'ಶುಗರ್ ಫ್ಯಾಕ್ಟರಿ' ಸೇರಲು ಸೋನಾಲ್ ಮಾಂಟೆರೊ ರೆಡಿ!
ದೀಪಕ್ ಅರಸ್ ನಿರ್ದೇಶನದ ಕಾಮಿಡಿ ಎಂಟರ್ಟೈನರ್ "ಶುಗರ್ ಫ್ಯಾಕ್ಟರಿ" ಮೂವರು ನಾಯಕಿಯರನ್ನು ಹೊಂದಿದೆ. ಈ ಮೂವರ ಪೈಕಿ ಇದೀಗ ಸೋನಾಲ್ ಮಾಂಟೆರೋ ತಂಡಕ್ಕೆ ಸೇರಿಕೊಳ್ಳುತ್ತಿದ್ದಾರೆ.

ದೀಪಕ್ ಅರಸ್ ನಿರ್ದೇಶನದ ಕಾಮಿಡಿ ಎಂಟರ್ಟೈನರ್ "ಶುಗರ್ ಫ್ಯಾಕ್ಟರಿ" ಮೂವರು ನಾಯಕಿಯರನ್ನು ಹೊಂದಿದೆ. ಈ ಮೂವರ ಪೈಕಿ ಇದೀಗ ಸೋನಾಲ್ ಮಾಂಟೆರೋ ತಂಡಕ್ಕೆ ಸೇರಿಕೊಳ್ಳುತ್ತಿದ್ದಾರೆ.
ತರುಣ್ ಕಿಶೋರ್ ಸುಧೀರ್ ನಿರ್ದೇಶನದ ದರ್ಶನ್ ಅಭಿನಯದ "ರಾಬರ್ಟ್" ನಾಯಕಿಯಾದ ಸೋನಾಲ್ ಈ ಹಿಂದೆ "ಪಂಚತಂತ್ರ" ಚಿತ್ರದಲ್ಲಿ ಅಭಿನಯಿಸಿದ್ದರು. ಇದೀಗ "ಶಂಬೋ ಶಿವಶಂಕರ" ಚಿತ್ರದ ಶೂಟಿಂಗ್ ನಡೆಸಿರುವ ನಟಿ "ಶುಗರ್ ಫ್ಯಾಕ್ಟರಿ" ಸೇರಲು ಒಪ್ಪಿದ್ದಾರೆ.
ಶುಗರ್ ಫ್ಯಾಕ್ಟರಿ ನಾಯಕ ಕೃಷ್ಣ ಆಗಿದ್ದು ಚಿತ್ರವನ್ನು ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಗಿರೀಶ್ ರುಂದೇರ್ ನಿರ್ಮಿಸಲಿದ್ದಾರೆ. ನಿರ್ದೇಶಕ ದೀಪಕ್ ಚಿತ್ರಕ್ಕೆ ಕಥೆಯನ್ನೂ ಬರೆದಿದ್ದು ನಿರ್ದೇಶಕ ಚೇತನ್ ಕುಮಾರ್ ಇದಕ್ಕೆ ಸಂಭಾಷಣೆ ಬರೆದಿದ್ದಾರೆ.
ಜನವರಿಯಿಂದ ಚಿತ್ರದ ಶೂಟಿಂಗ್ ಪ್ರಾರಂಭಿಸಲು ಯೋಜಿಸಿರುವ ತಯಾರಕರು ಮೊದಲ ಶೆಡ್ಯೂಲ್ ಅನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಿದ್ದು, ನಂತರ ಗೋವಾ, ಮೈಸೂರಿನಲ್ಲಿ ಶೂಟಿಂಗ್ ನಡೆಯಲಿದೆ. ಅಂತಿಮವಾಗಿ ವಿದೇಶಗಳಿಗೆ ತೆರಳಲು ಚಿತ್ರತಂಡ ಯೋಜಿಸಿದೆ. ಚಿತ್ರದ ಇನ್ನಿಬ್ಬರು ನಾಯಕಿಯರು, ಇತರೆ ಪಾತ್ರವರ್ಗ ಇನ್ನೂ ಅಂತಿಮವಾಗಿಲ್ಲ. ಚಿತ್ರಕ್ಕೆ ಸಂಗೀತ ಕಬೀರ್ ರಫಿಯವರದ್ದಾಗಿದ್ದು ಸಂತೋಷ್ ರೈ ಪತಾಜೆ ಛಾಯಾಗ್ರಹಣವಿರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


