ಸಿನಿಮಾ ಸುದ್ದಿ

ಮತ್ತೆ ‘ಕಿರಿಕ್’ ಮಾಡ್ತಾರಂತೆ ರಕ್ಷಿತ್ ಶೆಟ್ಟಿ, ಆದರೆ ಚಿತ್ರದಲ್ಲಿ ರಶ್ಮಿಕಾ ಇರೋದು ಅನುಮಾನ

ಕಿರಿಕ್ ಪಾರ್ಟಿ ಮಾಡಿದ್ದ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಮತ್ತೆ ಕಿರಿಕ್ ಮಾಡ್ತಾರಂತೆ. ಏನೂಂತ ಅರ್ಥ ಆಯ್ತಲ್ವ? . . . ಹೌದು. ಶೆಟ್ಟಿದ್ವಯರಿಬ್ಬರೂ ‘ಕಿರಿಕ್ ಪಾರ್ಟಿ 2’ ಮಾಡ್ತಾರಂತೆ.

ಮತ್ತೆ ‘ಕಿರಿಕ್’ ಮಾಡ್ತಾರಂತೆ ರಕ್ಷಿತ್ ಶೆಟ್ಟಿ, ಆದರೆ ಚಿತ್ರದಲ್ಲಿ ರಶ್ಮಿಕಾ ಇರೋದು ಅನುಮಾನ
'ಕಿರಿಕ್ ಪಾರ್ಟಿ' ಸಿನೆಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ
Published On :

ಬೆಂಗಳೂರು: ಕಿರಿಕ್ ಪಾರ್ಟಿ ಮಾಡಿದ್ದ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಮತ್ತೆ ಕಿರಿಕ್ ಮಾಡ್ತಾರಂತೆ. ಏನೂಂತ ಅರ್ಥ ಆಯ್ತಲ್ವ? . . . ಹೌದು. ಶೆಟ್ಟಿದ್ವಯರಿಬ್ಬರೂ ‘ಕಿರಿಕ್ ಪಾರ್ಟಿ 2’ ಮಾಡ್ತಾರಂತೆ.
 
ಲವಲವಿಕೆ, ಹಾಸ್ಯ, ನವಿರಾದ ಪ್ರೇಮಕತೆ ಹೊಂದಿದ್ದ ಕಿರಿಕ್ ಸಿನಿಮಾದ ಮುಂದುವರಿದ ಭಾಗ ಹೇಗಿರಬಹುದು ಎಂಬ ಕುತೂಹಲ ಈಗಾಗಲೇ ಎಲ್ಲರಲ್ಲೂ ಮೂಡಿದೆ. ‘ಕಿರಿಕ್ ಪಾರ್ಟಿ-2’ ಕ್ಕೂ ರಿಷಬ್ ಶೆಟ್ಟಿಯವರೇ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಆದರೆ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಇರೋದು ಅನುಮಾನ ಎನ್ನಲಾಗಿದೆ.
 
ಪ್ರಸ್ತುತ ರಕ್ಷಿತ್ ಶೆಟ್ಟಿ '777 ಚಾರ್ಲಿ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಹೇಮಂತ್ ರಾವ್ ನಿರ್ದೇಶನದ 'ಸಪ್ತಸಾಗರದಾಚೆ ಯೆಲ್ಲೊ' ಸಿನಿಮಾದಲ್ಲಿ ನಟಿಸಬೇಕಿದೆ. ಅದರ ನಂತರ ತಮ್ಮದೇ ಸ್ವಂತ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ. ಅದರ ಕತೆ ಈಗಾಗಲೇ ತಯಾರಾಗಿದೆಯಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.