ಸಿನಿಮಾ ಸುದ್ದಿ

ಥಿಯೇಟರ್ ನಲ್ಲಿ ಸದ್ದು ಮಾಡಲಿದೆ ಅದಿ-ನಿಧಿ ಸ್ಟೋರಿ: ಅಕ್ಟೋಬರ್ 16 ರಂದು 'ಲವ್ ಮಾಕ್ಟೇಲ್' ಮತ್ತೆ ರಿಲೀಸ್

ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಲವ್ ಮೋಕ್ಟೆಲ್’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಥಿಯೇಟರ್ ನಲ್ಲಿ ಸದ್ದು ಮಾಡಲಿದೆ ಅದಿ-ನಿಧಿ ಸ್ಟೋರಿ: ಅಕ್ಟೋಬರ್ 16 ರಂದು 'ಲವ್ ಮಾಕ್ಟೇಲ್' ಮತ್ತೆ ರಿಲೀಸ್
Published On :

ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಲವ್ ಮೋಕ್ಟೆಲ್’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. 

ಅಕ್ಟೋಬರ್ 16 ರಂದು ಆದಿ-ನಿಧಿ  ಪ್ರೇಮ್ ಕಹಾನಿ ದೊಡ್ಡ ಪರದೆಗೆ ಪುನಃ ಬರಲಿದೆ ಎಂದು ನಿರ್ದೇಶಕ, ನಿರ್ಮಾಪಕ ಡಾರ್ಲಿಂಗ್ ಕೃಷ್ಣ ತಿಳಿಸಿದ್ದಾರೆ. ಸಿನಿಮಾವನ್ನು ಮರು ಬಿಡುಗಡೆ ಮಾಡುತ್ತಿರುವುದಕ್ಕೆ ಸಾಕಷ್ಟು  ಮಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಜನವರಿ 31 ರಂದು ಲವ್ ಮಾಕ್ಟೇಲ್ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡು ಉತ್ತಮ ವಿಮರ್ಶೆ ಪಡೆದಿತ್ತಾದರೂ, ಸಾಧಾರಣ ಹಿಟ್ ಕಂಡಿತ್ತು. ಲಾಕ್‌ಡೌನ್ ಬಂದ ಕಾರಣ ಲವ್ ಮಾಕ್ಟೆಲ್ ಹೆಚ್ಚು ಕಾಲ ಚಿತ್ರಮಂದಿರದಲ್ಲಿರದ ಲವ್ ಮಾಕ್ಟೆಲ್ ಅನ್ನು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಮಾಡಲಾಯಿತು. ಲಕ್ಷಾಂತರ ಮಂದಿ  ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿ ಮರು ಬಿಡುಗಡೆ ಒತ್ತಾಯಿಸಿದ್ದರು. ಹೀಗಾಗಿ ಇದೀಗ ಲವ್ ಮೋಕ್ಟೆಲ್ ಸಿನಿಮಾ ಮರು ಬಿಡುಗಡೆ ಆಗುತ್ತಿದೆ

ಈ ಬಗ್ಗೆ ಲವ್ ಮೋಕ್ಟೆಲ್ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಸಿನಿಮಾವನ್ನು ಮರು ಬಿಡುಗಡೆ ಮಾಡುತ್ತಿರುವುದಕ್ಕೆ ಸಾಕಷ್ಟು ಮಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಸಿನಿಮಾ ರಿ ರಿಲೀಸ್ ಆಗುತ್ತಿದೆ ಎನಿಸುತ್ತಿಲ್ಲ, ಲವ್ ಮಾಕ್ಟೇಲ್ ಹೊಸದಾಗಿ  ರಿಲೀಸ್ ಆಗುತ್ತಿದೆ ಎಂಬ ಬಾವನೆ ಮೂಡುತ್ತಿದೆ ಎಂದು ನಟ ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.