ವೀರಪುತ್ರ ಸಿನಿಮಾಗೆ 'ಅಗ್ನಿ ಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ ನಾಯಕ
ಅಗ್ನಿಸಾಕ್ಷಿ ಧಾರಾವಾಹಿಯಿಂದ ಮೂಲಕ ಪ್ರಸಿದ್ಧವಾದ ವಿಜಯ್ ಸೂರ್ಯ ಬೆಳ್ಳಿ ತೆರೆಯಲ್ಲಿ ಚಿರಪರಿಚಿತವಾಗಿದ್ದಾರೆ, ಈ ಸಿನಿಮಾದಲ್ಲಿ ಮೂರು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಎಸ್ ದೇವರಾಜ್ ನಿರ್ದೇಶನದ ಆ್ಯಕ್ಷನ್ ಕಮರ್ಷಿಯಲ್ ಸಿನಿಮಾಗೆ ನಟ ವಿಜಯ್ ಸೂರ್ಯ ನಾಯಕರಾಗಲಿದ್ದಾರೆ.
ಈ ಸಿನಿಮಾಗೆ ಕಥೆ, ಸಂಭಾಷಣೆ ಮತ್ತು ಸಾಹಿತ್ಯ ಎಲ್ಲವನ್ನು ದೇವರಾಜ್ ಅವರೇ ಬರೆದಿದ್ದಾರೆ. ಸಿನಿಮಾ ಕಥೆ ವೈದ್ಯಕೀ ವಿಷಯದಿಂದ ಕೂಡಿದೆ, ತುಮಕೂರು ವಿವಿಯ ಬಯೋ ಕೆಮಿಸ್ಚ್ರಿ ವಿಭಾಗದಲ್ಲಿ ಸಹಾಯಕ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್,ದೇವರಾಜ್ ತಮ್ಮ ಅಭಿರುಚಿಗಾಗಿ ಸಿನಿಮಾ ಮಾಡುತ್ತಿದ್ದಾರೆ.
ಸಪ್ಲಿಮೆಂಟರಿ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ ನಿರ್ದೇಶಕ ದೇವರಾಜ್ ವೀರಪುತ್ರನಿಗಾಗಿ ಪೂರ್ಣ ಪ್ರಮಾಣದಲ್ಲಿ ಸಿದ್ದರಾಗಿದ್ದಾರೆ. ವೈದ್ಯಕೀಯ ವ್ಯವಸ್ಥೆ ಕುರಿತಾದ ಸಿನಿಮಾ ಇದಾಗಿದ್ದು, ಜಾನಪದ ಔಷಧ ಮತ್ತು ಆಲೋಪಥಿ ಔಷಧಿಯ ಕುರಿತ ಚರ್ಚೆ ಇದರಲ್ಲಿದೆ.
ಈ ಸಿನಿಮಾಗೆ ವಿಜಯ್ ಸೂರ್ಯ ನಾಯಕರಾಗಲಿದ್ದಾರೆ, ಅಗ್ನಿಸಾಕ್ಷಿ ಧಾರಾವಾಹಿಯಿಂದ ಮೂಲಕ ಪ್ರಸಿದ್ಧವಾದ ವಿಜಯ್ ಸೂರ್ಯ ಬೆಳ್ಳಿ ತೆರೆಯಲ್ಲಿ ಚಿರಪರಿಚಿತವಾಗಿದ್ದಾರೆ, ಈ ಸಿನಿಮಾದಲ್ಲಿ ಮೂರು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸೆಪ್ಟಂಬರ್ 7 ರಂದು ವಿಜಯ್ ಸೂರ್ಯ ಹುಟ್ಟುಹಬ್ಬವಿದ್ದು, ಅಂದು ಚಿತ್ರ ತಂಡ ಸಿನಿಮಾ ಫರ್ಸ್ಟ್ ಲುಕ್ ರಿಲೀಸ್ ಆಗಲಿದೆ. ತಾನ್ವಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಗೆ ಗುರು ಬಂಡೆ ನಿರ್ಮಾಪಕರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


