ಲಾಕ್ ಡೌನ್ ವೇಳೆ ರೆಡಿಯಾಯ್ತು 'ಒಂದು ಗಿಫ್ಟಿನ ಕಥೆ' 11 ಪಾತ್ರ, 10 ಛಾಯಾಗ್ರಾಹಕರು!
ನಟನೆಯಲ್ಲಿ ತಮ್ಮ ಮನೋಜ್ಞ ಅಭಿನಯ ತೋರಿದ್ದ ನಟಿ ಪದ್ಮಜಾ ರಾವ್ ಅವರು ಇದೀಗ ಲಾಕ್ ಡೌನ್ ಸಂದರ್ಭದಲ್ಲೂ ಕಿರುಚಿತ್ರವೊಂದನ್ನು ನಿರ್ದೇಶಿಸಿ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಿದ್ದಾರೆ.

ನಟನೆಯಲ್ಲಿ ತಮ್ಮ ಮನೋಜ್ಞ ಅಭಿನಯ ತೋರಿದ್ದ ನಟಿ ಪದ್ಮಜಾ ರಾವ್ ಅವರು ಇದೀಗ ಲಾಕ್ ಡೌನ್ ಸಂದರ್ಭದಲ್ಲೂ ಕಿರುಚಿತ್ರವೊಂದನ್ನು ನಿರ್ದೇಶಿಸಿ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಿದ್ದಾರೆ.
ಒಂದು ಗಿಫ್ಟಿನ ಕಥೆ ಹೆಸರಿನ 30 ನಿಮಿಷದ ಕಿರುಚಿತ್ರವನ್ನು ಪದ್ಮಜಾ ರಾವ್ ಅವರು ನಿರ್ದೇಶಿಸಿದ್ದಾರೆ. ಈ ಕಿರುಚಿತ್ರದಲ್ಲಿ 11 ಪಾತ್ರಗಳು ಮತ್ತು 10 ಛಾಯಾಗ್ರಾಹಕರು ಕೆಲಸ ಮಾಡಿದ್ದಾರೆ. ಒಂದೇ ಬಡಾವಣೆಯಲ್ಲಿ ಇರುವವರ ಕಥೆಯನ್ನು ಹಾಸ್ಯ ಬೆರೆಸಿ ನಿರ್ಮಿಸಲಾಗಿದೆ.
ಈ ಕಿರುಚಿತ್ರದಲ್ಲಿ ಪದ್ಮಜಾ ರಾವ್, ಪ್ರವೀಣ್ ಡಿ. ರಾವ್, ಸ್ನೇಹಜಾ ಪ್ರವೀಣ್, ಸುಧಾ ಬೆಳವಾಡಿ, ಸುನೇತ್ರಾ ಪಂಡಿತ್ ಮತ್ತಿತ್ತರರು ನಟಿಸಿದ್ದಾರೆ. ಭಾರತ, ಕೆನಡಾ ಮತ್ತು ಅಮೆರಿಕದಲ್ಲಿ ನೆಲೆಸಿರುವವರು ಅಲ್ಲಿಂದಲೇ ತಮ್ಮ ಪಾತ್ರವನ್ನು ಚಿತ್ರೀಕರಿಸಿ ಕಳುಹಿಸಿದ್ದಾರೆ.
ಚಿತ್ರಕಥೆ ಬರೆಯುತ್ತಲೆ ನನಗೆ ಬಯಸಿದ ನಟರ ಬಗ್ಗೆ ಬಗ್ಗೆ ನನಗೆ ಸ್ಪಷ್ಟತೆ ಇತ್ತು. ಇನ್ನು ನಾನು ಕಳೆದ ವರ್ಷ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಾನು ಹಲವು ಕಲಾವಿದರ ಪರಿಚಯವಾಗಿತ್ತು ಎಂದು ಪದ್ಮಜಾ ರಾವ್ ಹೇಳಿದ್ದಾರೆ.
ಒಂದೇ ಬೀದಿಯಲ್ಲಿ ಶ್ರೀ ಜನಾರ್ಧನ ಮತ್ತು ಶ್ರೀ ಶರತ್ ಚಂದ್ರ ಎಂಬ ಎರಡು ಕುಟುಂಬವು ಎದುರು ಬದರು ನೆಲೆಸಿರುತ್ತದೆ. ಆದರೆ ಇವರು ಮಧ್ಯೆ ಯಾವುದೇ ಹೊಂದಾಣಿಕೆ ಇಲ್ಲದೆ ದ್ವೇಷಿಸುತ್ತಾ ಪದೇ ಪದೇ ಜಗಳವಾಡುತ್ತಿರುತ್ತಾರೆ. ಇದರಲ್ಲಿ ಶರತ್ ಚಂದ್ರ ಅವರ ಮಗ ಅನಿರುದ್ಧನು ಅಮೆರಿಕಾದಿಂದ ಉಡುಗೊರೆಯುಳ್ಳ ಕವರ್ ಒಂದನ್ನು ಕೊರಿಯರ್ ಮುಖಾಂತರ ಕಳುಹಿಸಿರುತ್ತಾರೆ. ಅದು ತಪ್ಪಾಗಿ ಜನಾರ್ಧನ ಮನೆ ಸೇರುತ್ತದೆ. ಇದನ್ನರಿತ ಶರತ್ ಚಂದ್ರ ಸ್ನೇಹಿತ ಗಿರೀಶ್ ನಿಂದ ಜನಾರ್ಧನನ ಫೋನ್ ನಂಬರ್ ಪಡೆದು ಸಂಪರ್ಕಿಸಲು ಪ್ರಯತ್ನಿಸುತ್ತಾನೆ. ಅದು ತಪ್ಪಾಗಿ ರಕ್ಷಾ ಕೌಶಿಕ್ ಎಂಬುವ ಮಹಿಳೆಯ ನಂಬರ್ ಗೆ ಕರೆ ಹೋಗುತ್ತದೆ. ಹೀಗೆ ಪೀಕಲಾಟಗಳಿಂದ ಚಿತ್ರಕಥೆ ಕೂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


