ್ಯ ತೆಲುಗು ಮಾತ್ರವಲ್ಲದೆ ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಹ ಅಭಿನಯಿಸಿದ್ದರು.
ಅವರ ಅಜ್ಜ ರಾಧಮ್ಮ ಪೆಲ್ಲಿ, ಯುಗಂಧರ್, ಗಜಡೊಂಗ, ಗೋರಾ ನಾಗಮ್ಮ, ಅಟ್ಟಂಗರಿ ಪೆಟ್ಟಿನಂ ಸೇರಿ ಐನೂರಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


