ಸಿನಿಮಾ ಸುದ್ದಿ

ಎಂ.ಜಿ. ಶ್ರೀನಿವಾಸ್ ರ 'ಓಲ್ಡ್ ಮಾಂಕ್' ಶೂಟಿಂಗ್ ಪ್ರಗತಿಯಲ್ಲಿ, ಶೇ.50 ಭಾಗ ಚಿತ್ರೀಕರಣ ಬಾಕಿ

ಓಲ್ಡ್ ಮಾಂಕ್ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ಎಂ ಜಿ ಶ್ರೀನಿವಾಸ್ ಅವರ ಭಾಗದ ಕೇವಲ ಎರಡು ದಿನಗಳ ಶೂಟಿಂಗ್ ಉಳಿಸಿಕೊಂಡಿದ್ದಾರೆ. ಚಿತ್ರದ ಶೂಟಿಂಗ್ ಶೇಕಡಾ 50ರಷ್ಟು ಮುಕ್ತಾಯವಾಗಿದ್ದು, ಚಿತ್ರದ ಸ್ಟಿಲ್ ಮತ್ತು ಇತ್ತೀಚಿನ ಸುದ್ದಿಗಳನ್ನು ಹಂಚಿಕೊಂಡರು.

ಎಂ.ಜಿ. ಶ್ರೀನಿವಾಸ್ ರ 'ಓಲ್ಡ್ ಮಾಂಕ್' ಶೂಟಿಂಗ್ ಪ್ರಗತಿಯಲ್ಲಿ, ಶೇ.50 ಭಾಗ ಚಿತ್ರೀಕರಣ ಬಾಕಿ
ಎಂ ಜಿ ಶ್ರೀನಿವಾಸ್
Published On :

ಓಲ್ಡ್ ಮಾಂಕ್ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ಎಂ ಜಿ ಶ್ರೀನಿವಾಸ್ ಅವರ ಭಾಗದ ಕೇವಲ ಎರಡು ದಿನಗಳ ಶೂಟಿಂಗ್ ಉಳಿಸಿಕೊಂಡಿದ್ದಾರೆ. ಚಿತ್ರದ ಶೂಟಿಂಗ್ ಶೇಕಡಾ 50ರಷ್ಟು ಮುಕ್ತಾಯವಾಗಿದ್ದು, ಚಿತ್ರದ ಸ್ಟಿಲ್ ಮತ್ತು ಇತ್ತೀಚಿನ ಸುದ್ದಿಗಳನ್ನು ಹಂಚಿಕೊಂಡರು.

ಚಿತ್ರದಲ್ಲಿ ಎಸ್ ನಾರಾಯಣ್, ಸಿಹಿ ಕಹಿ ಚಂದ್ರು, ಆರ್ ಟಿ ರಮ, ಡಿಂಗ್ರಿ ನಾಗರಾಜ್, ಬೆಂಗಳೂರು ನಾಗೇಶ್ ಮೊದಲಾದ ಹಿರಿಯ ಕಲಾವಿದರಿದ್ದಾರೆ. ಸ್ವತಃ ಖ್ಯಾತ ಕಲಾವಿದರು ಮತ್ತು ನಿರ್ದೇಶಕರಾಗಿರುವ ಎಸ್ ನಾರಾಯಣ್ ಅವರ ಜೊತೆ ಕೆಲಸ ಮಾಡಿದ್ದನ್ನು, ಹಿರಿಯ ಕಲಾವಿದರ ಜೊತೆ ತೆರೆ ಹಂಚಿಕೊಂಡ ಬಗ್ಗೆ ಶ್ರೀನಿವಾಸ್ ಹೆಮ್ಮೆಯಿಂದ ಮಾತನಾಡುತ್ತಾರೆ.

ಓಲ್ಡ್ ಮಾಂಕ್ ಚಿತ್ರದ ಇನ್ನೊಂದು ಭಾಗದ 15 ದಿನಗಳ ಶೂಟಿಂಗ್ ಅಕ್ಟೋಬರ್ ನಲ್ಲಿ ನಡೆಯಲಿದೆ. ಹಿರಿಯ ಸನ್ಯಾಸಿಯೊಬ್ಬರ ಲವ್ ಸ್ಟೋರಿ ಇದು. ಆತ ಗಾಸಿಪ್ ಪ್ರಿಯ, ಅವನಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಮಲಯಾಳಂ ನಟ ಸುದೇವ್ ನಾಯರ್ ಅವರು ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ.ಅರುಣ ಬಾಲರಾಜ್ ಕೂಡ ನಟಿಸಿದ್ದಾರೆ.

ಸೌರಬ್ ವೈಭವ್ ಅವರ ಸಂಗೀತ, ಭರತ್ ಪರಶುರಾಮ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.