‘ಸೀತಾಯಣ ಟೀಸರ್’ಗೆ ಕರುನಾಡ ಚಕ್ರವರ್ತಿ ಶಿವಣ್ಣ ಮೆಚ್ಚುಗೆ
ಕಲರ್ಸ್ ಕ್ಲೌಡ್ಸ್ ಎಂಟರ್‌ಟೈನ್‌ಮೆಂಟ್ ನಿರ್ಮಾಣದ, ಶಶಿಕುಮಾರ್ ಪುತ್ರ ಅಕ್ಷಿತ್ ಅಭಿನಯದ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯ ‘ಸೀತಾಯಣ’ ಸಿನಿಮಾದ ಟೀಸರ್‌ನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಬಿಡುಗಡೆಗೊಳಿಸಿದರು.

ಬೆಂಗಳೂರು: ಕಲರ್ಸ್ ಕ್ಲೌಡ್ಸ್ ಎಂಟರ್‌ಟೈನ್‌ಮೆಂಟ್ ನಿರ್ಮಾಣದ, ಶಶಿಕುಮಾರ್ ಪುತ್ರ ಅಕ್ಷಿತ್ ಅಭಿನಯದ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯ ‘ಸೀತಾಯಣ’ ಸಿನಿಮಾದ ಟೀಸರ್‌ನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಬಿಡುಗಡೆಗೊಳಿಸಿದರು.
ಸುಪ್ರೀಂ ಹೀರೋ ಶಶಿಕುಮಾರ್ ನನಗೆ ಸೋದರನಿದ್ದಂತೆ. ಅವರ ಮಗ ಮೂರು ಭಾಷೆಯಲ್ಲಿ ನಾಯಕನಾಗಿ ಪರಿಚಯವಾಗುತ್ತಿರುವುದು ನಿಜವಾಗಿ ಗೌರವ ಪಡುವಂತದ್ದಾಗಿದೆ. ಬೇರೆ ಯಾವ ನಟನಿಗೂ ಸಿಗದಂತ ಗೌರವವಿದು. ಟೀಸರ್ ನನ್ನ ಕೈಲಿಂದ ಬಿಡುಗಡೆ ಮಾಡಿದ್ದು ತುಂಬ ಸಂತಸ ಉಂಟು ಮಾಡಿದೆ. ಸಿನಿಮಾ ಕೂಡ ಖಂಡಿತ ಹಿಟ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ ಎಂದರು.
ಮಿಕ್ಸಡ್ ಕಾಂಟೆಂಪರರಿ ಕಂಟೆಂಟ್ ಆಗಿದ್ದು, ಹಾಡುಗಳು, ಸಂದೇಶ ಕೂಡ ವಿಭಿನ್ನವಾಗಿದೆ. ಮೂರು ಭಾಷೆಗಳಲ್ಲಿ ಒಬ್ಬ ಕನ್ನಡ ಹುಡುಗನನ್ನು ಹಾಕಿಕೊಂಡು ನಿರ್ಮಾಣ ಮಾಡಿರುವ ನಿರ್ಮಾಪಕಿ ಅವರಿಗೆ ಅಭಿನಂದನೆಗಳು. ರಾಮಾಯಣದಂತೆ ಈ ಸಿನಿಮಾವು ಎಲ್ಲಾ ಭಾಷೆಯಲ್ಲಿ ಚರಿತ್ರೆ ಸೃಷ್ಟಿಸಲಿ. ಅಕ್ಷಿತ್ ಕೂಡ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಪ್ರತಿಭೆ, ಸುಂದರವಾಗಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶಿವರಾಜ್‌ಕುಮಾರ್ ಶುಭ ಹಾರೈಸಿದರು.
ನಿರ್ಮಾಪಕಿ ಲಲಿತಾರಾಜಲಕ್ಷೀ ಮಾತನಾಡಿ, ಟೀಸರ್ ಬಿಡುಗಡೆ ಮಾಡಿದ ಡಾ.ಶಿವರಾಜ್‌ಕುಮಾರ್ ಅವರಿಗೆ ಥ್ಯಾಂಕ್ಸ್. ಸೀತಾಯಣ ಸಿನಿಮಾದಲ್ಲಿ ಮಹಿಳೆಯರಿಗೆ ಗೌರವ ಕೊಡಿ ಎಂದು ಹೇಳುವ ವಿಷಯವಿದೆ. ಅತಿ ಶೀಘ್ರದಲ್ಲೇ ತೆರೆಗೆ ತರುವ ಯೋಜನೆ ಇದೆ ಎಂದರು.
ಅಕ್ಷಿತ್ ಶಶಿಕುಮಾರ್‌ಗೆ ಜೋಡಿಯಾಗಿ ಅನಹಿತಾಭೂಷಣ್, ಉಳಿದಂತೆ ಅಜೆಯ್ ಘೋಷ್, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್, ಮಧುಸುಧನ್, ವಿಕ್ರಂ ಶರ್ಮ, ಮೇಘನಾಗೌಡ, ಬೇಬಿ ತ್ರಿಯುಕ್ತ, ವಿದ್ಯಲೇಖರಾಮನ್ ಮುಂತಾದವರು ನಟಿಸಿದ್ದಾರೆ.
ಕತೆ ಮತ್ತು ನಿರ್ದೇಶನ ಪ್ರಭಾಕರ್ ಆರಿಪ್ಕಾ, ಸಂಗೀತ ಪದ್ಮನಾಭಭಾರದ್ವಾಜ್, ಛಾಯಾಗ್ರಹಣ ದುರ್ಗಾಪ್ರಸಾದ್‌ಕೊಲ್ಲಿ, ಸಂಕಲನ ಪ್ರವೀಣ್ ಪುಡಿ, ಸಾಹಿತ್ಯ ಕವಿರಾಜ್-ಗೌಸ್ ಪೀರ್, ಸಾಹಸ ರಿಯಲ್ ಸತೀಶ್ ನಿರ್ವಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


