ಸಿನಿಮಾ ಸುದ್ದಿ

ಸುಜಯ್ ಶಾಸ್ತ್ರಿ ನಿರ್ದೇಶನದ ಕ್ರೈಂ ಥ್ರಿಲ್ಲರ್ ನಲ್ಲಿ ಅನುಪಮಾ ಗೌಡ?

"ಗುಬ್ಬಿ ಮೇಲೆ ಬ್ರಹ್ಮಾಸ್ತ್ರ" ಚಿತ್ರದ ಮೂಲಕ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ್ದ ರಂಗಭೂಮಿ ಕಲಾವಿದ, ನಟ ಸುಜಯ್ ಶಾಸ್ತ್ರಿ ತಮ್ಮ ಎರಡನೇ ಚಿತ್ರಕ್ಕೆ ಸಜ್ಜಾಗಿದ್ದಾರೆ.

ಸುಜಯ್ ಶಾಸ್ತ್ರಿ ನಿರ್ದೇಶನದ ಕ್ರೈಂ ಥ್ರಿಲ್ಲರ್ ನಲ್ಲಿ ಅನುಪಮಾ ಗೌಡ?
ಅನುಪಮಾ ಗೌಡ
Published On :

"ಗುಬ್ಬಿ ಮೇಲೆ ಬ್ರಹ್ಮಾಸ್ತ್ರ" ಚಿತ್ರದ ಮೂಲಕ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ್ದ ರಂಗಭೂಮಿ ಕಲಾವಿದ, ನಟ ಸುಜಯ್ ಶಾಸ್ತ್ರಿ ತಮ್ಮ ಎರಡನೇ ಚಿತ್ರಕ್ಕೆ ಸಜ್ಜಾಗಿದ್ದಾರೆ. ಚಿತ್ರದ ಶೀರ್ಷಿಕೆ ಬುಧವಾರ ಘೋಷಣೆಯಾಗಲಿದೆ. ಇದೊಂದು ಪ್ರೇಕ್ಷಕರನ್ನು ಸೀಟಿನ ತುದಿಯಲ್ಲೇ ಕೂರಿಸಬಹುದಾದ ಥ್ರಿಲ್ಲರ್ ಕಥಾನಕವೆಂದು ನಿರ್ದೇಶಕ ಹೇಳಿದ್ದಾರೆ.

"ಬೆಲ್ ಬಾಟಮ್" ಕಥೆ ಬರೆದಿದ್ದ ಟಿ.ಕೆ. ದಯಾನಂದ್ ಅವರು ಡಿಸೆಂಬರ್ ಮೊದಲ ವಾರದಿಂದ ಫ್ಳೋರ್ ಗೆ ಬರಲಿರುವ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಪ್ರಸ್ತುತ ಚಿತ್ರಕ್ಕೆ ಸೂಕ್ತ ಪಾತ್ರವರ್ಗದ ಆಯ್ಕೆಯಲ್ಲಿ ನಿರ್ದೇಶಕರಿದ್ದಾರೆ.  ಆದರೆ ಪತ್ರಿಕೆಗೆ ಸಿಕ್ಕಿರುವ ಮೂಲಗಳ ಪ್ರಕಾರ "ಆ ಕರಾಳ ರಾತ್ರಿ" ಖ್ಯಾತಿಯ ಅನುಪಮಾ ಗೌಡ ಚಿತ್ರದ ಪ್ರಧಾನ ನಾಯಕಿಯಾಗಲ್ಲಿದ್ದಾರೆ. "ಲಂಕೇಶ್ ಪತ್ರಿಕೆ" ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಅನುಪಮಾ ಕಿರುತೆರೆ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದರು.

ದಯಾಳ್ ಪದ್ಮನಾಭನ್ ನಿರ್ದೇಶನದ "ಆ ಕರಾಳ ರಾತ್ರಿ" ಚಿತ್ರ ಅವರಿಗೆ ದೊಡ್ಡ ಪ್ರಸಿದ್ದಿ ತಂದು ಕೊಟ್ಟಿದೆ. ಸಧ್ಯ ನಟಿ "ಬೆಂಕಿಯಲ್ಲಿ ಅರಳಿದ ಹೂವು" ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

ಸಧ್ಯ ಸುಜಯ್ ಛಾಯಾಗ್ರಾಹಕ ವಿಶ್ವಜಿತ್ ರಾವ್, ಎಡಿಟರ್ ಆಶಿಕ್ ಕುಸುಗೊಳ್ಳಿ ಅವರನ್ನು ತಮ್ಮ ಟೀಂಗೆ ಸೇರಿಸಿಕೊಂಡಿದ್ದಾರೆ. ಚಿತ್ರದಲ್ಲಿ ಇಬ್ಬರುಕಂಪೋಸರ್ ಗಳಿರಲಿದ್ದು ರಾಹುಲ್ ಶಿವಕುಮಾರ್ ಮತ್ತು ರೊನಾಡಾ ಬಕ್ಕೇಶ್ ಹಿನ್ನೆಲೆ ಸಂಗೀತ ನಿರ್ವಹಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.