ಸಿನಿಮಾ ಸುದ್ದಿ

'ಗಮನಂ' ಗಾಗಿ ಶಾಸ್ತ್ರೀಯ ಗಾಯಕಿಯಾದ ನಿತ್ಯಾ ಮೆನನ್

ನಿತ್ಯಾ ಮೆನನ್ ಅವರ ಮುಂದಿನ ಚಿತ್ರ "ಗಮನಂ"ನ ಫಸ್ಟ್ ಲುಕ್ ಪೋಸ್ಟರ್ ಅನ್ನು ನಟ ನಟ ಶರ್ವಾನಂದ್ ಅವರು ಇಂದು ಬಿಡುಗಡೆ ಮಾಡಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಶೈಲಪುತ್ರಿ ದೇವಿ ಎಂಬ ಶಾಸ್ತ್ರೀಯ ಗಾಯಕಿಯ ಪಾತ್ರದಲ್ಲಿ ನಟಿ ಅಭಿನಯಿಸಿದ್ದಾರೆ.

'ಗಮನಂ' ಗಾಗಿ ಶಾಸ್ತ್ರೀಯ ಗಾಯಕಿಯಾದ ನಿತ್ಯಾ ಮೆನನ್
ನಿತ್ಯಾ ಮೆನೆನ್
Published On :

ನಿತ್ಯಾ ಮೆನನ್ ಅವರ ಮುಂದಿನ ಚಿತ್ರ "ಗಮನಂ"ನ ಫಸ್ಟ್ ಲುಕ್ ಪೋಸ್ಟರ್ ಅನ್ನು ನಟ ನಟ ಶರ್ವಾನಂದ್ ಅವರು ಇಂದು ಬಿಡುಗಡೆ ಮಾಡಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಶೈಲಪುತ್ರಿ ದೇವಿ ಎಂಬ ಶಾಸ್ತ್ರೀಯ ಗಾಯಕಿಯ ಪಾತ್ರದಲ್ಲಿ ನಟಿ ಅಭಿನಯಿಸಿದ್ದಾರೆ.

ಮೂರು ಕಥೆಗಳ ಸಂಕಲನವಾಗಿರುವ "ಗಮನಂ" ಸುಜನಾ ರಾವ್ ನಿರ್ದೇಶನದಲ್ಲಿ ತಯಾರಾಗುತ್ತಿದೆ. ಜತೆಗೆ ಶ್ರಿಯಾ ಶರಣ್, ಶಿವ ಕಂಡುಕುರಿ, ಮತ್ತು ಪ್ರಿಯಾಂಕಾ ಜವಾಲ್ಕರ್ ಸಹ ಪ್ರಮುಖ ಪಾತ್ರದಲ್ಲಿದ್ದಾರೆ.

ನಿರ್ಮಾಪಾರು ಇತ್ತೀಚೆಗೆ  ತಮ್ಮ 38 ನೇ ಹುಟ್ಟುಹಬ್ಬದಂದು ಡಿ-ಗ್ಲಾಮ್ ಅವತಾರದಲ್ಲಿ ಮ್ಯೂಟ್ ಗರ್ಲ್ ಪಾತ್ರದಲ್ಲಿ ನಟಿಸಿರುವ ಶ್ರಿಯಾ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದರು. "ಗಮನಂ" ಚಿತ್ರಕ್ಕೆ ಖ್ಯಾತ ಹಿನ್ನೆಲೆ ಸಂಗೀತ ನಿರ್ದೇಶಕ ಇಳಯರಾಜ ಸಂಗೀತ ಸಂಯೋಜನೆ ಮಾಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.