ಅರವಿಂದ್ ಕಾಮತ್ ನಿರ್ದೇಶನ 'ಅರಿಷಡ್ವರ್ಗ' ಟ್ರೈಲರ್ ನವೆಂಬರ್ 12ಕ್ಕೆ ರಿಲೀಸ್
ಕಾಮ, ಕೋಪ, ಪ್ರೀತಿ, ದುರಾಸೆ, ಶಕ್ತಿ, ಅಸೂಯೆ, ತಪ್ಪು ಗ್ರಹಿಕೆ ಮತ್ತು ವೈಯಕ್ತಿಕ ನ್ಯೂನತೆಗಳನ್ನು ಕಥೆ ನಿರೂಪಿಸುತ್ತದೆ. ಅರವಿಂದ್ ಕಾಮತ್ ಸಿನಿಮಾ ಕೂಡ ನಿರ್ಮಾಣ ಮಾಡುತ್ತಿದ್ದಾರೆ,

ಅರವಿಂದ್ ಕಾಮತ್ ನಿರ್ದೇಶನದ ಅರಿಷಡ್ವರ್ಗ 2019ರ ಲಂಡನ್ ವರ್ಲ್ಡ್ ಪ್ರೀಮಿಯರ್ ಮತ್ತು ಸಿಂಗಾಪುರದಲ್ಲಿ ನಡೆದ ಸೌತ್ ಏಷ್ಯನ್ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಸೇರಿದಂತೆ ಹಲವು ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಸುತ್ತಿ ಬಂದಿದ್ದು, ತಿಂಗಳಾಂತ್ಯದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.
ಅದಕ್ಕೂ ಮುನ್ನ ನವೆಂಬರ್ 12 ರಂದು ಹಿರಿಯ ನಟ ಪ್ರಕಾಶ್ ಬೆಳವಾಡಿ ಟ್ರೈಲರ್ ರಿಲೀಸ್ ಮಾಡಲಿದ್ದಾರೆ.
ಅರಿಷಡ್ವರ್ಗ ಮಿಸ್ಟರಿ ಥ್ರಿಲ್ಲರ್ ಆಗಿದ್ದು, ಪ್ರಮುಖ ಪಾತ್ರದಲ್ಲಿ ಸಂಯುಕ್ತಾ ಹೊರನಾಡು ಮತ್ತು ನಂದ ಗೋಪಾಲ್, ಅವಿನಾಶ್, ಮಹೇಶ್ ಬಂಗ್, ಅಂಜು ಅಲ್ವಾ ನಾಯಕ್, ಅರವಿಂದ್ ಕುಪ್ಲಿಕರ್ ಪಾಲಕೃಷ್ಣ ದೇಶಪಾಂಡೆ ಮತ್ತು ಶ್ರೀಪತಿ ಮಂಜನ ಬೈಲು ಮುಂತಾದವರು ನಟಿಸಿದ್ದಾರೆ.
ಕಾಮ, ಕೋಪ, ಪ್ರೀತಿ, ದುರಾಸೆ, ಶಕ್ತಿ, ಅಸೂಯೆ, ತಪ್ಪು ಗ್ರಹಿಕೆ ಮತ್ತು ವೈಯಕ್ತಿಕ ನ್ಯೂನತೆಗಳನ್ನು ಕಥೆ ನಿರೂಪಿಸುತ್ತದೆ. ಅರವಿಂದ್ ಕಾಮತ್ ಸಿನಿಮಾ ಕೂಡ ನಿರ್ಮಾಣ ಮಾಡುತ್ತಿದ್ದಾರೆ, ಉದಿತ್ ಹರಿತಾಸ್ ಸಂಗೀತ್ ನೀಡಿದ್ದು, ಬಾಲಾಜಿ ಮನೋಹರ್ ಸಿನಿಮಾಟೋಗ್ರಫಿ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


