ಸಿನಿಮಾ ಸುದ್ದಿ

ಉದ್ಯಮಿ ಗೌತಮ್ ಕಿಚ್ಲು ಜೊತೆ ನೆರವೇರಿದ 'ಮಗಧೀರ' ಬೆಡಗಿ ಕಾಜಲ್ ಅಗರ್ವಾಲ್ ವಿವಾಹ

ಉದ್ಯಮಿ ಗೌತಮ್ ಕಿಚ್ಲು ಜೊತೆ ನಟಿ ಕಾಜಲ್ ಅಗರ್ವಾಲ್ ವಿವಾಹ ಮುಂಬೈಯಲ್ಲಿ ನೆರವೇರಿತು.

ಉದ್ಯಮಿ ಗೌತಮ್ ಕಿಚ್ಲು ಜೊತೆ ನೆರವೇರಿದ 'ಮಗಧೀರ' ಬೆಡಗಿ ಕಾಜಲ್ ಅಗರ್ವಾಲ್ ವಿವಾಹ
ಮುಂಬೈಯಲ್ಲಿ ನೆರವೇರಿದ ನಟಿ ಕಾಜಲ್ ಅಗರ್ವಾಲ್ ಮದುವೆ
Published On :

ಮುಂಬೈ: ಉದ್ಯಮಿ ಗೌತಮ್ ಕಿಚ್ಲು ಜೊತೆ ನಟಿ ಕಾಜಲ್ ಅಗರ್ವಾಲ್ ವಿವಾಹ ಮುಂಬೈಯಲ್ಲಿ ನೆರವೇರಿತು.

ತಮ್ಮ ಸಮೀಪ ಬಂಧುಗಳು ಮತ್ತು ಆಪ್ತ ಸ್ನೇಹಿತರಿಗಷ್ಟೇ ಜೋಡಿ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಕಾಜಲ್ ಅಗರ್ವಾಲ್ ಕಡುಗೆಂಪು ಬಣ್ಣದ ವಧುವಿನ ಉಡುಗೆಯಲ್ಲಿ ಕಂಗೊಳಿಸಿದ್ದರೆ ತಿಳಿ ಗುಲಾಬಿ ಬಣ್ಣದ  ದುಪ್ಪಟ್ಟಾ ಹಾಗೂ ಗುಲಾಬಿ ಅಚ್ಚೊತ್ತಿದ ಬೆಳ್ಳಿ ಬಣ್ಣದ ಶೆರ್ವಾನಿಯಲ್ಲಿ ಮದುಮಗ ಗೌತಮ್ ಮಿಂಚಿದ್ದರು.

ಕಾಜಲ್ ಮದುವೆಗೆ ಮುನ್ನ ಕಪ್ಪು ಬಿಳುಪಿನ ಮದುಮಗಳ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಬಿಳಿ ಬಾತ್ ರೋಬ್ ನಲ್ಲಿ ಸಾಂಪ್ರದಾಯಿಕ ಜ್ಯುವೆಲ್ಲರಿ ಮತ್ತು ಗಾಜ್ರಾ ತೊಟ್ಟಿದ್ದರು. ಅವರು ಮದುವೆಗೆ ತೊಟ್ಟ ಲೆಹಂಗಾವನ್ನು ಹಿಂದೆ ನೇತುಹಾಕಲಾಗಿತ್ತು. ಇದಕ್ಕೂ ಮುನ್ನ ತಮ್ಮ ಹಳದಿ ಶಾಸ್ತ್ರದ ಫೋಟೋಗಳನ್ನು ಕೂಡ ಶೇರ್ ಮಾಡಿದ್ದರು.

ಸಿಂಗಂ, ಮಗದೀರ, ಸ್ಪೆಷಲ್ 26, ತುಪ್ಪಕ್ಕಿ ಚಿತ್ರಗಳಿಂದ ಜನಪ್ರಿಯರಾದ ಕಾಜಲ್ ಅಗರ್ವಾಲ್ ಕಳೆದ ಅಕ್ಟೋಬರ್ 6ರಂದು ಗೌತಮ್ ಜೊತೆ ತಮ್ಮ ವಿವಾಹ ನಿಶ್ಚಯವನ್ನು ಘೋಷಿಸಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.