'ಹರಿಕಥೆ ಅಲ್ಲ ಗಿರಿ ಕಥೆ' ಹೇಳೋಕೆ ಬರ್ತಿದ್ದಾರೆ ರಿಷಬ್ ಶೆಟ್ಟಿ
ನಿರ್ದೇಶಕ, ನಟ ಮತ್ತು ನಿರ್ಮಾಪಕರಾಗಿ ಹೆಸರಾದ ರಿಷಬ್ ಶೆಟ್ಟಿ ಅವರು ತಮ್ಮ ಮುಂಬರುವ ಚಿತ್ರ ರುದ್ರಪ್ರಯಾಗ ನಿರ್ದೇಶನಕ್ಕೆ ಸಜ್ಜಾಗಿದ್ದು ಅದು ಅನಂತ್ ನಾಗ್ ನಾಯಕರಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ.

ನಿರ್ದೇಶಕ, ನಟ ಮತ್ತು ನಿರ್ಮಾಪಕರಾಗಿ ಹೆಸರಾದ ರಿಷಬ್ ಶೆಟ್ಟಿ ಅವರು ತಮ್ಮ ಮುಂಬರುವ ಚಿತ್ರ ರುದ್ರಪ್ರಯಾಗ ನಿರ್ದೇಶನಕ್ಕೆ ಸಜ್ಜಾಗಿದ್ದು ಅದು ಅನಂತ್ ನಾಗ್ ನಾಯಕರಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ. ಇದರ ನಡುವೆಯೇ ತಾವೂ ಒಂದು ಚಿತ್ರದಲ್ಲಿ ಅಭಿನಯಿಸಲು ಸಜ್ಜಾಗಿರುವ ಶೆಟ್ಟಿ ಗಿರಿ ಕೃಷ್ಣ ನಿರ್ದೇಶನದ ಹರಿಕಥೆ ಅಲ್ಲ ಗಿರಿ ಕಥೆ ಎಂಬ ಚಿತ್ರಕ್ಕಾಗಿ ಬಣ್ಣ ಹಚ್ಚುತ್ತಿದ್ದಾರೆ. ವಿಶೇಷವೆಂದರೆ ಈ ಚಿತ್ರ ರಿಷಬ್ ಶೆಟ್ಟಿಯ ಪ್ರೊಡಕ್ಷನ್ ಹೌಸ್ ನಿಂದ ಬರುತ್ತಿದೆ.
ಸಧ್ಯ ಇದೀಗ ತಯಾರಿಕಾ ಹಂತದಲ್ಲಿರುವ ಈ ಚಿತ್ರ ಲಾಕ್‌ಡೌನ್ ನಂತರ ಪ್ರಾರಂಭವಾಗುವ ರಿಷಬ್ ಶೆಟ್ಟಿಯವರ ಮೊದಲ ಚಿತ್ರವಾಗಿರಲಿದೆ. ರಿಷಬ್ ಬೆಲ್ ಬಾಟಮ್ ನಲ್ಲಿ ನಾಯಕನಾಗಿ ಯಶಸ್ವಿಯಾಗಿದ್ದು ಜಯತಿರ್ಥ ನಿರ್ದೇಶನದ ಕಾಮಿಡಿ ಕ್ರೈಮ್ ಥ್ರಿಲ್ಲರ್ ಚಿತ್ರ 2018 ರಲ್ಲಿ ಅತಿದೊಡ್ಡ ಹಿಟ್ ಚಿತ್ರವಾಗಿ ಮೂಡಿಬಂದಿತ್ತು. ಈಗ ಇತರ ಭಾಷೆಗಳಲ್ಲೂ ಈ ಚಿತ್ರ ರೀಮೇಕ್ ಆಗುತ್ತಿದೆ. ಇದಾದ ನಂತರ ರಿಷಬ್ ರಕ್ಷಿತ್ ಶೆಟ್ಟಿಯವರ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಕೌಬಾಯ್ ಕೃಷ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ಅಲ್ಲದೆ ಕಥಾ ಸಂಗಮ ಎಂಬ ಚಿತ್ರದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.
ಈಗ ಅವರು ಮತ್ತೆ ಪ್ರಮುಖ ನಾಯಕನ ಪಾತ್ರ ನಿರ್ವಹಿಸಲು ಸಜ್ಜಾಗಿದ್ದು ಹರಿಕಥೆ ಅಲ್ಲ ಗಿರಿ ಕಥೆ ಚಿತ್ರದ ಮೂಲಕ ಇನ್ನೊಮ್ಮೆ ಪ್ರೇಕ್ಷಕರಿಗೆ ಮೋಡಿ ಮಾಡುವವರಿದ್ದಾರೆ. ಗಿರಿ ಕೃಷ್ಣ ಅವರು ರೀಫಿಲ್ ಎಂಬ ಕಿರುಚಿತ್ರದಲ್ಲಿ ನಟಿಸಿದ್ದು ಮಾಕಮ್ಮಿ, ಲವ್ ಇನ್ ಮಂಡ್ಯ, ಎದೆಗಾರಿಕೆ, ಕರಿಯಾ ಕಣ್ ಬಿಟ್ಟಾ ಕಿರಿಕ್ ಪಾರ್ಟಿ ಇನ್ನೂ ಮೊದಲಾದ ಚಿತ್ರಗಳಲ್ಲಿ ಸಣ್ಣ ಸಣ್ಣ ಪಾತ್ರ ನಿರ್ವಹಿಸಿದ್ದಾರೆ.
ಚಿತ್ರದ ಉಳಿದ ಪಾತ್ರವರ್ಗದ ಆಯ್ಕೆ ಇನ್ನೂ ನಡೆಯಬೇಕಿದ್ದು ಅಜನೀಶ್ ಬಿ ಲೋಕನಾಥ್ ಸಂಗೀತ ರಂಗನಾಥ್ ಛಾಯಾಗ್ರಹಣ ಈ ಚಿತ್ರಕ್ಕಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


