‘ನಿಶ್ಯಬ್ದಂ’ 14 ವರ್ಷಗಳ ನಂತರ ಅನುಷ್ಕಾ-ಮಾಧವನ್ ಜೋಡಿ ತೆರೆಯ ಮೇಲೆ
ಆರ್ ಮಾಧವನ್ ಮತ್ತು ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ ಅವರನ್ನು ಬಹಳ ಸಮಯದ ನಂತರ ಒಟ್ಟಿಗೆ ನೋಡುವ ಅವಕಾಶ ಅಭಿಮಾನಿಗಳಿಗೆ ಒದಗಿ ಬಂದಿದೆ.

ಮುಂಬೈ: ಆರ್ ಮಾಧವನ್ ಮತ್ತು ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ ಅವರನ್ನು ಬಹಳ ಸಮಯದ ನಂತರ ಒಟ್ಟಿಗೆ ನೋಡುವ ಅವಕಾಶ ಅಭಿಮಾನಿಗಳಿಗೆ ಒದಗಿ ಬಂದಿದೆ.
ಅಮೆಜಾನ್ ಪ್ರೈಮ್ ನಲ್ಲಿ ಈ ಜೋಡಿ ನಟಿಸಿರುವ ‘ನಿಶ್ಯಬ್ದಂ’ ಸದ್ಯದಲ್ಲೇ ಬಿಡುಗಡೆಯಾಗಲಿದೆ. 2006ರಲ್ಲಿ ‘ರೆಂಡು’ನಲ್ಲಿ ಒಟ್ಟಿಗೆ ನಟಿಸಿದ್ದ ಅನುಷ್ಕಾ-ಮಾಧವನ್ ಸತತ 14 ವರ್ಷಗಳ ನಂತರ ತೆಲುಗು, ತಮಿಳಿನ ಥ್ರಿಲ್ಲರ್ ‘ನಿಶ್ಯಬ್ದಂ’ ನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಅನುಷ್ಕಾ ಶೆಟ್ಟಿ ಮತ್ತು ಮಾಧವನ್ ಅವರು ಚಿತ್ರದಲ್ಲಿ ಮತ್ತೆ ಒಂದಾಗಿದ್ದು ಹೇಗೆ ಎಂಬುದನ್ನು ನಿರ್ದೇಶಕ ಹೇಮಂತ್ ಮಧುಕರ್ ಬಹಿರಂಗಪಡಿಸಿದ್ದಾರೆ.
“ಆರಂಭದಲ್ಲಿ, ಅವರು ಈ ಮೊದಲು ಒಂದು ಚಿತ್ರ ಮಾಡಿದ್ದಾರೆ ಮತ್ತು 14 ವರ್ಷಗಳಿಂದ ಪರಸ್ಪರ ತಿಳಿದಿದ್ದಾರೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ಮೂಕ ಹುಡುಗಿಯ ಪಾತ್ರಕ್ಕೆ ಅನುಷ್ಕಾ ಶೆಟ್ಟಿ ಸೂಕ್ತ ಮತ್ತು ಸಂಗೀತಗಾರನ ಪಾತ್ರದಲ್ಲಿ ಮಾಧವನ್ ಅವರನ್ನು ಆಯ್ಕೆ ಮಾಡಲು ಬಯಸಿದ್ದೆ. ಒಬ್ಬರು ಸುಂದರ ಮತ್ತು ಇನ್ನೊಬ್ಬರು ಮುದ್ದಾದವರು. ಅಲ್ಲದೆ ಬಹುಮಖ ಪ್ರತಿಭೆ ಹೊಂದಿದವರು. ಇದು ತೆರೆಯಮೇಲೆ ಅವರ ಕೆಮಿಸ್ಟ್ರಿಗೆ ಪೂರಕವಾಗಿತ್ತು” ಎಂದು ಹೇಮಂತ್ ಮಧುಕರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


