ಸಿನಿಮಾ ಸುದ್ದಿ

‘ಆಕ್ಟ್ 1978’ರಲ್ಲಿ ಅನುಭವಿ ಸ್ಟಾರ್ ನಟ-ನಟಿಯರ ದೊಡ್ಡ ತಾರಾದಂಡು

ಸ್ಯಾಂಡಲ್ವುಡ್ ಅಂಗಳದಲ್ಲಿ ಭಾರೀ ಸದ್ಧು ಮಾಡುತ್ತಿರೋ, ಸುದ್ದಿಯಲ್ಲಿರೋ ಚಿತ್ರ ಮಂಸೋರೆ ನಿರ್ದೇಶನದ ‘ಆಕ್ಟ್ 1978’. ಒಂದು ಕಡೆ ಚಿತ್ರದ ಕಥಾಹಂದರ ಕುತೂಹಲ ಹುಟ್ಟುಹಾಕಿದ್ರೆ ಇನ್ನೊಂದು ಕಡೆ ಚಿತ್ರದ ತಾರಾಬಳಗ ಕೂಡ ಸಖತ್ ಸದ್ಧು ಮಾಡ್ತಿದೆ.

‘ಆಕ್ಟ್ 1978’ರಲ್ಲಿ ಅನುಭವಿ ಸ್ಟಾರ್ ನಟ-ನಟಿಯರ ದೊಡ್ಡ ತಾರಾದಂಡು
ನಿರ್ದೇಶಕ ಮಂಸೋರೆ
Published On :

ಸ್ಯಾಂಡಲ್ವುಡ್ ಅಂಗಳದಲ್ಲಿ ಭಾರೀ ಸದ್ಧು ಮಾಡುತ್ತಿರೋ, ಸುದ್ದಿಯಲ್ಲಿರೋ ಚಿತ್ರ ಮಂಸೋರೆ ನಿರ್ದೇಶನದ ‘ಆಕ್ಟ್ 1978’. ಒಂದು ಕಡೆ ಚಿತ್ರದ ಕಥಾಹಂದರ ಕುತೂಹಲ ಹುಟ್ಟುಹಾಕಿದ್ರೆ ಇನ್ನೊಂದು ಕಡೆ ಚಿತ್ರದ ತಾರಾಬಳಗ ಕೂಡ ಸಖತ್ ಸದ್ಧು ಮಾಡ್ತಿದೆ. 

<strong>ಯಜ್ಞಾ ಶೆಟ್ಟಿ</strong>
ಯಜ್ಞಾ ಶೆಟ್ಟಿ

ಹೌದು, ‘ಆಕ್ಟ್ 1978’ ಚಿತ್ರದಲ್ಲಿ ಅತಿ ದೊಡ್ಡ ಅನುಭವಿ ಸ್ಟಾರ್ ನಟ-ನಟಿಯರ ತಾರಾ ದಂಡೇ ಇದೇ. ಯಜ್ಞಾ ಶೆಟ್ಟಿ, ದತ್ತಣ್ಣ, ಬಿ.ಸುರೇಶ್, ಅವಿನಾಶ್, ಶ್ರುತಿ, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಸಂಚಾರಿ ವಿಜಯ್, ಶೋಭರಾಜ್, ಸಂಪತ್ ಕುಮಾರ್, ಪ್ರಮೋದ್ ಶೆಟ್ಟಿ, ಶರಣ್ಯ ಸೇರಿದಂತೆ ನಟನೆಯ ಮೂಲಕವೇ ಚಿತ್ರರಂಗದಲ್ಲಿ ಅಚ್ಚೊತ್ತಿರೋ ಇಪ್ಪತ್ತಕ್ಕೂ ಹೆಚ್ಚು ಅನುಭವಿ ಕಲಾವಿದರ ದೊಡ್ಡ ದಂಡೇ ಈ ಚಿತ್ರದಲ್ಲಿದೆ. 

