60ರ ದಶಕದ ಬೊಗಸೆ ಕಂಗಳ ಚೆಲುವೆ ನಟಿ ನಿಮ್ಮಿ ವಿಧಿವಶ
ಬಾಲಿವುಡ್ ಚೆಲುವೆ, 1950-60ರ ದಶಕದಲ್ಲಿ ಸ್ಟಾರ್ ನಟಿಯಾಗಿ ಖ್ಯಾತಿ ಪಡೆದಿದ್ದ ನಿಮ್ಮಿ(88ವರ್ಷ) ದೀರ್ಘಕಾಲದ ಅನಾರೋಗ್ಯದಿಂದ ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಮುಂಬಯಿ: ಬಾಲಿವುಡ್ ಚೆಲುವೆ, 1950-60ರ ದಶಕದಲ್ಲಿ ಸ್ಟಾರ್ ನಟಿಯಾಗಿ ಖ್ಯಾತಿ ಪಡೆದಿದ್ದ ನಿಮ್ಮಿ(88ವರ್ಷ) ದೀರ್ಘಕಾಲದ ಅನಾರೋಗ್ಯದಿಂದ ಬುಧವಾರ ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಆಯಾನ್, ಬರಾಸತ್ ಹಾಗೂ ದೀದಾರ್ ನಂತಹ ಹಿಂದಿ ಸಿನಿಮಾದಲ್ಲಿ ನಟಿಸುವ ಮೂಲಕ ಸ್ಟಾರ್ ಪಟ್ಟ ಪಡೆದಿದ್ದರು.
ಉಸಿರಾಟದ ತೊಂದರೆಯಿಂದ ನಿಮ್ಮಿ ಅವರನ್ನು ಜುಹೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಗುರುವಾರ ಮಧ್ಯಾಹ್ನ ಮುಂಬೈನ ರೇಯಾ ರಸ್ತೆಯಲ್ಲಿರುವ ಶವಾಗಾರದಲ್ಲಿ ಎಲ್ಲಾ ವಿಧಿವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ವರದಿ ವಿವರಿಸಿದೆ.
ನಟಿ ಮೂಲ ಹೆಸರು ನವಾಬ್ ಬಾನೂ ಬಾಲಿವುಡ್ ನಲ್ಲಿ ದಂತಕಥೆ ಎಂದು ಹೆಸರಾಗಿದ್ದ ರಾಜ್ ಕಪೂರ್ ಅವರು “ನಿಮ್ಮಿ” ಎಂದು ಮರು ನಾಮಕರಣ ಮಾಡಿದ್ದರು. ನಿಮ್ಮಿ ಮೊದಲ ಸಿನಿಮಾ ಅಂದಾಜ್.
1949ರಲ್ಲಿ ಬಿಡುಗಡೆಯಾಗಿದ್ದ ಬರಾಸತ್ ಸಿನಿಮಾದಲ್ಲಿ ನಿಮ್ಮಿ ಹೀರೋಯಿನ್ ಆಗಿದ್ದರು. ಈ ಸಿನಿಮಾದಲ್ಲಿನ ಮೂರು ಹಾಡುಗಳು ಅತ್ಯಂತ ಜನಪ್ರಿಯವಾಗಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


