ಸಿನಿಮಾ ಸುದ್ದಿ

ಭಜರಂಗಿ-2 ಕಲಾವಿದರಿದ್ದ ಬಸ್ಸು ಅಪಘಾತ

ಇತ್ತೀಚೆಗಷ್ಟೇ ಭಜರಂಗಿ-2 ಚಿತ್ರ ಚಿತ್ರೀಕರಣದ ವೇಳೆ ಸಿನಿಮಾ ಸೆಟ್ ಗೆ ಬೆಂಕಿ ತಗುಲಿ ಸುದ್ದಿಯಾಗಿದ್ದ ಬೆನ್ನಲ್ಲೇ ಇಂದು ಅದೇ ಚಿತ್ರದ ಕಲಾವಿದರು ತೆರಳುತ್ತಿದ್ದ ಬಸ್ಸೊಂದು ಶನಿವಾರ ಬೆಳಗ್ಗೆ ಅಪಘಾತಕ್ಕೀಡಾಗಿದೆ.

ಭಜರಂಗಿ-2 ಕಲಾವಿದರಿದ್ದ ಬಸ್ಸು ಅಪಘಾತ
ಸಂಗ್ರಹ ಚಿತ್ರ
Published On :

ನೆಲಮಂಗಲ: ಇತ್ತೀಚೆಗಷ್ಟೇ ಭಜರಂಗಿ-2 ಚಿತ್ರ ಚಿತ್ರೀಕರಣದ ವೇಳೆ ಸಿನಿಮಾ ಸೆಟ್ ಗೆ ಬೆಂಕಿ ತಗುಲಿ ಸುದ್ದಿಯಾಗಿದ್ದ ಬೆನ್ನಲ್ಲೇ ಇಂದು ಅದೇ ಚಿತ್ರದ ಕಲಾವಿದರು ತೆರಳುತ್ತಿದ್ದ ಬಸ್ಸೊಂದು ಶನಿವಾರ ಬೆಳಗ್ಗೆ ಅಪಘಾತಕ್ಕೀಡಾಗಿದೆ. 

ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಶ್ರೀನಿವಾಸಪುರ ಬಳಿ ಬಸ್ಸು ಅಪಘಾತವಾಗಿದ್ದು, ಕಲಾವಿದರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಸುಮಾರು 60ಕ್ಕೂ ಹೆಚ್ಚು ಕಲಾವಿದರಿದ್ದ ಬಸ್ಸು, ಮೋಹನ್ ಬಿಕೆರೆ ಸ್ಟುಡಿಯೋದತ್ತ  ತೆರಳುತ್ತಿದ್ದಾಗ ಈ ವೇಳೆ ಮೊದಲು ಕಾರಿಗೆ ಢಿಕ್ಕಿಯಾಗಿ ಬಳಿಕ ರಸ್ತೆಯ ಪಕ್ಕದಲ್ಲಿದ್ದ  ಹೆವಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ.

ಈ ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಸ್ಸು ಮೇಲೆಯೇ ಬಿದ್ದಿದೆ ಎಂದು ತಿಳಿದು ಬಂದಿದೆ. 

ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

ಮೊನ್ನೆಯಷ್ಟೆ ಇದೇಚಿತ್ರದ ಅದ್ಧೂರಿ ಸೆಟ್ ಗೆ ಬೆಂಕಿ ತಗುಲಿತ್ತು. ಆದರೆ, ಯಾವುದೇ ಅನಾಹುತ ಸಂಭವಿಸಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.