ಇದು ರವಿ ಬೆಳೆಗೆರೆ ಸಾವಲ್ಲ, ಹುಟ್ಟು: ಯೋಗರಾಜ್ ಭಟ್
ಕನ್ನಡ ಅಭಿಮಾನಿಯಾಗಿ ಇದು ರವಿ ಬೆಳಗೆರೆ ಅವರ ಸಾವಲ್ಲ, ಅವರ ಹುಟ್ಟು ಎಂದು ಸಾಹಿತಿ,ನಿರ್ದೇಶಕ ಯೋಗರಾಜ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಕನ್ನಡ ಅಭಿಮಾನಿಯಾಗಿ ಇದು ರವಿ ಬೆಳಗೆರೆ ಅವರ ಸಾವಲ್ಲ, ಅವರ ಹುಟ್ಟು ಎಂದು ಸಾಹಿತಿ, ನಿರ್ದೇಶಕ ಯೋಗರಾಜ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರೀಷ್ಮಾ ಹಿಲ್ಸ್ ನ ರವಿಬೆಳಗೆರೆಯ ಅವರ ನಿವಾಸದಲ್ಲಿ ಅಂತಿಮ ದರ್ಶನ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಮೊನ್ನೆವರೆಗೂ ಫೋನ್ ನಲ್ಲಿ ರವಿ ಬೆಳಗೆರೆಯೊಂದಿಗೆ ನನ್ನ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದೆ. ಅವರಿಗೆ ಅನಾರೋಗ್ಯ ಕಾಡುತ್ತಲೇ ಇತ್ತು. ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಎಂದು ಹೊರಟುಬಿಟ್ಟಿದ್ದಾರೆನೋ ಅನ್ನಿಸುತ್ತಿದೆ ಎಂದು ಅವರು ಸಂತಾಪ ಸೂಚಿಸಿದರು.
ರವಿ ಬೆಳೆಗೆರೆ ಅವರು ನೆನಪು, ಬರಹಗಳೊಂದಿಗೆ ನಮ್ಮೊಂದಿಗಿದ್ದಾರೆ. ಅವರು ಸಂಗೀತ ಪ್ರಿಯರಾಗಿದ್ದು, ನನ್ನದು ಅವರದ್ದು ಅದ್ಭುತ ಸ್ನೇಹ ಎಂದರು.
ನನ್ನ ಚಿತ್ರ, ಹಾಡುಳ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದರು. ತುಂಬು ಜೀವನವನ್ನು ನಡೆಸಿದ್ದು, ಧೈರ್ಯಕ್ಕೆ ಮತ್ತೊಂದು ಹೆಸರು ಧೀಮಂತ ಪತ್ರಕರ್ತ ಎಂದರು.
ಎಲ್ಲಾ ಕಲೆಗಳನ್ನು ಮೋಹಿಸಿ ಬದುಕಿದ ಜೀವ ಅವರದ್ದು. ಕಳೆದ ವರ್ಷ ಕರಾವಳಿಯಲ್ಲಿ ನನಗೆ ಪ್ರಶಸ್ತಿ ನೀಡಿದ್ದರು. ಈಗ ಹೋಗಿ ಬನ್ನಿ ಎನ್ನುವುದು ಬಿಟ್ಟರೆ ಬೇರೆನಿಲ್ಲ ಎಂದು ಅವರು ಬೇಸರಿಂದ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


