ನಾಗಶೇಖರ್ ಮುಂದಿನ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ: ಲವ್ ಮಾಕ್ಟೇಲ್ ಹೀರೋಗೆ ರಾಧಿಕಾ ಕುಮಾರಸ್ವಾಮಿ ನಾಯಕಿ?
ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವ ನಿರ್ದೇಶಕ ನಾಗಶೇಖರ್ ಕಥೆ ಸಿದ್ದಪಡಿಸಿದ್ದಾರೆ, ನಾಗಶೇಖರ್ ಸಿನಿಮಾಗೆ ಕೃಷ್ಣ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಕಥೆಯ ಪಾತ್ರಕ್ಕೆ ಕೃಷ್ಣ ಫಿಟ್ ಆಗುತ್ತಾರೆ ಹೀಗಾಗಿ ಅವರನ್ನೇ ಆಯ್ಕೆ ಮಾಡಿದ್ದಾಗಿ ನಾಗಶೇಖರ್ ತಿಳಿಸಿದ್ದಾರೆ.

ಸಂದೇಶ್ ನಾಗರಾಜ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಿನಿಮಾವನ್ನು ನಾಗಶೇಖರ್ ನಿರ್ದೇಶಿಸುತ್ತಿದ್ದು, ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಟಿಸುತ್ತಿದ್ದಾರೆ.
ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವ ನಿರ್ದೇಶಕ ನಾಗಶೇಖರ್ ಕಥೆ ಸಿದ್ದಪಡಿಸಿದ್ದಾರೆ, ನಾಗಶೇಖರ್ ಸಿನಿಮಾಗೆ ಕೃಷ್ಣ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಕಥೆಯ ಪಾತ್ರಕ್ಕೆ ಕೃಷ್ಣ ಫಿಟ್ ಆಗುತ್ತಾರೆ ಹೀಗಾಗಿ ಅವರನ್ನೇ ಆಯ್ಕೆ ಮಾಡಿದ್ದಾಗಿ ನಾಗಶೇಖರ್ ತಿಳಿಸಿದ್ದಾರೆ.
'ಲವ್ ಮಾಕ್ಟೇಲ್' ಸಿನಿಮಾದಲ್ಲಿ ಲವ್ವರ್ ಬಾಯ್ ಆಗಿದ್ದ ಕೃಷ್ಣ, ಈ ಚಿತ್ರದಲ್ಲಿ ಫ್ಲರ್ಟ್ ಮಾಡುವ ಹುಡುಗನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಶೀರ್ಷಿಕೆ srikrishna@gmail.com ಎಂದು. ಸಿನಿಮಾ ಟೈಟಲ್ ಕೇಳಿದರೆ ಏನಿದೆ ತುಂಬ ವಿಶೇಷವಾಗಿದೆಯಲ್ಲ ಅಂತ ಅನಿಸುತ್ತಿದೆ. ಖ್ಯಾತ ಛಾಯಾಗ್ರಾಯಕ ಸತ್ಯ ಹೆಗಡೆ ಇಲ್ಲಿ ಕ್ಯಾಮರಾ ಕೈಚಳಕ ತೋರಿಸಲಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ ನೋಡಿಕೊಳ್ಳಲಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತವಿದ್ದು, ಕವಿರಾಜ್ ಸಾಹಿತ್ಯವಿದೆ.
'ಈ ಚಿತ್ರದ ಕಥೆ ಕೇಳಿ ತುಂಬ ಖುಷಿಯಾಯ್ತು. ನಾಗಶೇಖರ್ ಅವರ 'ಮೈನಾ' ಸಿನಿಮಾ ನನಗೆ ತುಂಬ ಇಷ್ಟ ಆಗಿತ್ತು. ಹೀಗಾಗಿ ಇವರ ಜೊತೆ ಕೆಲಸ ಮಾಡುತ್ತಿರೋದು ತುಂಬ ಸಂತಸ ಕೊಡುವ ವಿಷಯ. ಸಂದೇಶ್ ನಾಗರಾಜ್ ಬ್ಯಾನರ್‌ನಲ್ಲಿ ಸಿನಿಮಾ ಮಾಡುತ್ತಿರೋದಕ್ಕೆ ತುಂಬ ಖುಷಿಯಾಗುತ್ತಿದೆ. ಇವತ್ತಿನ ಜನರೇಶನ್ ಹುಡುಗರ ಕಥೆ ಇದಾಗಿದೆ. ಈ ಚಿತ್ರಕ್ಕೆ srikrishna@gmail.com ಎಂದು ಹೆಸರಿಡಲಾಗಿದೆ. ನನಗೆ ಇದು ತುಂಬ ಹೊಸ ಕಥೆ. ಇಲ್ಲಿ ಸೆನ್ಸಿಟಿವ್, ಹಾಸ್ಯದಿಂದ ಈ ಚಿತ್ರ ಕೂಡಿದೆ. ಯಾರೂ ನಿರೀಕ್ಷೆ ಮಾಡಿರದ ಕಥೆಯಿದು ಎಂದು ಕೃಷ್ಣ ತಿಳಿಸಿದ್ದಾರೆ.
ಇನ್ನೂ ಚಿತ್ರಕ್ಕೆ ನಾಯಕಿ ಆಯ್ಕೆ ಮಾಡಬೇಕಿದೆ, ರಾಧಿಕಾ ಕುಮಾರಸ್ವಾಮಿ ಅವರನ್ನು ಕರೆ ತರಲು ನಿರ್ಧರಿಸಿದ್ದಾರೆ, ಈಗಾಗಲೇ ರಾಧಿಕೊ ಜೊತೆ ಫೋನಿನಲ್ಲಿ ನಾಗಶೇಖರ್ ಮಾತನಾಡಿದ್ದಾರೆ, ಅವರನ್ನು ಭೇಟಿ ಮಾಡಿ ಕಥೆ ಹೇಳುವುದಾಗಿ ತಿಳಿಸಿದ್ದಾರೆ. ಸಿನಿಮಾದಲ್ಲಿ ದತ್ತಣ್ಣ ಸುಹಾಸಿನಿ, ಅರುಣ್ ಸಾಗರ್, ರಂಗಾಯಣ ರಘು ಮುಂತಾದವರು ನಟಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


