'ರಾಬಿನ್ ಹುಡ್' ಗಾಗಿ ಮತ್ತೆ ಒಂದಾದ ಸುನಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ
ಅವತಾರ ಪುರುಷ ನಿರ್ದೇಶಕ ಸುನಿ ಮತ್ತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಎರಡನೇ ಬಾರಿಗೆ ಒಂದಾಗುತ್ತಿದ್ದಾರೆ. ಕಮರ್ಷಿಯಲ್ ಎಂಟರ್ಟೈನ್ ಗಾಗಿ ಈ ಜೋಡಿ ಒಟ್ಟಾಗುತ್ತಿದ್ದಾರೆ.

ಅವತಾರ ಪುರುಷ ನಿರ್ದೇಶಕ ಸುನಿ ಮತ್ತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಎರಡನೇ ಬಾರಿಗೆ ಒಂದಾಗುತ್ತಿದ್ದಾರೆ. . ಕಮರ್ಷಿಯಲ್ ಎಂಟರ್ಟೈನ್ ಗಾಗಿ ಈ ಜೋಡಿ ಒಟ್ಟಾಗುತ್ತಿದ್ದಾರೆ. ಈ ಚಿತ್ರಕ್ಕೆ "ರಾಬಿನ್ ಹುಡ್: ಎಂದು ಹೆಸರಿಡಲಾಗಿದ್ದು ನಿರ್ದೇಶಕರು ಬುಧವಾರ ಈ ಸಂಬಂಧ ಪ್ರಕಟಣೆ ಕೊಟ್ಟಿದ್ದಾರೆ. ಚಿತ್ರದ ನಾಯಕ ಸೇರಿದಂತೆ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ನಿರ್ಧರಿಸಬೇಕಿದೆ.
ಆದರೆ, ಸಿಂಪಲ್ ಅಗಿ ಒಂದ್ ಲವ್ ಸ್ಟೋರಿ ನಿರ್ದೇಶಕ ಸುನಿ ಈ ಚಿತ್ರದಲ್ಲಿ ಹೊಸಬರನ್ನು ನಾಯಕನನ್ನಾಗಿಸಿಕೊಳ್ಳಲು ತೀರ್ಮಾನಿಸಿದ್ದಾರೆ ಎಂದು ಪತ್ರಿಕೆಗೆ ಮೂಲಗಳಿಂದ ಮಾಹಿತಿ ಸಿಕ್ಕಿದೆ. "ರಾಬಿನ್ ಹುಡ್" ಶ್ರೀಮಂತರ ಮನೆಗಳ ದರೋಡೆ ನಡೆಸಿ ಬಡವರಿಗೆ ಸಹಾಯ ಮಾಡುವ ವ್ಯಕ್ತಿ ಎಂದು ಸಾಂಪ್ರದಾಯಿಕ ಕಥೆ ಇದ್ದರೂ ಸುನಿ ತನ್ನ ಹೊಸ ಚಿತ್ರಕ್ಕಾಗಿ ಇದೇ ರೀತಿಯ ಪರಿಕಲ್ಪನೆಯನ್ನು ಮಾಡಿಕೊಂಡಿದ್ದಾರೆಯೆ ಎನ್ನುವುದು ತಿಳಿದಿಲ್ಲ. ಈ ಯೋಜನೆಯು 2021 ರಲ್ಲಿ ಸೆಟ್ಟೇರುವ ಸಾಧ್ಯತೆಗಳಿದೆ.
ಸುನಿ ಪ್ರಸ್ತುತ ಅವತಾರ ಪುರುಷ ಚಿತ್ರದ ಕೊನೆಯ ಹಂತದಲ್ಲಿದ್ದಾರೆ. ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಚಿತ್ರದ ಶೂಟಿಂಗ್ ಸೆಪ್ಟೆಂಬರ್ 14 ರಂದು ಪುನರಾರಂಭಗೊಂಡಿದ್ದು, ತಂಡವು ಇನ್ನೂ 20 ದಿನಗಳ ಶೂಟಿಂಗ್ ಬಾಕಿ ಉಳಿಸಿಕೊಂಡಿದೆ. ಅವತಾರ ಪುರುಷದಲ್ಲಿ ಶ್ರೀನಗರ ಕಿಟ್ಟಿ ಒಡಿಶಾ ಮೂಲದ ಕುಮಾರ ಎಂಬ ಬ್ಲಾಕ್ ಮ್ಯಾಜಿಕ್ ಜಾದೂಗಾರನ ಪಾತ್ರದಲ್ಲಿದ್ದಾರೆ. ಸಾಯಿ ಕುಮಾರ್, ಸುಧರಾಣಿ ಮತ್ತು ಭವ್ಯ ಸಹ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


