ದೇವಿ ಅವತಾರವೆತ್ತಿ ಕಿರುತೆರೆಗೆ ಹರಿಪ್ರಿಯಾ ಎಂಟ್ರಿ!
ಕನ್ನಡದ ಇನ್ನೊಬ್ಬ ಪ್ರತಿಭೆ ಹರಿಪ್ರಿಯಾ ಟಿವಿ ಧಾರಾವಾಹಿಯೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಪ್ರವೇಶಕ್ಕೆ ಸಿದ್ದವಾಗಿದ್ದಾರೆ.

ಸ್ಯಾಂಡಲ್ ವುಡ್ ನ ಪ್ರಸಿದ್ಧ ಸ್ಟಾರ್ ನಟ ನಟಿಯರೆಲ್ಲಾ ಒಂದಲ್ಲ ಒಂದು ಟಿವಿ ಧಾರಾವಾಹಿ, ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡುವುದು ಸಾಮಾನ್ಯ. ಇತ್ತೀಗೆ "ಕನ್ನಡತಿ" ಧಾರಾವಾಹಿಯ ಮೂಲಕ ಮಾನ್ವಿತಾ ಕಾಮತ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಕನ್ನಡದ ಇನ್ನೊಬ್ಬ ಪ್ರತಿಭೆ ಹರಿಪ್ರಿಯಾ ಟಿವಿ ಧಾರಾವಾಹಿಯೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಪ್ರವೇಶಕ್ಕೆ ಸಿದ್ದವಾಗಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಸಂಘರ್ಷ" ಎಂಬ ಪೌರಾಣಿಕ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಹರಿಪ್ರಿಯಾ ನಟಿಸುತ್ತಿದ್ದಾರೆ. ಹರಿಪ್ರಿಯಾ ನಟಿಸುತ್ತಿರುವ ಸಂಚಿಕೆಯು ದಸರಾ ಸಮಯದಲ್ಲಿ ಬಿತ್ತರವಾಗುತ್ತಿದೆ
ಮೂಲಗಳ ಪ್ರಕಾರ "ಸಂಘರ್ಷ"ದಲ್ಲಿ ದೇವಿ ಪಾತ್ರದಲ್ಲಿ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಇತ್ತೀಚೆಗೆ ಮೂರು ದಿನಗಳ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
"ಇದು ನನ್ನ ಮೊದಲ ಧಾರಾವಾಹಿ. ಇದೊಂದು ಉತ್ತಮ ಅನುಭವ" ಎಂದು ಅವರು ಶೂಟಿಂಗ್ ಮುಗಿದ ನಂತರ ಹೇಳಿದರು.
ತಮಿಳಿನ Ayudha Ezhuthu ರಿಮೇಕ್ ಆಗಿರುವ "ಸಂಘರ್ಷ" ಇದಾಗಲೇ 100 ಕಂತುಗಳ ಪ್ರಸಾರ ಮುಗಿಸಿದೆ. ತೇಜಸ್ವಿನಿ ಶೇಖರ್, ರೋಹಿತ್ ರಂಗಸ್ವಾಮಿ ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಧಾರಾವಾಘಿಯನ್ನು ಶ್ರುತಿ ನಾಯ್ಡು ನಿರ್ದೇಶನ ಮಾಡಿದ್ದಾರೆ.
ಈ ಹಿಂದೆ ಹರಿಪ್ರಿಯಾ ಉದಯ ಟಿವಿಯ ನಾಯಕಿ' ಧಾರಾವಾಹಿಯ ಕಥೆ ಹೇಳುವುದಕ್ಕಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ "ಸಂಘರ್ಷ"ದ ಮೂಲಕ ಇದೇ ಮೊದಲ ಬಾರಿಗೆ ಧಾರಾವಾಹಿಯಿಂದರಲ್ಲಿ ಅಭಿನಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


