ಸಿನಿಮಾ ಸುದ್ದಿ

ಪವನ್ ಕಲ್ಯಾಣ್ ಜನ್ಮದಿನ: ಬ್ಯಾನರ್‌ ಕಟ್ಟಲು ಹೋದ ಮೂವರು ಅಭಿಮಾನಿಗಳು ವಿದ್ಯುತ್‌ ತಂತಿ ತಗುಲಿ ಸಾವು

ನಟ ಪವನ್‌ ಕಲ್ಯಾಣ್‌ ಜನ್ಮದಿನದ ಪ್ರಯುಕ್ತ ಅವರ ಬ್ಯಾನರ್‌ ಕಟ್ಟಲು ಹೋದ ಮೂವರು ಅಭಿಮಾನಿಗಳು ವಿದ್ಯುತ್‌ ತಂತಿ ತಗುಲಿ ಮೃತಪಟ್ಟಿದ್ದಾರೆ.

ಪವನ್ ಕಲ್ಯಾಣ್ ಜನ್ಮದಿನ: ಬ್ಯಾನರ್‌ ಕಟ್ಟಲು ಹೋದ ಮೂವರು ಅಭಿಮಾನಿಗಳು ವಿದ್ಯುತ್‌ ತಂತಿ ತಗುಲಿ ಸಾವು
ಪವನ್ ಕಲ್ಯಾಣ್
Published On :

ಚಿತ್ತೂರು: ನಟ ಪವನ್‌ ಕಲ್ಯಾಣ್‌ ಜನ್ಮದಿನದ  ಪ್ರಯುಕ್ತ ಅವರ ಬ್ಯಾನರ್‌ ಕಟ್ಟಲು ಹೋದ ಮೂವರು ಅಭಿಮಾನಿಗಳು ವಿದ್ಯುತ್‌ ತಂತಿ ತಗುಲಿ ಮೃತಪಟ್ಟಿದ್ದಾರೆ. 

ಚಿತ್ತೂರು ಜಿಲ್ಲೆಯ ಶಾಂತಿಪುರದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ (ಸೆ.1) ರಾತ್ರಿ 8.30ರ ಸುಮಾರಿಗೆ ಪವನ್‌ ಕಲ್ಯಾಣ್‌ ಅವರ ಬ್ಯಾನರ್‌ಗಳನ್ನು ಕಟ್ಟಲಾಗುತ್ತಿತ್ತು. ಆ ವೇಳೆ ವಿದ್ಯುತ್‌ ಸ್ಪರ್ಶದಿಂದಾಗಿ ಸೋಮಶೇಖರ್‌ (30), ಅವರ ಸಹೋದರ ರಾಜೇಂದ್ರ (32), ಹಾಗೂ ಸ್ನೇಹಿತ ಅರುಣಾಚಲಂ (28) ಅಸುನೀಗಿದ್ದಾರೆ. ಇವರೆಲ್ಲರೂ ಪವನ್‌ ಕಲ್ಯಾಣ್‌ ಅಭಿಮಾನಿಗಳು ಮಾತ್ರವಲ್ಲದೆ, ಅವರ ಜನಸೇನಾ ಪಾರ್ಟಿ ಕಾರ್ಯಕರ್ತರು ಕೂಡ ಆಗಿದ್ದರು ಎನ್ನಲಾಗಿದೆ.

ಅಭಿಮಾನಿಗಳ ನಿಧನಕ್ಕೆ ಪವನ್‌ ಕಲ್ಯಾಣ್‌ ಕಂಬನಿ ಮಿಡಿದಿದ್ದಾರೆ. ಅವರ ಜನಸೇನಾ ಪಾರ್ಟಿಯ ಸೋಶಿಯಲ್‌ ಮೀಡಿಯಾ ಖಾತೆಗಳ ಮೂಲಕ ಸಂತಾಪ ಸೂಚಿಸಲಾಗಿದೆ. ಅಲ್ಲದೆ ಮೃತಪಟ್ಟ ಮೂವರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರ ನೀಡುವುದಾಗಿಯೂ ಜನಸೇನಾ ಪಾರ್ಟಿ ಘೋಷಿಸಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.