ಗಾಯಕಿ ಕನಿಕಾ ಕಪೂರ್ ಸ್ನೇಹಿತನಿಗಾಗಿ ಪೊಲೀಸರ ಶೋಧ
ಬಾಲಿವುಡ್ನ ಹೆಸರಾಂತ ಗಾಯಕಿ ಕನಿಕಾ ಕಪೂರ್ ಅವರ ಬೇಜವಾಬ್ದಾರಿತನದಿಂದ ಹಲವಾರು ಖ್ಯಾನಮರು ಕೊರೋನಾ ಭೀತಿ ಎದುರಿಸುತ್ತಿದ್ದಾರೆ. ಈ ಬೆನ್ನಲ್ಲೇ ಲಖನೌ ಪೊಲೀಸರು ಕನಿಕಾ ಕಪೂರ್ ಅವರ ಸ್ನೇಹಿತರಾದ ಓಜಸ್ ದೇಸಾಯಿ ಅವರಿಗಾಗಿ ಹುಡುಕುತ್ತಿದ್ದಾರೆ.

ಲಖನೌ: ಬಾಲಿವುಡ್ನ ಹೆಸರಾಂತ ಗಾಯಕಿ ಕನಿಕಾ ಕಪೂರ್ ಅವರ ಬೇಜವಾಬ್ದಾರಿತನದಿಂದ ಹಲವಾರು ಖ್ಯಾನಮರು ಕೊರೋನಾ ಭೀತಿ ಎದುರಿಸುತ್ತಿದ್ದಾರೆ. ಈ ಬೆನ್ನಲ್ಲೇ ಲಖನೌ ಪೊಲೀಸರು ಕನಿಕಾ ಕಪೂರ್ ಅವರ ಸ್ನೇಹಿತರಾದ ಓಜಸ್ ದೇಸಾಯಿ ಅವರಿಗಾಗಿ ಹುಡುಕುತ್ತಿದ್ದಾರೆ.
ವಿದೇಶದಿಂದ ಆಗಮಿಸಿದ್ದ ಕನಿಕಾ ಕಪೂರ್ ಸ್ವಯಂ ನಿರ್ಬಂಧ ವಿಧಿಸಿಕೊಳ್ಳುವ ಬದಲು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗಿಯಾಗಿದ್ದರು. ನಂತರ ಕನಿಕಾಗೆ ಕೊರೋನಾ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಈ ಬೆನ್ನಲ್ಲೆ ಎಚ್ಚೆತ್ತುಕೊಂಡ ಪೊಲೀಸರು ಕನಿಕಾ ಕಪೂರ್ ಜೊತೆಗೆ, ಸಂವಹನ ನಡೆಸಿದ್ದ 260 ಮಂದಿಯನ್ನು ಪತ್ತೆ ಮಾಡಿದ್ದಾರೆ. ಆದರೆ ಕನಿಕಾ ಕಪೂರ್ ಜೊತೆಗೆ ಹೊಟೆಲ್ ತಾಜ್ ನಲ್ಲಿ ಕಾಣಿಸಿಕೊಂಡು ಮಾ.16 ರಿಂದ ನಾಪತ್ತೆಯಾಗಿರುವ, ಮುಂಬೈ ಮೂಲದ ಉದ್ಯಮಿ ಓಜಸ್ ದೇಸಾಯಿಯನ್ನು ಈವರೆಗೂ ಪೊಲೀಸರು ಪತ್ತೆ ಮಾಡಲು ಸಾಧ್ಯವಾಗಿಲ್ಲ.
ಈ ಬಗ್ಗೆ ಮುಖ್ಯ ವೈದ್ಯಾಧಿಕಾರಿ ಡಾ.ನರೇಂದ್ರ ಅಗರ್ವಾಲ್ ಮಾಹಿತಿ ನೀಡಿದ್ದು ದೇಸಾಯಿ ಕುರಿತು ಮಾಹಿತಿ ಪತ್ತೆ ಮಾಡುತ್ತಿದ್ದೇವೆ ಮುಂಬೈ ನಲ್ಲಿ ಆತನ ನಿಖರ ವಿಳಾಸ ಅಥವಾ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಹೇಳ್ದಿದಾರೆ. ಇನ್ನು ದೇಸಾಯಿ ಕುರಿತು ಪ್ರಶ್ನೆ ಮಾಡೋಣವೆಂದರೆ ಗಾಯಕಿ ಕನಿಕಾ ಕಪೂರ್ ಕ್ವಾರಂಟೈನ್ ನಲ್ಲಿದ್ದಾರೆ.
ಇನ್ನು ಕನಿಕಾ ಜೊತೆ ಮಾತನಾಡಿದ್ದ ಹೊಟೆಲ್ ತಾಜ್ ನ 11 ಉದ್ಯೋಗಿಗಳನ್ನೂ ಸಹ ಸ್ವಯಂ ನಿರ್ಬಂಧ ವಿಧಿಸಿಕೊಳ್ಳುವಂತೆ ಸೂಚಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