ಇದೂ ಕೂಡ ‘ಆಕ್ಟ್ 1978’ ಚಿತ್ರದ ಮೇಲಿನ ಸಿನಿರಸಿಕರ ಕುತೂಹಲ ಹೆಚ್ಚಾಗಲು ಮತ್ತೊಂದು ಕಾರಣ. ದೇವರಾಜ್. ಆರ್ ನಿರ್ಮಿಸಿರೋ ಈ ಚಿತ್ರಕ್ಕೆ ಖ್ಯಾತ ಕ್ಯಾಮೆರಾ ನಿರ್ದೇಶಕ ಸತ್ಯ ಹೆಗ್ಡೆ ಕ್ಯಾಮೆರಾ ಕೈಚಳವಿದೆ. 

<strong>ಯಜ್ಞಾ ಶೆಟ್ಟಿ, ಶ್ರುತಿ, ಶರಣ್ಯ</strong>
ಯಜ್ಞಾ ಶೆಟ್ಟಿ, ಶ್ರುತಿ, ಶರಣ್ಯ

‘ಆಕ್ಟ್1978’ ಸೋಶಿಯಲ್ ಥ್ರಿಲ್ಲರ್ ಸಿನಿಮಾವಾಗಿದ್ದು ಚಿತ್ರಕ್ಕೆ ಪೂರಕವಾಗುವಂತಾ ಸಂಗೀತವನ್ನು ರೋನಡ ಬಕ್ಕೇಶ್, ರಾಹುಲ್ ಶಿವಕುಮಾರ್ ನೀಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಕೂಡ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿವೆ. 

ಸೆನ್ಸಾರ್ ಅಂಗಳದಲ್ಲಿ ‘ಯು’ ಸರ್ಟಿಫಿಕೇಟ್ ಪಡೆದಿರೋ ಈ ಚಿತ್ರ ಸದ್ಯದಲ್ಲಿ ಬಿಡುಗಡೆ ಭಾಗ್ಯವನ್ನು ಕಾಣಲು ಸಿದ್ದವಾಗಿದೆ. 

<strong>ಅವಿನಾಶ್, ಬಾಲಾ ರಾಜ್ವಾಡಿ, ಬಿ.ಸುರೇಶ್, ದತ್ತಣ್ಣ</strong>
ಅವಿನಾಶ್, ಬಾಲಾ ರಾಜ್ವಾಡಿ, ಬಿ.ಸುರೇಶ್, ದತ್ತಣ್ಣ

ಚಿತ್ರದ ತುಣುಕುಗಳ ಬಗ್ಗೆ ಎಲ್ಲೆಡೆ ಕೇಳಿ ಬರ್ತಿರೋ ಉತ್ತಮ ಪ್ರತಿಕ್ರಿಯೆ ಹಾಗೂ ಬೆಂಬಲ ಕೇಳಿ ನಿರ್ದೇಶಕ ಮಂಸೋರೆ ಖುಷಿಯಾಗಿದ್ದು, ಸಿನಿಮಾ ಕೂಡ ಇನ್ನಷ್ಟು ಮನರಂಜನೆ ನೀಡಲಿದೆ ಎಂದು ಭರವಸೆ ನೀಡಿದ್ದಾರೆ. 

ಟೈಟಲ್, ಪೋಸ್ಟರ್, ಟ್ರೈಲರ್ ಹೀಗೆ ಪ್ರತಿಯೊಂದು ಅಂಶಗಳು ‘ಆಕ್ಟ್ 1978’ ಚಿತ್ರದ ಮೇಲಿನ ಎಲ್ಲರ ಗಮನ ಹೆಚ್ಚು ಮಾಡಿದ್ದು, ಚಿತ್ರದಲ್ಲೇನಿದೆ, ನಿರ್ದೇಶಕರು ಹೇಳ ಹೊರಟಿರೋದೇನು ಎಂಬ ಚಿತ್ರಪ್ರೇಮಿಗಳ ಪ್ರಶ್ನೆಗೆ ನವೆಂಬರ್ 20ಕ್ಕೆ ಉತ್ತರ ಸಿಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.